

ಮಹಾರಾಷ್ಟ್ರ ಸೈಬರ್ ಕ್ರೈಂ ಡಿಪಾರ್ಟ್ಮೆಂಟ್ ಹೊಸದೊಂದು ಆದೇಶ ಹೊರಡಿಸಿದೆ. ಆನ್ಲೈನ್ನಲ್ಲಿ ಲಭ್ಯ ಇರುವ ಒಂದಷ್ಟು ಸಿನಿಮಾಗಳನ್ನು ಮತ್ತು ವೆಬ್ ಸಿರೀಸ್ಗಳನ್ನು ನೋಡುವುದರಿಂದ ಸೈಬರ್ ಕಳ್ಳರು ನಿಮ್ಮ ಖಾತೆಗೆ ಕನ್ನ ಹಾಕಲಿದ್ದಾರೆ ಎಂದು ಎಚ್ಚರಿಸಿದೆ. ಈಗಾಗಲೇ ಅದಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿದ್ದೇ ತಡ, ಗಾಬರಿಯಲ್ಲಿಯೇ ಮಾಹಿತಿಯನ್ನು ಬಹಿರಂಗಪಡಿಸಿದೆ. ಹಾಗಾದರೆ ಆ ಹತ್ತು ಸಿನಿಮಾ ಮತ್ತು ವೆಬ್ಸಿರೀಸ್ಗಳು ಯಾವ್ಯಾವು?
ಇದನ್ನೂ ಓದಿ: ಕಾಮೇಗೌಡರ ಕುರಿತು ಚಿತ್ರ ಮಾಡ್ತಿದ್ದಾರೆ ದಯಾಳ್ …
ಮರ್ದಾನಿ, ಜೂತಾಪಿಯಾ, ಜವಾನಿ ದಿವಾನಿ, ಚಪಾಕ್, ಲವ್ ಆಜ್ ಕಲ್, ಇನ್ಸೆಪ್ಷನ್, ಬಾಹುಬಲಿ, ರಜನಿಗಂಧ, ಗಲ್ಲಿ ಬಾಯ್, ಬಾಲಾ ಇವಿಷ್ಟು ಸಿನಿಮಾಗಳಾದರೆ, ದಿಲ್ಲಿ ಕ್ರೈಂ, ಬ್ರೊಕ್ಲಿನ್ ನೈನ್ ನೈನ್, ಪಂಚಾಯತ್, ಅಕೂರಿ, ಫೌದಾ, ಘೂಲ್, ಮೈಂಡ್ ಹಂಟರ್, ನಾರ್ಕೋಸ್, ದೇವ್ಲೋಕ್, ಲೊಸ್ಟ್ ವೆಬ್ ಸಿರೀಸ್ಗಳಾಗಿವೆ.
ಫ್ರೀ ಸಿನಿಮಾ ನೆಪದಲ್ಲಿ ವಾಟ್ಸ್ಅಪ್ ಮೂಲಕ ಯಾವುದೇ ಲಿಂಕ್ಗಳು ಮೊಬೈಲ್ಗೆ ಬಂದರೆ, ಅದನ್ನು ಯಾವುದೇ ಕಾರಣಕ್ಕೂ ಓಪನ್ ಮಾಡಲೇಬೇಡಿ ಎಂದು ಸೈಬರ್ ಕ್ರೈಂ ಇಲಾಖೆ ತಿಳಿಸಿದೆ. ಸೈಬರ್ಗೆ ಸಂಬಂಧಿಸಿದಂತೆ ಲಾಕ್ಡೌನ್ ಅವಧಿಯಲ್ಲಿ 512 ಪ್ರಕರಣಗಳು ದಾಖಲಾಗಿವೆ. ಆ ಪೈಕಿ 273 ಜನರನ್ನು ಬಂಧಿಸಲಾಗಿದೆ. ಅದರಲ್ಲಿ 196 ಮಂದಿಯನ್ನು ಮೊಬೈಲ್ ವಾಟ್ಸ್ಅಪ್ಗಳಿಗೆ ಅಫೆನ್ಸಿವ್ ಮೆಸೆಜ್ ಕಳುಹಿಸಿ ಸಿಕ್ಕಿಬಿದ್ದಿದ್ದಾರೆ. ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡಿದ್ದಕ್ಕೆ 213 ಪ್ರಕರಣಗಳು ದಾಖಲಾಗಿವೆ. ಟಿಕ್ಟಾಕ್ನಲ್ಲಿ ಹಂಚಿಕೊಂಡಿದ್ದಕ್ಕೆ 28 ಪ್ರಕರಣ, 11 ಪ್ರಕರಣ ಟ್ವಿಟರ್ನಲ್ಲಿ ಶೇರ್ ಮಾಡಿದ್ದಕ್ಕೆ ದಾಖಲಾಗಿವೆ.
ಇದನ್ನೂ ಓದಿ: ಆಕೆ ಸೂಪರ್ಸ್ಟಾರ್; ಆತ ಸಾಮಾನ್ಯ ನಿರೂಪಕ …
ಫ್ರೀ ಡಾಟಾ, ನೆಟ್ಫ್ಲಿಕ್ಸ್ ನೋಂದಣಿ ಸೇರಿ ಫ್ರೀ ಸಿನಿಮಾ ವೀಕ್ಷಣೆ ರೀತಿಯ ಹಲವು ಆಮೀಷಗಳನ್ನು ವಾಟ್ಸ್ ಅಪ್ ಮೂಲಕ ಕಳುಹಿಸಿ ಓಟಿಪಿ ಮತ್ತು ಪಾಸವರ್ಡ್ ತಿಳಿದುಕೊಳ್ಳಲು ಯತ್ನಿಸುತ್ತಾರೆ. ಹಾಗಾಗಿ ಯಾವುದೇ ಕಾರಣಕ್ಕೆ ಅದಕ್ಕೆ ಎಡೆ ಮಾಡಿಕೊಡಬೇಡಿ ಎಂದು ಸೈಬರ್ ಕ್ರೈಂ ಇಲಾಕೆ ಕಟ್ಟುನಿಟ್ಟಾಗಿ ಹೇಳಿದೆ. (ಏಜೆನ್ಸೀಸ್)