

ಕಾಸರಗೋಡು: ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ರಜತ ಮಹೋತ್ಸವ ಹಾಗೂ ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನ ನಗರದ ಪಾರೆಕಟ್ಟೆ ಕನ್ನಡ ಗ್ರಾಮದಲಿ ಜರುಗಿತು.
ಸಮ್ಮೇಳನದ ಸರ್ವಾಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಮಾತನಾಡಿ, ಗಡಿನಾಡಿನಲ್ಲಿ ಕನ್ನಡ ಭಾಷೆಯ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಇಲ್ಲಿನ ಕವಿ, ಸಾಹಿತಿ, ಬರಹಗಾರರು, ಪತ್ರಕರ್ತರು, ಕನ್ನಡ ಸಂಘಟನೆಗಳ ನಿರಂತರ ಕಾರ್ಯ ಶ್ಲಾಘನೀಯ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವುದು ಕೇವಲ ಬರಹಗಳಿಗೆ ಸೀಮಿತವಾಗಿರದೆ ಕಲೆ, ಸಂಗೀತ, ನೃತ್ಯ, ಯಕ್ಷಗಾನ, ನಾಟಕ, ಜಾನಪದ ಪ್ರದರ್ಶನ ಇವುಗಳನ್ನು ಅಭಿವ್ಯಕ್ತಿಗೊಳಿಸುವ ಕಲಾಗಾರರಿಗೂ ಮನ್ನಣೆ ಸಲ್ಲಿಸಬೇಕಾಗುತ್ತದೆ ಎಂದರು.
ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ಪ್ರಧಾನ ಸಂಚಾಲಕ ಡಾ.ಎಂ.ಜಿ. ಆರ್.ಅರಸ್ ಸಮ್ಮೇಳನ ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವರಾಮ ಕಾಸರಗೋಡು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕಾಸರಗೋಡು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ.ಹರಿಕಿರಣ್ ಬಂಗೇರ, ವಿ.ಕೆ.ಎಂ. ಕಲಾವಿದರು ಬೆಂಗಳೂರು ಪ್ರಧಾನ ಕಾರ್ಯದರ್ಶಿ ಸಿ. ಎಂ.ತಿಮ್ಮಯ್ಯ, ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಲ್.ಎಸ್.ಶಾಸ್ತ್ರಿ, ಡಾ.ರತ್ನ ಹಾಲಪ್ಪ ಗೌಡ ಮೈಸೂರು, ಆಯಿಷಾ ಎ.ಎ.ಪೆರ್ಲ, ಡಾ.ಕೆ.ಸಿ.ಬಲ್ಲಾಳ್ ಬೆಂಗಳೂರು, ಸೀತಾಲಕ್ಷ್ಮೀ ವರ್ಮ ವಿಟ್ಲ ಅರಮನೆ, ದಯಾಸಾಗರ ಚೌಟ ಮುಂಬೈ, ಜಯರಾಜ ಶೆಟ್ಟಿ ಚಾರ್ಲ ಮಂಜೇಶ್ವರ, ಅಪ್ಪಾಸಾಹೇಬ ಅಲಿಬಾದಿ ಅಥಣಿ, ಹಮೀದ್ ಹಸನ್ ಮಾಡೂರು, ಡಾ.ಕೆ.ಎನ್ ವೆಂಕಟರಮಣ ಹೊಳ್ಳ, ಶ್ರೀಕೃಷ್ಣಯ್ಯ ಅನಂತಪುರ, ಡಾ.ಸುರೇಶ್ ನೆಗಳಗುಳಿ, ಮಂಗಳೂರು, ಕವಿ, ಸಾಹಿತಿ, ಗುಣಾಜೆ ರಾಮಚಂದ್ರ ಭಟ್, ಶೋಭಾ ಬನಶಂಕರಿ ಬೆಳಗಾವಿ, ಗೋಪಾಲಕೃಷ್ಣ ಶಾಸ್ತ್ರಿ, ಸುಭಾಷ್ ಪೆರ್ಲ, ಸುಬ್ಬಣ್ಣ ಶೆಟ್ಟಿ ಕೂಡ್ಲು, ಅಶ್ವಿನಿ ಕೋಡಿಬೈಲ್ ಸುಳ್ಯ, ಶಾರದಾ ಬಿ., ಕೌನ್ಸಿಲರ್ ವರಪ್ರಸಾದ್ ಕೋಟೆಕಣಿ, ಮಹೇಶ್ ಆರ್.ನಾಯಕ್, ಆನಂದ ರೈ ಅಡ್ಕಸ್ಥಳ, ಶಿವಪ್ರಸಾದ ಕೊಕ್ಕಡ, ವೀರಭದ್ರೇಗೌಡ ಮೈಸೂರು, ಪುರುಷೋತ್ತಮ ಎಂ.ನಾಯ್ಕ, ಕೆ.ಗುರುಪ್ರಸಾದ ಕೋಟೆಕಣಿ, ಶ್ರೀಕಾಂತ ಕಾಸರಗೋಡು, ಜಯ ಮಣಿಯಂಪಾರೆ ಉಪಸ್ಥಿತರಿದ್ದರು. ಕೇರಳ ಮತ್ತು ಕರ್ನಾಟಕದಿಂದ ಸುಮಾರು 400 ಕವಿ, ಸಾಹಿತಿ, ಬರಹಗಾರರು, ಲೇಖಕರು, ಮಾಧ್ಯಮದವರು, ಕಲಾವಿದರು ಭಾಗವಹಿಸಿದ್ದರು.