Chitra Kundapura| ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ ಇತ್ತೀಚೆಗೆ ಪ್ರೀತಿಸಿದ ಹುಡುಗನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ಆಪ್ತರನ್ನೆಲ್ಲಾ ಚೈತ್ರಾ ಕುಂದಾಪುರ ಮದುವೆಗೆ ಆಹ್ವಾನಿಸಿದ್ದರು. ಈ ಕುರಿತ ವಿಡಿಯೋಗಳೆಲ್ಲವೂ ವೈರಲ್ ಆಗಿದ್ದವು. ವಿಪರ್ಯಾಸ ಎಂದರೆ ಸ್ವಂತ ತಂದೆಯನ್ನೇ ಚೈತ್ರಾ ಕುಂದಾಪುರ ಮದುವೆಗೆ ಕರೆದಿಲ್ಲವೆಂದು ಅವರ ತಂದೆ ಬಾಲಕೃಷ್ಣ ನಾಯ್ಕ್ ಸಾಲು ಸಾಲು ಆರೋಪವನ್ನು ಮಾಡಿದ್ದರು. ಆದರೆ ಇದೀಗ ತಂದೆಯ ಆರೋಪಕ್ಕೆ ಚೈತ್ರಾ ಕೋಪದಿಂದ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ವಕ್ಫ್ ತಿದ್ದುಪಡಿ ಕಾಯ್ದೆ; ಮಧ್ಯಂತರ ಪರಿಹಾರ ಅರ್ಜಿ ವಿಚಾರಣೆ ಮೇ 20 ಕ್ಕೆ ಮುಂದೂಡಿಕೆ| Waqf act
ಚೈತ್ರಾ ಮದುವೆಗೆ ನನ್ನನ್ನು ಕರೆದಿಲ್ಲ, ಅವಳು ಮೋಸ ಮಾಡಿದ್ದಾಳೆ, ನನ್ನನ್ನು ನೋಡಿಕೊಳ್ಳುತ್ತಿಲ್ಲ ಎಂದೆಲ್ಲ ಅವರ ತಂದೆ ಸಾಲು ಸಾಲು ಆರೋಪವನ್ನು ಮಾಡಿದ್ದರು. ಇದೀಗ ತಂದೆಯ ಆರೋಪಕ್ಕೆ ಚೈತ್ರಾ ಕುಂದಾಪುರ ಉತ್ತರ ನೀಡಿದ್ದಾರೆ.
ಚೈತ್ರಾ ಕುಂದಾಪುರ ಹೇಳಿದ್ದೇನು?
ತಮ್ಮ ನೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿರುವ ಚೈತ್ರಾ, ಕುಡುಕ ತಂದೆಯ ಚಿತ್ರ ಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು, ಎಂಥ ಮಕ್ಕಳಿಗೂ ಕುಡುಕ ತಂದೆ ಸಿಗಬಾರದು, ಎರಡು ಕ್ವಾಟರ್ ನಾನು ಕೊಟ್ಟರೆ ನನ್ನ ಮಕ್ಕಳು ದೇವರು ಎನ್ನುತ್ತಾರೆ. ಹೀಗೆನ್ನುವರ ಮಾತಿಗೆ ಬೆಲೆ ಕೊಡುವವರು ಮೂರ್ಖರಾಗ್ತಾರೆ ಎಂದು ಬರೆದಿದ್ದಾರೆ.
ಇದನ್ನೂ ಓದಿ: ಪುಲ್ವಾಮಾದಲ್ಲಿ ಗುಂಡಿನ ಚಕಮಕಿ; ಮೂವರು ಭಯೋತ್ಪಾದಕರು ಬಲಿ| Terrorists encounter
ಹೆತ್ತ ಮಕ್ಕಳನ್ನ ಸಾಕಲಿಲ್ಲ, ಫೀಸು ಕಟ್ಟಿ ಓದಿಸಲಿಲ್ಲ, ಹೆಣ್ಣು ಮಕ್ಕಳ ಜವಾಬ್ದಾರಿ ಹೊತ್ತು ಮದುವೆಯೂ ಮಾಡಲಿಲ್ಲ, ಕಟ್ಟಿಕೊಂಡ ಹೆಂಡತಿದೆ ಹೊಡೆದು ಚಿತ್ರ ಹಿಂದೆ ಮಾಡಿದ್ದು ಬಿಟ್ರೆ ಬೇರೆ ಏನೂ ಇಲ್ಲಾ, ಎಲ್ಲಾ ಮುಗಿದ ಮೇಲೆ ಅಪವಾದ ಹಾಕೋಕೆ ಮಾತ್ರ ತಂದೆ ಎನ್ನುವ ಹೆಸರು ವಾವ್ ಎಂದು ಬರೆದುಕೊಂಡಿದ್ದಾರೆ.
ಪುಲ್ವಾಮಾದಲ್ಲಿ ಗುಂಡಿನ ಚಕಮಕಿ; ಮೂವರು ಭಯೋತ್ಪಾದಕರು ಬಲಿ| Terrorists encounter