Allu Arjun ಬಂಧನ; ಸ್ಟೈಲಿಶ್​ ಸ್ಟಾರ್​ ಮನೆಗೆ ಓಡೋಡಿ ಬಂದ ಮೆಗಾಸ್ಟಾರ್​​

Untitled design - 2024-12-13T164032.906
Published on

ಹೈದರಾಬಾದ್​: ಪುಷ್ಪ 2 ರಿಲೀಸ್​ ಆದ ದಿನ ಸಂಧ್ಯಾ ಥಿಯೇಟರ್​ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್(Allu Arjun) ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವುದು ಗೊತ್ತೆ ಇದೆ. ಈ ವಿಷರಯ ತಿಳಿದ ಕೂಡಲೇ ಅಲ್ಲು ಅರ್ಜುನ್​ ಭೇಟಿಗೆ ಟಾಲಿವುಡ್​​ ಮೆಗಾ ಸ್ಟಾರ್​ ಓಡೋಡಿ ಬಂದಿದ್ದಾರೆ.

ಹೌದು ಅಲ್ಲು ಅರ್ಜುನ್​​ ಬಂಧನದ ವಿಷಯ ತಿಳಿಯುತ್ತಿದ್ದಂತೆ ಮೆಗಾಸ್ಟಾರ್ ಚಿರಂಜೀವಿ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಹೋಗಿದ್ದರು ಆದರೆ ಈಗಾಗಲೇ ಜನರು ಜಮಾಯಿಸಿದ್ದಾರೆ. ಟ್ರಾಫಿಕ್ ಸಮಸ್ಯೆ ಹಾಗೂ ನಟನನ್ನು ನೋಡಲು ಇನ್ನೂ ಹೆಚ್ಚಿನ ಜನರು ಬರುವ ಸಂಭವವಿದೆ. ಆದ್ದರಿಂದ ಪೊಲೀಸ್ ಠಾಣೆ ಬಳಿ ಬರದಂತೆ ಚಿರಂಜೀವಿಗೆ ಪೊಲೀಸರು ಮನವಿ ಮಾಡಿದ್ದಾರೆ. ಈ ಅನುಕ್ರಮದಲ್ಲಿ ಚಿರಂಜೀವಿ ಪೊಲೀಸ್​​ ಠಾಣೆಗೆ ಬಾರದೆ ಅಲ್ಲು ಅರ್ಜುನ್ ಮನೆಗೆ ತೆರಳಿದರು.

ವಿಶ್ವಂಭರ ಸಿನಿಮಾದ ಶೂಟಿಂಗ್​​​ನಲ್ಲಿದ್ದ ಚಿರುಗೆ ಈ ವಿಷಯ ತಿಳಿದಾಗ ಶೂಟಿಂಗ್ ಮಧ್ಯದಲ್ಲೇ ಬಿಟ್ಟು ಟಾಲಿವುಡ್​​ ಐಕಾನ್​​ ಸ್ಟಾರ್​​ ಮನೆಗೆ ಬಂದಿರುವುದು ಬಯಲಾಗಿದೆ. ಚಿರಂಜೀವಿ ಜತೆಗೆ ಅವರ ಪತ್ನಿ ಸುರೇಖಾ ಕೂಡ ಬಂದಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದೇ ತಿಂಗಳ 4ರಂದು ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಪುಷ್ಪ-2 ಪ್ರೀಮಿಯರ್ ಶೋ ವೇಳೆ ಅಲ್ಲು ಅರ್ಜುನ್ ಅಲ್ಲಿಗೆ ಹೋಗಿದ್ದರು. ಆ ಕ್ಷಣದಲ್ಲಿ ಅಭಿಮಾನಿಗಳು ಮುಗಿಬಿದ್ದರು. ಅಲ್ಲಿ ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಮೃತಪಟ್ಟಿದ್ದರು. ಅಲ್ಲದೆ ಅವರ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ ಕುರಿತು ಚಿಕ್ಕಡಪಲ್ಲಿ ಪೊಲೀಸರು ಅಲ್ಲು ಅರ್ಜುನ್, ಸಿನಿಮಾ ಘಟಕ ಹಾಗೂ ಥಿಯೇಟರ್ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್ ವಿರುದ್ಧ BNS 118 (1) ಮತ್ತು BNS 105 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲು ಅರ್ಜುನ್ ವಿರುದ್ಧ ಸೆಕ್ಷನ್ 105ರ ಅಡಿಯಲ್ಲಿ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net