

ಹೈದರಾಬಾದ್: ಪುಷ್ಪ 2 ದಿ ರೂಲ್‌ನ ಪ್ರಥಮ ಪ್ರದರ್ಶನದ ವೇಳೆ ಸಂಧ್ಯಾ ಥಿಯೇಟರ್ ಬಳಿ ಕಾಲ್ಕುಳಿತದಿಂದ ಅಭಿಮಾನಿಯೊಬ್ಬರು ಮೃತಪಟ್ಟಿರುವುದು ಗೊತ್ತೆ ಇದೆ. ಸದ್ಯ ಇಂದು ಶುಕ್ರವಾರ(ಡಿಸೆಂಬರ್ 13) ಚಿಕ್ಕಡಪಲ್ಲಿ ಪೊಲೀಸರು ಸ್ಟ್ರೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮನೆಗೆ ತೆರಳಿ ವಶಕ್ಕೆ ಪಡೆದಿದ್ದಾರೆ.
ಆದರೆ ಅಲ್ಲು ಅರ್ಜುನ್‌ನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಾಗ ಎರಡು ಬೆಳವಣಿಗೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಲ್ಲು ಅರ್ಜುನ್ ಜತೆಗೆ ಅವರ ತಂದೆ ಅಲ್ಲು ಅರವಿಂದ್ ಕೂಡ ಪೊಲೀಸ್ ವಾಹನ ಹತ್ತಿದ್ದಾರೆ. ಆದರೆ ಅಲ್ಲು ಅರ್ಜುನ್ ಏನಾಗಿದೆಯೋ ಒಳ್ಳೆಯದು.. ಕೆಟ್ಟದ್ದು.. ಎಲ್ಲವೂ ನನ್ನದೆ ಎಂದು ತಂದೆಗೆ ಹೇಳಿ ಪೊಲೀಸ್ ವಾಹನದಿಂದ ಕೆಳಗಿಳಿಸಿದ್ದಾರೆ ಎಂದೂ ಹೇಳಲಾಗಿದೆ.
ಪತಿಯ ಬಂಧನದ ಸಮಯದಲ್ಲಿ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಕಣ್ಣೀರು ಇಟ್ಟಿದ್ದಾರೆ. ಪೊಲೀಸರು ಮನೆಗೆ ಬಂದಾಗ ಸ್ನೇಹಾರೆಡ್ಡಿ ಉದ್ವಿಗ್ನಗೊಂಡರು. ಆಗ ಅಲ್ಲು ಅರ್ಜುನ್ ಪತ್ನಿಯ ಭುಜ ತಟ್ಟಿ ಧೈರ್ಯ ನೀಡಿದ್ದಾರೆ. ಜತೆಗೆ ಸ್ನೇಹಾ ಅವರಿಗೆ ಮುತ್ತಿಟ್ಟು ಅಳದಂತೆ ಸೂಚಿಸಿದ್ದಾರೆ. ಬಳಿಕ ಪೊಲೀಸರೊಂದಿಗೆ ಚಿಕ್ಕಡಪಲ್ಲಿ ಪಿಎಸ್‌ಗೆ ತೆರಳಿದರು. ಅಲ್ಲು ಅರ್ಜುನ್ ಪತ್ನಿಗೆ ಧೈರ್ಯ ನೀಡ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದೇ ತಿಂಗಳ 4ರಂದು ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಪುಷ್ಪ-2 ಪ್ರೀಮಿಯರ್ ಶೋ ವೇಳೆ ಅಲ್ಲು ಅರ್ಜುನ್ ಅಲ್ಲಿಗೆ ಹೋಗಿದ್ದರು. ಆ ಕ್ಷಣದಲ್ಲಿ ಅಭಿಮಾನಿಗಳು ಮುಗಿಬಿದ್ದರು. ಅಲ್ಲಿ ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಮೃತಪಟ್ಟಿದ್ದರು. ಅಲ್ಲದೆ ಅವರ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಕುರಿತು ಚಿಕ್ಕಡಪಲ್ಲಿ ಪೊಲೀಸರು ಅಲ್ಲು ಅರ್ಜುನ್, ಸಿನಿಮಾ ಘಟಕ ಹಾಗೂ ಥಿಯೇಟರ್ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್ ವಿರುದ್ಧ BNS 118 (1) ಮತ್ತು BNS 105 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲು ಅರ್ಜುನ್ ವಿರುದ್ಧ ಸೆಕ್ಷನ್ 105ರ ಅಡಿಯಲ್ಲಿ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ.(ಏಜೆನ್ಸೀಸ್)