More

    ‘ವೇದಾಳಂ’ ರೀಮೇಕ್​ನಲ್ಲಿ ನಟಿಸಲು 60 ಕೋಟಿ ಪಡೆದ ಮೆಗಾಸ್ಟಾರ್​

    ಹೈದರಾಬಾದ್​: ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರಿಂದ ಸ್ವಲ್ಪ ಕಾಲ ಚಿತ್ರರಂಗದಿಂದ ದೂರವಿದ್ದ ಚಿರಂಜೀವಿ, ಒಂದು ದೊಡ್ಡ ಗ್ಯಾಪ್​ನ ನಂತರ ‘ಖೈದಿ ನಂಬರ್​ 150’ ಚಿತ್ರದ ಮೂಲಕ ವಾಪಸ್ಸಾದರು. ಆ ಚಿತ್ರಕ್ಕೆ ಪಡೆದಿದ್ದ ಸಂಭಾವನೆಯ ಡಬ್ಬಲ್​ ಸಂಭಾವನೆಯನ್ನು ಹೊಸ ಚಿತ್ರವೊಂದಕ್ಕೆ ಪಡೆಯುತ್ತಿದ್ದಾರೆ.

    ಇದನ್ನೂ ಓದಿ: ಸಿನಿಮಾ ತೆರೆ ಕಾಣಲೇಬೇಕು … ಚಿತ್ರಮಂದಿರಗಳು ವಿಜೃಂಭಿಸಲೇ ಬೇಕು …

    ‘ಖೈದಿ ನಂಬರ್​ 150’ ಚಿತ್ರಕ್ಕೆ 30 ಕೋಟಿ ಸಂಭಾವನೆಯನ್ನು ಪಡೆದಿದ್ದ ಚಿರಂಜೀವಿ, ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ನಟಿಸುವುದಕ್ಕೆ 45 ಕೋಟಿ ಸಂಭಾವನೆಯನ್ನು ಪಡೆದಿದ್ದರು. ಈ ಎರಡೂ ಚಿತ್ರಗಳನ್ನು ನಿರ್ಮಿಸಿದ್ದು ಅವರ ಮಗ ರಾಮ್​ಚರಣ್​ ತೇಜ. ಇನ್ನು ಚಿರಂಜೀವಿ ಸದ್ಯ ನಟಿಸುತ್ತಿರುವ ‘ಆಚಾರ್ಯ’ ಚಿತ್ರಕ್ಕೆ 50 ಕೋಟಿ ಸಂಭಾವನೆಯನ್ನು ಪಡೆದಿದ್ದಾರಂತೆ. ಈ ಚಿತ್ರವನ್ನು ರಾಮ್​ಚರಣ್​ ತೇಜ ಮತ್ತು ನಿರಂಜನ್​ ರೆಡ್ಡಿ ನಿರ್ಮಿಸುತ್ತಿದ್ದಾರೆ.

    ಇದಲ್ಲದೆ ತಮಿಳಿನ ‘ವೇದಾಳಂ’ನ ತೆಲುಗು ರೀಮೇಕ್​ನಲ್ಲಿ ನಟಿಸುತ್ತಿರುವ ಚಿರಂಜೀವಿ, ಆ ಚಿತ್ರದಲ್ಲಿ ನಟಿಸುವುದಕ್ಕೆ 60 ಕೋಟಿ ಸಂಭಾವನೆ ಕೇಳಿದ್ದಾರೆ ಎಂದು ಹೇಳಲಾಗಿದೆ. ಅಲ್ಲಿಗೆ ನಾಲ್ಕೇ ಚಿತ್ರಗಳ ಅಂತರದಲ್ಲಿ ಚಿರಂಜೀವಿ ತಮ್ಮ ಸಂಭಾವನೆಯನ್ನು ಡಬ್ಬಲ್​ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಚಿತ್ರರಂಗದಲ್ಲಿ 40 ವರ್ಷ ಮುಗಿಸಿದ ಜಗ್ಗೇಶ್​

    ‘ವೇದಾಳಂ’ ಚಿತ್ರದ ತೆಲುಗಿನ ರೀಮೇಕ್​ನ್ನು ಅನಿಲ್​ ಸಂಕರ ನಿರ್ಮಿಸುತ್ತಿದ್ದು, ಮೆಹರ್​ ರಮೇಶ್​ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ಚಿರಂಜೀವಿ ಅವರ ಸೋದರಿಯ ಪಾತ್ರವನ್ನು ಕೀರ್ತಿ ಸುರೇಶ್​ ನಿರ್ವಹಿಸುತ್ತಿದ್ದಾರೆ. ಚಿತ್ರ ಮುಂದಿನ ವರ್ಷ ಪ್ರಾರಂಭವಾಗಲಿದೆ.

    ಹೊಸ ದಾಖಲೆ ಬರೆದ ವಿಜಯ್ ಅಭಿನಯದ ‘ಮಾಸ್ಟರ್​’ ಟೀಸರ್​ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts