More

    ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ

    ಶ್ರೀರಂಗಪಟ್ಟಣ: ಕೊಳಕು ಬಟ್ಟೆ ಧರಿಸಿದ್ದಾನೆಂಬ ಕಾರಣಕ್ಕೆ ಮೆಟ್ರೋ ರೈಲಿನಲ್ಲಿ ಪ್ರಯಾಣಕ್ಕೆ ನಿರಾಕರಿಸಿದ ಮೆಟ್ರೋ ಸಿಬ್ಬಂದಿ ವಿರುದ್ಧ ಆಡಳಿತ ಮಂಡಳಿ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಂಡ್ಯ ರಕ್ಷಣಾ ವೇದಿಕೆ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.

    ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಶಂಕರ್‌ಬಾಬು ನೇತೃತ್ವದಲ್ಲಿ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಜಮಾವಣೆಗೊಂಡ ಕಾರ್ಯಕರ್ತರು ತಮ್ಮ ಬಟ್ಟೆ ಹಾಗೂ ಮುಖಕ್ಕೆ ಮಣ್ಣಿನ ಬದಿ ಮೆತ್ತಿಕೊಳ್ಳುವ ಮೂಲಕ ಅನ್ನದಾತನಿಗೆ ಅವಮಾನಿಸಿದ ಕೃತ್ಯವನ್ನು ಖಂಡಿಸಿ ಮೆಟ್ರೋ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

    ಶಂಕರ್ ಬಾಬು ಮಾತನಾಡಿ, ರೈತನನ್ನು ಹೀನಾಯವಾಗಿ ನಡೆಸಿಕೊಂಡ ಮೆಟ್ರೋ ಸಿಬ್ಬಂದಿ ಹಾಗೂ ಅಂತಹ ಸೂಚನೆ ನೀಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮವಾಗಬೇಕು. ಮೆಟ್ರೋ ನಿಲ್ದಾಣ ಹಾಗೂ ರೈಲಿನಲ್ಲಿ ಕೆಲಸಕ್ಕೆ ಪಡೆದಿರುವ ಅನ್ಯ ರಾಜ್ಯದ ನೌಕರರ ಬದಲಿಗೆ ಕನ್ನಡಿಗರನ್ನು ನೇಮಿಸುವ ಮೂಲಕ ಇಂತಹ ಅಮಾನವೀಯ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು. ಇಲ್ಲವಾದಲ್ಲಿ ಮೆಟ್ರೋ ರೈಲಿನ ಸಂಚಾರಕ್ಕೆ ತಡೆವೊಡ್ಡಲಾಗುವುದು ಎಂದು ಎಚ್ಚರಿಕೆ ನೀಡಿ ಗ್ರೇಡ್-2 ತಹಸೀಲ್ದಾರ್ ಆದರ್ಶ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಗದೀಶ್ ಗೌಡ, ಜಿಲ್ಲಾ ಸಂಚಾಲಕ ಕುಮಾರ್, ಅಂಕಶೆಟ್ಟಿ, ಚಂದ್ರಶೇಖರ್, ಚಿರಂಜೀವಿ, ದರ್ಶನ್, ಛಾಯಾದೇವಿ ಇತರರು ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts