ಹೈದರಾಬಾದ್: ಕೇರಳದ ವಯನಾಡಿನಲ್ಲಿ ಹಿಂದೆಂದೂ ಕಂಡು ಕೇಳರಿಯದಂತಹ ಭೂಕುಸಿತ ಉಂಟಾಗಿದೆ. ಹಳ್ಳಿಗಳಿಗೆ ಹಳ್ಳಿಗಳೇ ನಾಮಾವಶೇಷವಾಗಿವೆ! ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಣ್ಣಿನಡಿಯಲ್ಲಿ ಇನ್ನೂ ಅದೆಷ್ಟು ಮಂದಿ ಹುದುಗಿದ್ದಾರೋ, ಗೊತ್ತಿಲ್ಲ. ಎಡೆಬಿಡದೇ ಧಾರಕಾರವಾಗಿ ಸುರಿಯುತ್ತಿರುವ ಮಳೆಯಲ್ಲೇ ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ಮಗ್ನವಾಗಿವೆ. ವಯನಾಡಿನ ಈ ಪರಿಸ್ಥಿತಿಗೆ ಈಗ ಸಲೆಬ್ರಿಟಿಗಳು ಕೂಡ ಕಣ್ಣೀರಾಗಿದ್ದಾರೆ.
ಇದನ್ನೂ ಓದಿ: ಸಿದ್ದುಗೆ ಕುರ್ಚಿ ಕಳೆದುಕೊಳ್ಳುವ ಭಯ, ಡಿಕೆಶಿಗೆ ಖಾಲಿ ಕುರ್ಚಿ ಮೇಲಿನ ಆಸೆಯಿಂದ ನಿದ್ರೆ ಬರ್ತಿಲ್ಲ: ವಿಜಯೇಂದ್ರ ವ್ಯಂಗ್ಯ
ಈ ಭೂಸಿತದಲ್ಲಿ 310ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ಟಾಲಿವುಡ್ನ ಮೆಗಾಸ್ಟಾರ್ ಮತ್ತು ಪ್ಯಾನ್ ಇಂಡಿಯಾ ಸ್ಟಾರ್ ರಾಮ್ ಚರಣ್ ಅವರು ವಯನಾಡಿನ ಭೂಕುಸಿತಕ್ಕೆ ಮರುಗಿದ್ದಾರೆ. “ಸಂತ್ರಸ್ತರಿಗೆ ಸಹಾಯವಾಗಲೆಂದು ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂಪಾಯಿಗಳನ್ನು ಚಿರಂಜೀವಿ ಮತ್ತು ಮತ್ತು ಅವರ ಪುತ್ರ ರಾಮ್ಚರಣ್ ನೀಡಿದ್ದಾರೆ.
Deeply distressed by the devastation and loss of hundreds of precious lives in Kerala due to nature’s fury in the last few days.
My heart goes out to the victims of the Wayanad tragedy. Charan and I together are contributing Rs 1 Crore to the Kerala CM Relief Fund as a token of…
— Chiranjeevi Konidela (@KChiruTweets) August 4, 2024
ದುರಂತದಿಂದ ಸಂಕಷ್ಟಕ್ಕೆ ಸಿಲುಕಿರುವವರ ನೆರವಿಗೆ ಧಾವಿಸಿರುವ ಚಿರಂಜೀವಿ ಅವರ ನಡೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೆ, ದಕ್ಷಿಣದ ಅನೇಕ ಸೂಪರ್‌ಸ್ಟಾರ್‌ಗಳು ಮುಂದೆ ಬಂದು ಕೇರಳದ ಜನರಿಗೆ ತಮ್ಮ ಸಹಾಯ ಹಸ್ತವನ್ನು ಚಾಚಿದ್ದಾರೆ. ನಯನತಾರಾ, ಮಮ್ಮುಟ್ಟಿ, ಮೋಹನ್ ಲಾಲ್, ದುಲ್ಕರ್ ಸಲ್ಮಾನ್, ಸೂರ್ಯ, ಫಹದ್ ಫಾಸಿಲ್ ನಂತರ ಈಗ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಕೂಡ ಸಂತ್ರಸ್ತರ ನೆರವಿಗೆ ಮುಂದಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಕೇರಳಕ್ಕೆ ಸಹಾಯವನ್ನು ಘೋಷಿಸಿದ್ರು.
ಪರಿಹಾರ ನಿಧಿಗೆ ಹಣ ನೀಡಿದ ಅಪ್ಪ-ಮಗ
ಚಿರಂಜೀವಿ ಕೇರಳ ಸಿಎಂ ನಿಧಿಗೆ ಪರಿಹಾರ ಘೋಷಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಪಕೃತಿಯ ವಿಕೋಪಕ್ಕೆ ನೂರಾರು ಜನರು ಪ್ರಾಣ ಕಳೆದಕೊಂಡಿದ್ದಕ್ಕೆ ತೀವ್ರ ನೋವು ಉಂಟಾಗಿದೆ. ವಯನಾಡು ದುರಂತದ ಸಂತ್ರಸ್ತರಿಗಾಗಿ ನನ್ನ ಮನ ಮಿಡಿಯುತ್ತಿದೆ. ಚರಣ್ ಮತ್ತು ನಾನು ಜೊತೆಯಾಗಿ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ಸಂತ್ರಸ್ತರ ಬೆಂಬಲಕ್ಕೆ ನಿಲ್ಲುತ್ತೇವೆ. ನೋವಿನಲ್ಲಿ ಇರುವ ಎಲ್ಲರಿಗಾಗಿ ನಾನು ಪ್ರಾರ್ಥಿಸುತ್ತೇನೆ’ ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.
ಜುಲೈ 30 ರಂದು ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರೀ ಮಳೆ ಮತ್ತು ಭೂಕುಸಿತ ಸಂಭವಿಸಿತ್ತು, ಇದರಿಂದಾಗಿ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಶುಕ್ರವಾರ ಸಂಜೆ, ಭೂಕುಸಿತದಲ್ಲಿ ಸತ್ತವರ ಸಂಖ್ಯೆ 310ಕ್ಕೆ ದಾಟಿದೆ ಮತ್ತು 200 ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಕರ್ನಾಟಕದ ಕ್ರೀಡಾ ಸಾಧಕರಿಗೆ ಸರ್ಕಾರಿ ಹುದ್ದೆಯ ನೇಮಕಾತಿ ಪತ್ರ ವಿತರಿಸಿದ ಸಿಎಂ ಸಿದ್ದರಾಮಯ್ಯ