ಬೊಗಳಿದ ಪಾಂಡಾ!; ವಿಡಿಯೋ ವೈರಲ್​ ಬಳಿಕ ಬಯಲಾದ ಸತ್ಯ ಹೀಗಿದೆ..

Untitled-design-2024-09-20T172131.216
Published on

ಬೀಜಿಂಗ್​: ಚೀನಾ ಮೃಗಾಲಯದಲ್ಲಿ ಪ್ರವಾಸಿಗರನ್ನೆಲ್ಲಾ ಆಕರ್ಷಿಸುತ್ತಿದ್ದ ಪಾಂಡಾಗಳ ಸತ್ಯ ಹೊರಬಿದ್ದಿದೆ. ಮೃಗಾಲಯದಲ್ಲಿನ ಎಡವಟ್ಟನ್ನು ಚೀನಾ ಮೊದಲ ಬಾರಿಗೆ ಒಪ್ಪಿಕೊಂಡಿದೆ. ಆರಂಭದಲ್ಲಿ ಸಮರ್ಥಿಸಿಕೊಂಡರು ಬಳಿಕ ತನ್ನ ವಾಸ್ತವಾಂಶವನ್ನು ಒಪ್ಪಿಕೊಂಡಿದೆ, ಇಷ್ಟೆಕ್ಕೆಲ್ಲಾ ಕಾರಣವಾಗಿದ್ದು ಆ ಒಂದು ವಿಡಿಯೋ.

ಸದ್ಯ ಸಾಮಾಜಿಕ ಜಾಲತಾಣಲದಲ್ಲಿ ವಿಡಿಯೋವೊಂದು ವೈರಲ್​ ಆಗುತ್ತಿದೆ. ವೈರಲ್​ ವಿಡಿಯೋದಲ್ಲಿ ಪಾಂಡಾಗಳನ್ನು ಕಾಣಬಹುದು. ದೇಶ-ವಿದೇಶದ ಪ್ರವಾಶಿಗರನ್ನು ಆಕರ್ಷಿಸುತ್ತಿದ್ದ ಪಾಂಡಾಗಳು. ಆದರೆ ಅಸಲಿಗೆ ಅವು ಪಾಂಡಾಗಳಲ್ಲ.. ಶ್ವಾನಗಳು. ವಿಡಿಯೋದಿಂದ ಬಯಲಾಯಿತು ಅಸಲಿ ಸಂಗತಿ. ವಿಡಿಯೋದಲ್ಲಿ ಒಂದೆಡೆ ಧಣಿವರಿದು ನಾಲಿಗೆಯನ್ನು ಹೊರಚಾಚುತ್ತಾ ಉಸಿರಾಡುತ್ತಾ ಬಂಡೆ ಮೇಲೆ ಕುಳಿತಿರುವ ಹಾಗೂ ಬೇಲಿಯಿಂದ ಸುತ್ತುವರಿದ ಪ್ರದೇಶದಿಂದ ಹೊರಬರುವ ಮತ್ತೊಂದು ಪಾಂಡಾದ ರೀತಿ ಇರುವ ಶ್ವಾನಗಳನ್ನು ಕಾಣಬಹುದಾಗಿದೆ.

ಅವುಗಳು ಬೊಗಳುವವರೆಗೂ ಅದನ್ನು ಪ್ರವಾಸಿಗರು ಪಾಂಡಾ ಎಂದಲೆ ನಂಬಿದ್ದರು. ಪಾಂಡಾದ ರೀತಿ ನಾಯಿಗಳಿಗೆ ಬಣ್ಣ ಬಳಿದು ಮೃಗಾಲಯದಲ್ಲಿ ಇರಿಸಲಾಗಿದೆ. ಶ್ವಾನದಂತೆ ಉಸಿರಾಡಲು ಹಾಗೂ ಬೊಗಳಲು ಪ್ರಾರಂಭಿಸಿದಾಗ ಸತ್ಯ ಹೊರಬಂದಿದೆ ಎಂದು ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್​ ಪೋಸ್ಟ್​ ವರದಿ ಮಾಡಿದೆ.

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಶಾನ್ವಿ ಮೃಗಾಲಯವು ಆರಂಭದಲ್ಲಿ ಇದು ಪಾಂಡಾ ನಾಯಿಗಳ ತಳಿ ಎಂದು ಹೇಳಿಕೊಂಡಿತ್ತು. ಬಳಿಕ ಶ್ವಾನಗಳಿಗೆ ಬಣ್ಣ ಬಳಿದಿರುವುದಾಗಿ ಒಪ್ಪಿಕೊಂಡಿದೆ. ಅವು ಮೂಲತಃ ಉತ್ತರ ಚೀನಾದಿಂದ ಬಂದ ಸ್ಪಿಟ್ಜ್ ತಳಿಯ ನಾಯಿ ಎಂದು ನ್ಯೂಯಾರ್ಕ್ ಪೋಸ್ಟ್ ಹೇಳಿದೆ. ಚೀನಾದ ಕುಚೆಷ್ಟೆ ಬುದ್ದಿ ಸಾಕ್ಷಿಸಮೇತವಾಗಿ ಮತ್ತೊಮ್ಮೆ ಬಹಿರಂಗವಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net