ಪ್ರಧಾನಿಯಿಂದ ಸಿಜೆಐವರೆಗೆ ವ್ಯಾಪಿಸಿದೆ ಚೀನಿ ಬೇಹು; ಸಿದ್ದರಾಮಯ್ಯ ಮೇಲೂ ಕಣ್ಗಾವಲು

Behugarike
Published on

ನವದೆಹಲಿ: ಭಾರತ-ಚೀನಾ ಗಡಿ ತಕರಾರು ಮುಂದುವರಿದಿರುವಾಗಲೇ ಭಾರತದ ಪ್ರಮುಖ ರಾಜಕಾರಣಿಗಳು, ಉದ್ಯಮಿಗಳು, ನ್ಯಾಯಮೂರ್ತಿಗಳ ಸಹಿತ 10,000ಕ್ಕೂ ಅಧಿಕ ಭಾರತೀಯರ ಮೇಲೆ ಚೀನಾ ಬೇಹುಗಾರಿಕೆ ನಡೆಸುತ್ತಿದೆ ಎಂ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಚೀನಾ ಸರ್ಕಾರಕ್ಕೆ ಸಂಬಂಧಿಸಿದ ಜೆನ್‌ಹುವಾ ಎಂಬ ಖಾಸಗಿ ಮಾಹಿತಿ ತಂತ್ರಜ್ಞಾನ ಕಂಪನಿ ಈ ಮೋಸದಾಟದಲ್ಲಿ ನಿರತವಾಗಿದೆ. ಶೆನ್‌ಜೆನ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಜೆನ್‌ಹುವಾ ‘ಹೈಬ್ರಿಡ್ ಸಮರ’ ನಡೆಸಿ ‘ಚೀನಾದ ಮಹಾನ್ ಪುನರುತ್ಥಾನಕ್ಕಾಗಿ’ ಕಾರ್ಯ ನಿರ್ವಹಿಸುತ್ತಿದೆ. ಈ ಸಂಸ್ಥೆ ಚೀನಾ ಸರ್ಕಾರ ಹಾಗೂ ಚೀನಾ ಕಮ್ಯುನಿಸ್ಟ್ ಪಕ್ಷದೊಂದಿಗೆ (ಸಿಪಿಸಿ) ನಿಕಟ ಸಂಪರ್ಕ ಹೊಂದಿದೆ. ಹಲವು ವಿದೇಶಿ ವ್ಯಕ್ತಿಗಳು ಹಾಗೂ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಅದು ಕೆಲಸ ಮಾಡುತ್ತಿದೆ. ಇಂಟರ್‌ನೆಟ್ ಖಾತೆಗಳಿಗೆ ಕನ್ನ ಹಾಕಿ ಮಾಹಿತಿ ಕದಿಯುವುದು ಪ್ರಮುಖ ಕಾರ್ಯತಂತ್ರವಾಗಿದೆ. ಭದ್ರತಾ ಕಾರಣಗಳನ್ನು ಮುಂದೊಡ್ಡಿ ಚೀನಾದ ಅನೇಕ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ನಿಷೇಧಿಸಿರುವುದರ ಮಹತ್ವವನ್ನು ಈ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬಹುದಾಗಿದೆ.

ಬೆಚ್ಚಿ ಬೀಳಿಸುವ ಪಟ್ಟಿ: ಜೆನ್‌ಹುವಾ ಡೇಟಾ ಇನ್‌ರ್ಮೇಶನ್ ಟೆಕ್ನಾಲಜಿ ಕಂಪನಿಯ ಬೇಹುಗಾರಿಕೆ ನಡೆಸಬೇಕಾದವರ ಪಟ್ಟಿಯಲ್ಲಿ ಇರುವವರ ಹೆಸರುಗಳನ್ನು ನೋಡಿದರೆ ಯಾರಾದರೂ ಬೆಚ್ಚಿಬೀಳಲೇ ಬೇಕು. ರಾಷ್ಟ್ರಪತಿ ರಾಮನಾಥ ಕೋವಿಂದ, ಪ್ರಧಾನಿ ನರೇಂದ್ರ ಮೋದಿಯನ್ನೂ ಅದು ಬಿಟ್ಟಿಲ್ಲ. ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಕುಟುಂಬಸ್ಥರು, ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ, ಅಶೋಕ್ ಗೆಹ್ಲೋಟ್, ಅಮರಿಂದರ್ ಸಿಂಗ್, ಉದ್ಧವ್ ಠಾಕ್ರೆ, ನವೀನ್ ಪಟ್ನಾಯಕ್, ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್, ರಾಜನಾಥ ಸಿಂಗ್, ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯಲ್, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ... ಹೀಗೆ ಚೀನಿ ಬೇಹುಗಾರಿಕೆಗೆ ಒಳಗಾದ ರಾಜಕಾರಣಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.  ಇದನ್ನೂ ಓದಿ: ‘ಮೊಘಲ್​ ಮ್ಯೂಸಿಯಂ’ ಹೆಸರನ್ನು ‘ಛತ್ರಪತಿ ಶಿವಾಜಿ ಮ್ಯೂಸಿಯಂ’ ಎಂದು ಬದಲಿಸಿದ ಯೋಗಿ ಆದಿತ್ಯನಾಥ್​

ಸಿಜೆಐ ಮೇಲೂ ಬೇಹು ಕಣ್ಣು: ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಸ್.ಎ. ಬೊಬ್ಡೆ, ಮೂರೂ ಸೇನಾ ಪಡೆಗಳ ಪ್ರಧಾನ ದಂಡ ನಾಯಕ ಬಿಪಿನ್ ರಾವತ್, ಲೋಕಪಾಲ ಪಿ.ಸಿ. ೋಷ್, ಮಹಾಲೇಖಪಾಲ (ಸಿಎಜಿ) ಜಿ.ಸಿ. ಮುರ್ಮು ಈ ರೀತಿಯಾಗಿ ವಿವಿಧ ವಿಭಾಗಗಳ ಪ್ರಮುಖರನ್ನು ಕೂಡ ಗುರಿಯಾಗಿಸಲಾಗಿದೆ. ರತನ್ ಟಾಟಾ ಮತ್ತು ಗೌತಮ್ ಅದಾನಿ ಚೀನಿ ಸೈಬರ್ ಬೇಹುಗಾರಿಕೆಗೆ ಒಳಗಾದವರ ಪಟ್ಟಿಯಲ್ಲಿರುವ ಪ್ರಮುಖ ಉದ್ಯಮಿಗಳು. ವಿಜ್ಞಾನಿಗಳು, ಶೈಕ್ಷಣಿಕ ತಜ್ಞರು, ಅಧಿಕಾರಿಗಳು, ನಟ-ನಟಿಯರು, ಧಾರ್ಮಿಕ ನಾಯಕರು ಮತ್ತು ಹೋರಾಟಗಾರರು ಕೂಡ ಚೀನಾ ಬೇಹುಗಾರಿಕೆಗೆ ಒಳಪಟ್ಟಿದ್ದಾರೆ. ಆರ್ಥಿಕ ಅಪರಾಧ, ಭ್ರಷ್ಟಾಚಾರ, ಭಯೋತ್ಪಾದನೆ, ಮಾದಕದ್ರವ್ಯ, ಚಿನ್ನ, ಶಸಾಸ ಹಾಗೂ ವನ್ಯಜೀವಿಗಳ ಕಳ್ಳಸಾಗಣೆಯಲ್ಲಿ ತೊಡಗಿದವರ ಮೇಲೆ ಕೂಡ ಕಣ್ಗಾವಲು ನಡೆಸುತ್ತಿದೆ.

ತೆಂಡೂಲ್ಕರ್ ಮೇಲೆ ನಿಗಾ: ಕ್ರೀಡಾಪಟುಗಳು, ಹಿರಿಯ ಪತ್ರಕರ್ತ ರಾಜದೀಪ್ ಸರ್‌ದೇಸಾಯಿ, ಪ್ರಧಾನಿಯವರ ಮಾಜಿ ಮಾಧ್ಯಮ ಕಾರ್ಯದರ್ಶಿ ಸಂಜಯ್ ಬಾರು, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಚಿತ್ರ ನಿರ್ದೇಶಕ ಶ್ಯಾಮ್ ಬೆನಗಲ್, ಶಾಸೀಯ ನರ್ತಕಿ ಸೋನಾಲ್ ಮಾನ್‌ಸಿಂಗ್ ಮೊದಲಾದವರೂ ಪಟ್ಟಿಯಲ್ಲಿದ್ದಾರೆ. ಇದನ್ನೂ ಓದಿ:ಮುಂಬೈ ಬಿಡುತ್ತಿದ್ದಂತೆ ಆದಿತ್ಯ ಠಾಕ್ರೆ ವಿರುದ್ಧ ಗಂಭೀರ ಆರೋಪ ಮಾಡಿದ ಕಂಗನಾ ಕಂಪನಿ ಪ್ರವರ: 2018ರಲ್ಲಿ ಜೆನ್‌ಹುವಾ ಕಂಪನಿ ನೋಂದಣಿಯಾಗಿದೆ. ವಿವಿಧ ದೇಶಗಳಲ್ಲಿ 20 ಸಂಸ್ಕರಣಾ ಘಟಕಗಳಿವೆ. ಚೀನಾದ ಬೇಹುಗಾರಿಕೆ ದಳ, ಮಿಲಿಟರಿ ಮತ್ತು ಇತರ ಭದ್ರತಾ ಸಂಸ್ಥೆಗಳೊಂದಿಗೆ ಸೇರಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಒಪ್ಪಿಕೊಂಡಿದೆ. ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ಯುಎಇ, ಕೆನಡಾ, ಜರ್ಮನಿ ಮುಂತಾದ ದೇಶಗಳ ಪ್ರಮುಖರ ಮೇಲೆ ಕೂಡ ಚೀನಾ ಕಣ್ಗಾವಲು, ಕುಚೇಷ್ಟೆ ನಡೆಯುತ್ತಿರುವುದು ತನಿಖಾ ವರದಿಯೊಂದರಿಂದ ದೃಢಪಟ್ಟಿದೆ.

ಬೇಹುಗಾರಿಕೆಯ ಉದ್ದೇಶವೇನು?

ಭಾರತದ ರಾಜಕೀಯ ವ್ಯವಸ್ಥೆಯೊಳಗೆ ನುಸುಳುವುದು ಚೀನಾದ ಸೈರ್ ಬೇಹುಗಾರಿಕೆ ಚಟುವಟಿಕೆಗಳ ಉದ್ದೇಶವಾಗಿದೆ. ಆ ಮೂಲಕ ಪ್ರಾದೇಶಿಕ ಎದುರಾಳಿ ದೇಶದ ಮೇಲೆ ಮೇಲುಗೈ ಸಾಧಿಸುವ ಗುರಿ ಅದರದ್ದಾಗಿದೆ. ಭಾರತದ ಪ್ರಮುಖ ರಾಜಕಾರಣಿಗಳು ಮತ್ತು ಶಾಸಕಾಂಗ ವ್ಯಕ್ತಿಗಳ ಚಟುವಟಿಕೆಗಳನ್ನು ಗಮನಿಸುವ ಮೂಲಕ ಭಾರತದ ಕಾರ್ಯತಂತ್ರಗಳನ್ನು ಅರಿಯುವುದು ಚೀನಾದ ಉದ್ದೇಶ. ಆ ಮೂಲಕ ಸಮರವೇ ಆಗಲಿ ಮಾತುಕತೆಗಳಲ್ಲೇ ಆಗಲಿ ಮೇಲುಗೈ ಸಾಧಿಸುವ ಹುನ್ನಾರ ಹೊಂದಿದೆ. ವಿವಿಧ ದೇಶಗಳ ಪ್ರಾಮುಖ್ಯತೆಗೆ ಹಾನಿ ಮಾಡುವುದು ಅದರ ಉದ್ದೇಶವಾಗಿದೆ. ಮಿಲಿಟರಿಯೇತರ ಸಾಧನಗಳ ಮೂಲಕ ಇದನ್ನು ಸಾಧಿಸಲು ಅದು ಮುಂದಾಗಿದೆ. ‘ಮಾಹಿತಿ ಮಾಲಿನ್ಯ, ನಿರ್ವಹಣಾ ಪರಿಕಲ್ಪನೆ ಹಾಗೂ ಪ್ರಚಾರ’ ಜೆನ್‌ಹುವಾದ ಸಾಧನವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net