ಭಾರತದ ಬೆಂಬಲಕ್ಕೆ ನಿಂತ ಜಪಾನ್​ ಗಡಿಗಳನ್ನು ಆಕ್ರಮಿಸಿದ ಚೀನಾ; ಗಸ್ತು ನೌಕೆಗಳ ನಿಯೋಜನೆ

china ships
Published on

ನವದೆಹಲಿ: ಭಾರತ- ಚೀನಾ ನಡುವಿನ ಸಂಘರ್ಷದಲ್ಲಿ ಭಾರತದ ಬೆಂಬಲಕ್ಕೆ ಜಪಾನ್​ ನಿಲ್ಲುತ್ತಿದ್ದಂತೆ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿಯು ಜಪಾನ್​ ಗಡಿಯಲ್ಲಿ ಗಸ್ತು ನೌಕೆಗಳನ್ನು ನಿಯೋಜಿಸಿದೆ.

ಚೀನಾದ ಎರಡು ಹಡಗುಗಳು ಜಪಾನ್​ ಜಲಗಡಿಯನ್ನು ಪ್ರವೇಶಿಸಿವೆ ಎಂದು ಜಪಾನ್​ ಕರಾವಳಿ ಭದ್ರತಾ ಪಡೆಗಳು ಮಾಹಿತಿ ನೀಡಿವೆ.

ಪೂರ್ವ ಚೀನಾ ಸಮುದ್ರ ಪ್ರದೇಶದ ಮೂಲಕ ಜಪಾನ್​ ಸೆನ್​ಕಾಕು ದ್ವೀಪದ ಬಳಿ ಚೀನಾ ಹಡಗುಗಳು ಸಂಚರಿಸುತ್ತಿವೆ ಎಂದು ತಿಳಿಸಿದೆ.

ಇದಷ್ಟೇ ಅಲ್ಲ, ಅಲ್ಲಿದ್ದ ಜಪಾನ್​ನ ಮೀನುಗಾರಿಕೆ ದೋಣಿಯೊಂದನ್ನು ಚೀನಿ ಪಡೆಗಳು ಸಂಪರ್ಕಿಸಿವೆ ಎಂದು ಗೊತ್ತಾಗಿದೆ.

ಇದುವರೆಗಿನ ಇತಿಹಾಸದಲ್ಲಿ ಜಪಾನ್​ ಜಲ ಗಡಿಯಲ್ಲಿ ಇಷ್ಟು ದೂರದವರೆಗೆ ಚೀನಿ ಹಡಗುಗಳು ಪ್ರವೇಶಿಸಿದ್ದು ಇದೇ ಮೊದಲ ಬಾರಿಯಾಗಿದೆ. ಚೀನಾದ ಅತಿಕ್ರಮಣಶೀಲತೆಗೆ ಇದು ಸಾಕ್ಷಿಯಾಗಿದೆ ಎಂದು ಜಪಾನ್​ ತಿಳಿಸಿದೆ.

ಈಗಾಗಲೇ ಚೀನಾದೊಂದಿಗೆ ಹಿಂದು ಮಹಾಸಾಗರ ಹಾಗೂ ಫೆಸಿಪಿಕ್​ ಮಹಾಸಾಗರದಲ್ಲಿರುವ ಸೆನ್​ಕಾಕು ಹಾಗೂ ಡಿಯಾಯು ದ್ವೀಪಗಳ ಬಗ್ಗೆ ಎರಡು ರಾಷ್ಟ್ರಗಳ ನಡುವೆ ಹಿಂದಿನಿಂದಲೂ ಅಂದರೆ 1972ರಿಂದಲೂ ವೈಷಮ್ಯವಿದೆ.

ಇದನ್ನೂ ಓದಿ; ಚೀನಾ ಗುರಿಯಾಗಿಸಿ ಕ್ಷಿಪಣಿ ಸಜ್ಜುಗೊಳಿಸಿರುವ ಜಪಾನ್​; ಯಾವುದರ ಮುನ್ಸೂಚನೆ ಇದು…?

ಕಳೆದ ಏಪ್ರಿಲ್​ನಿಂದ ಈವರೆಗೆ 67 ಬಾರಿ ಚೀನಿ ಹಡಗುಗಳು ಸೆನ್​ಕಾಕು ದ್ವೀಪದ ಬಳಿ ಅತಿಕ್ರಮಣ ಪ್ರವೇಶ ನಡೆಸಿವೆ ಎಂದು ಜಪಾನ್​ ದೂರಿದೆ. ಹೀಗಾಗಿ ಚೀನಾಗೆ ಮುಖ ಮಾಡಿಕೊಂಡಿರುವ ಜಪಾನ್​ ಗಡಿಯಲ್ಲಿ ಅತ್ಯಾಧುನಿಕ ಕ್ಷಿಪಣಿಗಳನ್ನು ಸನ್ನದ್ಧವಾಗಿರಿಸಿದೆ.

ಸೆನ್​ಕಾಕು ದ್ವೀಪ ತನಗೆ ಸೇರಿದ್ದೆಂದು ಸ್ಪಷ್ಟವಾಗಿ ಚೀನಾಗೆ ತಿಳಿಸಲು ಜಪಾನ್​ ಇತ್ತೀಚೆಗೆ ದ್ವೀಪದ ಹೆಸರನ್ನು ತೊನೊಶಿರೋ ಸೆನ್​ಕಾಕು ಎಂಬ ಬದಲಾಯಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net