ಅರುಣಾಚಲ ಗಡಿಯಲ್ಲಿ ಚೀನಿ ಸೈನಿಕರು: ಸನ್ನದ್ಧ ಸ್ಥಿತಿಯಲ್ಲಿ ಭಾರತೀಯ ಯೋಧರು

arunachal1
Published on

ನವದೆಹಲಿ: ಪದೇಪದೆ ಯತ್ನಿಸಿದರೂ ಪೂರ್ವ ಲಡಾಖ್ ಮೂಲಕ ಭಾರತದೊಳಕ್ಕೆ ನುಸುಳಿ ಅತಿಕ್ರಮಣ ಮಾಡುವ ಪ್ರಯತ್ನ ವಿಫಲವಾಗುತ್ತಿರುವುದರಿಂದ ಚೀನಾದ ಕಣ್ಣು ಈಗ ಅರುಣಾಚಲ ಪ್ರದೇಶ ಗಡಿ ಮೇಲೆ ಬಿದ್ದಿದ್ದು, ಅಲ್ಲಿ ತನ್ನ ಸೈನಿಕರನ್ನು ದೊಡ್ಡ ಸಂಖ್ಯೆಯಲ್ಲಿ ಜಮಾವಣೆ ಮಾಡುತ್ತಿದೆ.

ಅರುಣಾಚಲ ಪ್ರದೇಶದ ಗಡಿಯಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಅಸಾಫಿಲಾ, ಟೂಟಿಂಗ್ ಆಕ್ಸಿಸ್, ಚಾಂಗ್ ತ್ಸೆ ಮತ್ತು ಫಿಶ್‌ಟೇಲ್-2 ಎಂಬ ನಾಲ್ಕು ಸೆಕ್ಟರ್‌ಗಳಲ್ಲಿ ಚೀನಾದ ಸೈನಿಕರ ಚಲನವಲನ ಕಂಡು ಬಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ‘ಗಡಿ ನಿಯಮಗಳನ್ನು ಚೀನಾ ಗೌರವಿಸುತ್ತಿಲ್ಲ…ಎಂಥದ್ದೇ ಸಂದರ್ಭ ಬಂದರೂ ಎದುರಿಸಲು ಸಿದ್ಧ’ -ರಕ್ಷಣಾ ಸಚಿವ

ಈ ಪ್ರದೇಶಗಳಲ್ಲಿ ಅತಿಕ್ರಮಣ ಮಾಡುವುದು ಚೀನಾದ ಉದ್ದೇಶವಿರಬಹುದು ಎಂದು ಅಂದಾಜು ಮಾಡಲಾಗಿದೆ. ಚೀನಾದ ಯಾವುದೇ ಪ್ರಯತ್ನವನ್ನು ವಿಫಲಗೊಳಿಸಲು ಭಾರತೀಯ ಸೇನೆ ಕಣ್ಗಾವಲನ್ನು ಚುರುಕುಗೊಳಿಸಿದ್ದು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಸೈನ್ಯವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net