ರಾಜ್ಯದಲ್ಲಿ ದುರ್ಬಲಗೊಂಡ ಮಳೆ; ವರುಣನಿಗಾಗಿ ಪ್ರಾರ್ಥಿಸಿ ರಾತ್ರಿ ನಡೆಯಿತು ಮಕ್ಕಳ ಮದುವೆ

mandya wedding
Published on

ಮಂಡ್ಯ: ರಾಜ್ಯದಲ್ಲಿ ಮುಂಗಾರು ಮಳೆ ದುರ್ಬಲಗೊಂಡಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದ ಹಲವು ಭಾಗಗಳು ಮತ್ತು ಮಲೆನಾಡಿನ ಕೆಲವು ಭಾಗಗಳಲ್ಲಿ ಮಾತ್ರ ಮಳೆಯಾಗುತ್ತಿದೆ. ಮುಂಗಾರು ದೇಶಕ್ಕೆ ಆಗಮಿಸಿ ಹಲವು ದಿನಗಳೇ ಕಳೆದರೂ ಮಳೆಯ ಸುಳಿವೇ ಇಲ್ಲ ಹೀಗಾಗಿ ಜನರು ಮಳೆಗಾಗಿ ವಿಚಿತ್ರ ಆಚರಣೆಗಳ ಮೊರೆ ಹೋಗುತ್ತಿದ್ದಾರೆ.

ಮಳೆಗಾಗಿ ಕತ್ತೆಗಳ ಮದುವೆ, ಕಪ್ಪೆಗಳ ಮದುವೆ ಮಾಡುತ್ತಾರೆ. ಆದರೆ ಸಕ್ಕೆರೆನಾಡಿನ ಜನರು ಮಳೆಗಾಗಿ ಪ್ರಾರ್ಥಿಸಿ ರಾತ್ರಿ ವೇಳೆ ಮಕ್ಕಳ ಮದುವೆ ಮಾಡಿದ್ದಾರೆ. ಈ ವಿಚಿತ್ರ ಸಂಪ್ರದಾಯದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ಕೆ.ಆರ್.ಪೇಟೆ ತಾಲೂಕಿ‌ನ ಗಂಗನಹಳ್ಳಿ ಗ್ರಾಮದಲ್ಲಿ, ಎರಡು ಗಂಡು ಮಕ್ಕಳಲ್ಲಿ ಒಬ್ಬ ಹುಡುಗನಿಗೆ ಹೆಣ್ಣಿನ ವೇಷ ಧರಿಸಿ‌ ಇಬ್ಬರಿಗೂ ಸಂಪ್ರದಾಯದಂತೆ ಮದುವೆ ಮಾಡಿದ್ದಾರೆ. ಮದುವೆಯ ಬಳಿಕ ಗ್ರಾಮಸ್ಥರೆಲ್ಲರು ಸೇರಿ ಜನರಿಗೆ ಊಟ ಹಾಕಿಸಿದ್ದಾರೆ.

ಈ ವಿಚಿತ್ರ ಮದುವೆ ಸಂಪ್ರದಾಯದ ಆಚರಣೆಯಿಂದ ಮಳೆ ಬರುತ್ತದೆ ಎಂಬ ನಂಬಿಕೆ‌ ಇಲ್ಲಿನ ಜನರಿಗೆ ಇದೆ.ಈ ವಿಚಿತ್ರ ಆಚರಣೆಯ ಮದುವೆ ಸಂಪ್ರದಾಯಕ್ಕೆ ಸಕ್ಕರೆನಾಡಿನ ಗ್ರಾಮಸ್ಥರು‌ ಸಾಕ್ಷಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net