

ಬ್ರಹ್ಮಾವರ: ಇಂದಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಜೀವನ ಮೌಲ್ಯಾಧಾರಿತ ಶಿಕ್ಷಣದ ಅಗತ್ಯ ಇದೆ ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.
ಮಧರ್ ಪ್ಯಾಲೇಸ್ ಸಭಾಂಗಣದಲ್ಲಿ ನಮ್ಮ ನಾಡ ಒಕ್ಕೂಟ ಸಂಸ್ಥೆಯಿಂದ ಶನಿವಾರ ಆಯೋಜಿಸಿದ ಸಾಧಕರಿಗೆ ಹಾಗೂ ಸಾಧಕ ಮುಸ್ಲಿಂ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 12 ಮಂದಿ ಇಮಾಮ್ರನ್ನು ಗೌರವಿಸಲಾಯಿತು. ಜತೆಗೆ ಶೇ.100 ಫಲಿತಾಂಶ ಪಡೆದ ಸಮುದಾಯದ ಶಾಲಾ ಕಾಲೇಜುಗಳ ಮುಖ್ಯಸ್ಥರನ್ನು ಅಭಿನಂದಿಸಲಾಯಿತು.
ಸಭೆಗೂ ಮೊದಲು ರಫೀಕ್ ಮಾಸ್ಟರ್ ಮಂಗಳೂರು, ವಕೀಲ ಸುಹಾನ್ ಸಾಸ್ತಾನ ಅವರಿಂದ ವೃತ್ತಿ ಮಾರ್ಗದರ್ಶನದ ಮಾಹಿತಿ ಕಾರ್ಯಾಗಾರ ಜರುಗಿತು. ಪ್ರಮುಖರಾದ ಮುಸ್ತಾಕ್ ಅಹ್ಮದ್ ಬೆಳ್ವೆ, ರಿಜ್ವಾನ್ ಅಹ್ಮದ್, ಎಂ.ಎ.ಮೌಲಾನಾ, ಇರ್ಫಾನ್ ಅಹ್ಮದ್, ಯು.ಕೆ.ಮುಸ್ತಾಫ್ ಸಾಧಿ ಇತರರು ಉಪಸ್ಥಿತರಿದ್ದರು. ಹುಸೈನ್ ಹೈಕಾಡಿ ಸ್ವಾಗತಿಸಿದರು. ಫಾಯಿಲ್ ಅಹ್ಮದ್ ಉಡುಪಿ ಮತ್ತು ಫಯಲ್ ಸೌಕೂರು ನಿರೂಪಿಸಿದರು.