ಚರಂಡಿ ದುರಸ್ತಿ ಮಾಡದೇ ಸವಾರರಿಗೆ ಸಂಕಷ್ಟ

hebri
Published on

ಹೆಬ್ರಿ: ಹೆಬ್ರಿ ತಾಲೂಕಿನ ಚಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಬ್ರಹ್ಮ ಸ್ಥಾನದ ಬಳಿ ಚರಂಡಿ ದುರಸ್ತಿ ವಾಡದೆ ಲೋಕೋಪಯೋಗಿ ಇಲಾಖೆ ಬೇಜವಾಬ್ದಾರಿತನ ತೋರಿದ್ದರಿಂದ ಚರಂಡಿ ನೀರು ರಸ್ತೆಯಲ್ಲಿ ಹರಿದು ಸವಾರರಿಗೆ ಸಂಕಷ್ಟವಾಗುತ್ತಿದೆ. ಪ್ರತಿ ಮಳೆಗಾಲದಲ್ಲಿ ಸ್ಥಳದಲ್ಲಿ ಬೃಹತ್ ಗುಂಡಿಗಳ ನಿರ್ಮಾಣ ಆಗುತ್ತದೆ.

ಪ್ರತಿ ವರ್ಷ ಇಲಾಖೆಯವರು ದುರಸ್ತಿ ಮಾಡುತ್ತೇವೆ ಎಂದು ಆಶ್ವಾಸನೆ ನೀಡುತ್ತಾರೆ. ಹೆಬ್ರಿ ಮೂರು ರಸ್ತೆಯಿಂದ ಗಾಂಧಿನಗರ ತನಕ ಸಮರ್ಪಕ ಚರಂಡಿ ಇಲ್ಲದೆ ಕೆಸರು ನೀರು ರಸ್ತೆಯಲ್ಲಿ ಹರಿಯುತ್ತಿದ್ದಾಗ ಚಾರ ಗ್ರಾಮ ಪಂಚಾಯಿತಿ ಮುತುವರ್ಜಿ ವಹಿಸಿ ಅಲ್ಲಲ್ಲಿ ದುರಸ್ತಿ ವಾಡಿಕೊಟ್ಟಿದೆ. ಚರಂಡಿಗೆ ಪೈಪುಗಳನ್ನು ಅಳವಡಿಸಿದ್ದು, ಅನೇಕ ಕಡೆ ಹೂಳು ತೆಗೆಯದೆ ಇರುವುದರಿಂದ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಪ್ರಮುಖ ಸಭೆಗಳಲ್ಲಿ ಉಲ್ಲೇಖವಾಗಿದ್ದರು ಅಧಿಕಾರಿಗಳು ಮಾತ್ರ ಯಾವುದೇ ಸೂಕ್ತ ಕ್ರಮವಹಿಸುತ್ತಿಲ್ಲ. ಮಳೆಗಾಲದ ಒಂದು ತಿಂಗಳು ಮುಂಚೆ ಪೂರ್ವಸಿದ್ಧತೆ ನಡೆಸಬೇಕಾದ ಇಲಾಖೆಯವರು ಇಲ್ಲಿ ತನಕ ಯಾವುದೇ ಕ್ರಮ ವಹಿಸಿಲ್ಲ.

ಸಂಬಂಧಪಟ್ಟ ಇಲಾಖೆ ಬಳಿ ನಾವು ಅನೇಕ ಬಾರಿ ಮನವಿ ವಾಡಿ ಚರಂಡಿ ದುರಸ್ತಿಗೊಳಿಸಲು ತಿಳಿಸಿದ್ದೆವು. ಯಾವುದೇ ಪ್ರಯೋಜನ ಆಗಿಲ್ಲ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಪಂಚಾಯಿತಿಯವರು ಮುತ್ತು ವರ್ಜಿ ವಹಿಸಿ ಸ್ವಲ್ಪಮಟ್ಟಿಗೆ ಚರಂಡಿ ದುರಸ್ತಿ ವಾಡಿದ್ದೇವೆ. ಪಿಡಬ್ಲ್ಯೂಡಿ ಇಲಾಖೆ ಸೂಕ್ತ ಕ್ರಮ ವಹಿಸಿ ಚರಂಡಿ ಪೈಪಿನ ಹೂಳೆತ್ತಬೇಕು. ಪ್ರತಿ ವರ್ಷ ನಾಗಬ್ರಹ್ಮ ಸ್ಥಾನದ ಬಳಿ ಚರಂಡಿ ನೀರು ರಸ್ತೆಯಲ್ಲಿ ಹರಿದು ಸಂಚಾರಕ್ಕೆ ತೊಡಕಾಗಿದೆ. -ದಿನೇಶ್ ಕುವಾರ್ ಶೆಟ್ಟಿ, ಚಾರ ಗ್ರಾಪಂ ಅಧ್ಯಕ್ಷ https://www.vijayavani.net/issuance-of-entitlement-letters-to-beneficiaries https://www.vijayavani.net/appeal-to-respond-to-road-problems

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net