

ಪೆರ್ಲ: ಪಡ್ರೆ ವಾಣೀನಗರ ಸರ್ಕಾರಿ ಶಾಲೆಯಲ್ಲಿ ಪ್ರವೇಶೋತ್ಸವ ಸಮಾರಂಭವನ್ನು ವಾರ್ಡ್ ಸದಸ್ಯ ನರಸಿಂಹ ಪೂಜಾರಿ ಸೋಮವಾರ ಉದ್ಘಾಟಿಸಿದರು.
ಮುಖ್ಯಶಿಕ್ಷಕ ವಾಸುದೇವ ನಾಯಕ್ ವಿದ್ಯಾರ್ಥಿಗಳು, ಪಾಲಕರನ್ನು ಸ್ವಾಗತಿಸಿದರು. ಉದ್ಯಮಿ ಉದಯ ಭಟ್ ಮಕ್ಕಳಿಗೆ ಪುಸ್ತಕ, ಪಠ್ಯ ಸಾಮಗ್ರಿ, ಸಿಹಿ ತಿಂಡಿ ವಿತರಿಸಿದರು. ಶಿಕ್ಷಕಿ ಪ್ರಿಯಲತಾ ವತಿಯಿಂದ ಕಲಿಕೋಪಕರಣಗಳ ಕಿಟ್ ವಿತರಿಸಲಾಯಿತು.
ಪಿಟಿಎ ಅಧ್ಯಕ್ಷ ಯೋಗೀಶ್ ಕಡಂಬಳಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯ ರಾಮಚಂದ್ರ ಎಂ., ಪ್ರಭಾರ ಪ್ರಾಂಶುಪಾಲ ಉಷಾ ಕುಮಾರಿ, ಎಂಪಿಟಿಎ ಸದಸ್ಯೆ ಹರ್ಷಲತಾ, ಎಸ್.ಎಂ.ಸಿ. ಸದಸ್ಯೆ ಹರಿಣಾಕ್ಷಿ, ನಿವೃತ್ತ ಶಿಕ್ಷಕಿ ಚಂದ್ರಾವತಿ, ಹಿರಿಯ ಶಿಕ್ಷಕಿ ಸರಸ್ವತಿ ಕೆ.ಎನ್. ಶುಭ ಹಾರೈಸಿದರು. ಶಿಕ್ಷಕ ನವಪ್ರಸಾದ್ ವಂದಿಸಿದರು. ಗೋಪಾಲ ಕಾರ್ಯಕ್ರಮ ನಿರೂಪಿಸಿದರು.