More

    VIDEO| ಹಾವಿನ ಬಾಯಿಂದ ಬಾಲಕ ಜಸ್ಟ್ ಮಿಸ್!

    ಬೆಳಗಾವಿ: ತಾಲೂಕಿನ ಬಿ.ಕೆ.ಕಂಗ್ರಾಳಿ ಗ್ರಾಮದ ಜಮೀನೊಂದರಲ್ಲಿ 2 ವರ್ಷದ ಬಾಲಕನೊಬ್ಬ ಹಾವಿನ ಬಾಯಿಂದ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಖಾಲಿ ಜಮೀನಿನಲ್ಲಿ ಬಾಲಕ ನಡೆದುಕೊಂಡು ಬರುತ್ತಿರುವುದನ್ನು ಆತನ ತಂದೆ ವಿಡಿಯೋ ಮಾಡುತ್ತಿರುತ್ತಾರೆ. ಈ ಕಡೆ ಬಾ ಎಂಬ ತಂದೆ ಹೇಳಿದ ವಿರುದ್ಧ ದಿಕ್ಕಿಗೆ ನಡೆಯುವ ಬಾಲಕನಿಗೆ ಪಕ್ಕದಲ್ಲೇ ಭಾರಿ ಗಾತ್ರದ ನಾಗರ ಹಾವು ಇರುವುದು ತಿಳಿಯುವುದಿಲ್ಲ. ವಿಡಿಯೋ ಮಾಡುತ್ತಿರುವ ತಂದೆಗೂ ಗೊತ್ತಾಗಿರುವುದಿಲ್ಲ. ನಡೆಯುತ್ತ ಮುಂದೆ ಸಾಗುವ ಬಾಲಕ ಹಾವನ್ನು ಮುಟ್ಟುತ್ತಾನೆ.

    ಅದೃಷ್ಟವಶಾತ್ ಕಚ್ಚದೆ, ಹೆಡೆ ಎತ್ತಿ ಸುಮ್ಮನೆ ಹೊರಟು ಹೋಗುತ್ತದೆ. ನೆಲಮಟ್ಟದಿಂದ ಎದ್ದ ಹಾವು ನುಸುಳಿ ಹೋಗುವುದನ್ನು ನೋಡುವ ತಂದೆ ಹೌಹಾರಿ ಮಗು ಎತ್ತಿಕೊಳ್ಳಲು ಮುಂದಾಗುತ್ತಾರೆ. ವಿಡಿಯೋ ಮಾಡುತ್ತಿದ್ದ ವ್ಯಕ್ತಿಯನ್ನು ರಾಜು ಪಾಟೀಲ ಎನ್ನಲಾಗಿದೆ.

    VIDEO } ಮಾತೃವಾತ್ಸಲ್ಯ ಮಕ್ಕಳಿಗಷ್ಟೇ ಮೀಸಲಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts