More

    VIDEO } ಮಾತೃವಾತ್ಸಲ್ಯ ಮಕ್ಕಳಿಗಷ್ಟೇ ಮೀಸಲಲ್ಲ…

    ಭೂಮಿಯ ಮೇಲಿರುವ ಸಕಲ ಜೀವರಾಶಿಗಳಲ್ಲೂ ಪ್ರೀತಿ, ಸಹಾನುಭೂತಿ ಇದ್ದೇ ಇದೆ. ಅದು ಪ್ರಾಣಿ-ಪ್ರಾಣಿಗಳಲ್ಲಿ ಅಥವಾ ಪ್ರಾಣಿ-ಪಕ್ಷಿಗಳಲ್ಲಿ ಅಥವಾ ಮನುಷ್ಯ- ಪ್ರಾಣಿಗಳ ಮಧ್ಯದಲ್ಲಿಯೂ ಇರಬಹುದು. ಅದಕ್ಕೊಂದು ಸಾಕ್ಷಿ ಇಲ್ಲಿದೆ ನೋಡಿ.
    ಇಲ್ಲೊಬ್ಬ ಮಹಿಳೆ ತನ್ನ ಮನೆಯಲ್ಲಿ ಪ್ರೀತಿಯಿಂದ, ತಾಳ್ಮೆಯಿಂದ ತನ್ನ ಮಕ್ಕಳಿಗೆ ಉಣಬಡಿಸುವಂತೆಯೇ ಲಂಗೂರ್‌ಗೆ ಊಟಮಾಡಿಸುತ್ತಿದ್ದಾಳೆ. ಆಕೆ ಉಣಿಸುತ್ತಿದ್ದಂತೆ ಲಂಗೂರ್ ಮೇಜಿನ ಮೇಲೆ ಶಾಂತವಾಗಿ ಕುಳಿತುಕೊಂಡಿದೆ. ಈ ವಿಡಿಯೋ ಫೇಸ್​ಬುಕ್​​ನಲ್ಲಿ ಶೇರ್ ಆಗಿದೆ.

    আমাদের বাড়িতে হনুমান ভাত খাচ্ছে আমার মা ভাত খাওয়া ছে।

    Chand Das ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಜೂನ್ 9, 2020

    ಇದನ್ನೂ ಓದಿ: VIDEO ] ನೀವೂ ಯಶಸ್ಸು ಗಳಿಸಬೇಕೆ? ಇಲ್ಲಿದೆ ನೋಡಿ ಒಂದು ಪಾಠ

    ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ಮಯೂರೇಶ್ವರದ ಚಂದ್ ದಾಸ್ ಪೋಸ್ಟ್ ಮಾಡಿದ ಎರಡು ನಿಮಿಷಗಳ ವೀಡಿಯೊದಲ್ಲಿ, ಆ ಮಹಿಳೆ ಲಂಗೂರಿಗೆ ಅಕ್ಕಿ, ಬೇಳೆ ಮತ್ತು ತರಕಾರಿ ಮಿಶ್ರಣ ಮಾಡಿದ ಆಹಾರ ನೀಡುತ್ತಿದ್ದಾಳೆ. ಲಂಗೂರ್ ಆ ತುತ್ತು ತಿನ್ನುತ್ತಿದ್ದಂತೆ, ಅದು ಮುಗಿಯುವವರೆಗೂ ಆಕೆ ಮುಂದಿನ ತುತ್ತನ್ನು ರೆಡಿ ಮಾಡುತ್ತ, ಮಗುವಿಗೆ ಉಣಬಡಿಸುವಂತೆಯೇ ತಾಳ್ಮೆಯಿಂದ ಕಾಯುತ್ತಾಳೆ,
    ಈ ವೀಡಿಯೊ 7 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟಿದೆ. ಮತ್ತು ಒಂದೇ ದಿನದಲ್ಲಿ 15,000 ಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.

    ಇದನ್ನೂ ಓದಿ: ಗುಡ್​​ನ್ಯೂಸ್..! ವನ್ಯಜೀವಿ ಪ್ರಿಯರಿಗೆ ಶೀಘ್ರವೇ ತೆರೆದುಕೊಳ್ಳಲಿವೆ ಹುಲಿ ಅಭಯಾರಣ್ಯಗಳು

    ಅನೇಕರು ಆಕೆಯ ಸಹಾನುಭೂತಿಯನ್ನು ಪ್ರಶಂಸಿಸಿದ್ದಾರೆ. ಕೇರಳದಲ್ಲಿ ಆನೆಯ ಸಾವು, ಅಸ್ಸಾಂನಲ್ಲಿ ಚಿರತೆ ಹತ್ಯೆ ಮತ್ತು ಹಿಮಾಚಲ ಪ್ರದೇಶದಲ್ಲಿ ಸ್ಫೋಟಕ ಆಹಾರ ಸೇವಿಸಿದ ಹಸು ಗಾಯಗೊಂಡ ಘಟನೆ.. ಇಂಥ ಪ್ರಾಣಿ ದೌರ್ಜನ್ಯದ ಘಟನೆಗಳ ನಂತರ ಈ ವೀಡಿಯೊ “ಮಾನವೀಯತೆಯ ಮೇಲಿನ ನಂಬಿಕೆಯನ್ನು ಪುನರುಚ್ಚರಿಸಿದೆ” ಎಂದು ಹಲವರು ಹೇಳಿದ್ದಾರೆ. ಆದಾಗ್ಯೂ, ವನ್ಯಜೀವಿಗಳಿಗೆ ಆಹಾರ ನೀಡುವುದರಿಂದ ಅವುಗಳ ನಡವಳಿಕೆ ಬದಲಾಗಬಹುದು ಅಥವಾ ಅವು ಹೆಚ್ಚು ಆಕ್ರಮಣಕಾರಿಯಾಗಬಹುದು ಎಂದು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ, ಗಾಯಗೊಂಡ ಮಂಗವೊಂದು ಕರ್ನಾಟಕದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಶೇರ್ ಆಗಿತ್ತು.

    ಪೂರ್ವಜ ಇಲ್ಯಾಕೆ ಬಂದಿದ್ದ ಗೊತ್ತಾ? ಕೇಳಿದರೆ ಅಯ್ಯೋ ಪಾಪ ಅನ್ಸುತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts