VIDEO| ತುತ್ತು ಅನ್ನಕ್ಕಾಗಿ ಮಾಜಿ ಯೋಧನ ಪರದಾಟ: ಆಸ್ತಿಗಾಗಿ ಅಪ್ಪನನ್ನೇ ಬೀದಿಗೆ ತಳ್ಳಿದ ಮಗ

Yodha
Published on

ಚಿಕ್ಕಮಗಳೂರು: ದೇಶಕ್ಕಾಗಿ ಸೇವೆ ಸಲ್ಲಿಸಿದ್ದ ಮಾಜಿ ಸೈನಿಕ ಇದೀಗ ಮಗನ ಆಸ್ತಿ ದಾಹದಿಂದ ಬೀದಿಗೆ ಬಿದ್ದಿದ್ದು, ತುತ್ತು ಅನ್ನಕ್ಕಾಗಿ ಬೀದಿ ಬೀದಿ ಅಲೆಯುವಂತಾಗಿದೆ.

ರಾಮಪ್ಪ (77) ಬೀದಿಗೆ ಬಿದ್ದ ಭಾರತೀಯ ಮಾಜಿ ಸೈನಿಕ. ಕೊಪ್ಪ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದ್ದು, ದಿನ ನಿತ್ಯದ ಊಟಕ್ಕಾಗಿ ಕೆಲ ದಿನಗಳಿಂದ ರಾಮಪ್ಪ ಅವರು ಕೊಪ್ಪ ಪಟ್ಟಣದಲ್ಲಿ ಅಲೆಯುತ್ತಿದ್ದಾರೆ.

ಆಸ್ತಿಯ ದಾಹಕ್ಕಾಗಿ ಅಪ್ಪನನ್ನೇ ಮಗ ಬೀದಿಗೆ ತಳ್ಳಿದ್ದಾನೆ. ಕೆಲ ದಿನಗಳ ಹಿಂದಷ್ಟೇ ಹೆಂಡತಿಯನ್ನು ಕಳೆದುಕೊಂಡಿರುವ ಮಾಜಿ ಯೋಧ, ಇದೀಗ ಪಾಳುಬಿದ್ದ ಹಳೇ ಬಸ್​ ಸ್ಟ್ಯಾಂಡ್​ ಕಟ್ಟಡದಲ್ಲಿ ವಾಸ ಮಾಡುತ್ತಿದ್ದಾರೆ.

ರಾಮಪ್ಪ ಅವರು ಹೃದಯದ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದು, ಸರಿಯಾದ ಸಮಯದಲ್ಲಿ ಊಟ ಹಾಗೂ ಆರೈಕೆಯಿಲ್ಲದೇ ಕಣ್ಣಿರು ಹಾಕುತ್ತಾ ಕೊಪ್ಪ ಪಟ್ಟಣದಲ್ಲಿ ಸುತ್ತಾಡುವಂತಾಗಿದ್ದು, ಮಗನ ನೆರಳಿನ ನಿರೀಕ್ಷೆಯಲ್ಲಿ ಕಾಲ ದೂಡುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net