More

    ಬಿಜೆಪಿಯತ್ತ ಮಾಗಡಿ ಬಾಲಕೃಷ್ಣ: ಸಂಸದ ಡಿ.ಕೆ. ಸುರೇಶ್ ಡೋಂಟ್ ಕೇರ್!

    ರಾಮನಗರ/ಮಾಗಡಿ: ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗಲು ಅಣಿಯಾಗಿದ್ದಾರೆ ಎಂಬ ಮಾಧ್ಯಮ ವರದಿಗಳ ಕುರಿತು ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಗುರುವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

    ‘‘ಅವರು ಎಲ್ಲಿಗೆ ಬೇಕಾದರೂ ಹೋಗಲಿ, ಅವರ ಮಾತೃಪಕ್ಷಕ್ಕೆ ಬೇಕಾದರೂ (ಜೆಡಿಎಸ್‌ಗೆ) ಹೋಗಲಿ’’ ಎಂದು ಡಿ.ಕೆ. ಸುರೇಶ್ ಹೇಳಿದ್ದಾರೆ.

    ಲಕ್ಷ್ಮೀಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘‘ನಾನು ಪಕ್ಷದಲ್ಲಿ ಯಾರನ್ನೂ ಕಡೆಗಣಿಸಿಲ್ಲ. ಎಲ್ಲರನ್ನೂ ಜತೆಗೆ ಕರೆದುಕೊಂಡು ಹೋಗುತ್ತಿದ್ದೇನೆ. ಅವರು ಏಕೆ ನನ್ನ ವಿರುದ್ಧ ಹೇಳಿಕೆ ನೀಡಿದರೋ ಗೊತ್ತಿಲ್ಲ. ಅವರು ಒಬ್ಬ ದೊಡ್ಡ ನಾಯಕರು. ಆದ್ದರಿಂದ ನನ್ನ ಬಗ್ಗೆ ಮಾತನಾಡದೇ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ರಂತಹ ದೊಡ್ಡ ನಾಯಕರ ಜತೆ ಮಾತನಾಡಲಿ’’ ಎಂದು ವ್ಯಂಗ್ಯವಾಗಿ ಹೇಳಿದರು.

    ಇದನ್ನೂ ಓದಿ: 17ರಿಂದ ಅನ್ಯ ರಾಜ್ಯಗಳಿಗೆ ವಲಸಿಗರು ತೆರಳಲು ರೈಲುಗಳ ವ್ಯವಸ್ಥೆ, ಬಳ್ಳಾರಿ ಡಿಸಿ ಎಸ್.ಎಸ್ ನಕುಲ್ ಮಾಹಿತಿ

    ನಿನ್ನೆ ಬುಧವಾರ ಮಾಗಡಿಯಲ್ಲಿ ಮಾತನಾಡಿದ್ದ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ, ಕಾಂಗ್ರೆಸ್ ನಾಯಕರ ನಡೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರಲ್ಲದೆ ಬಿಜೆಪಿಯತ್ತ ವಾಲುವ ಲಕ್ಷಣಗಳನ್ನು ತೋರ್ಪಡಿಸಿದ್ದರು.

    ‘‘ಮುಖ್ಯಮಂತ್ರಿಗಳು ಬಿಜೆಪಿಗೆ ಆಹ್ವಾನಿಸಿದರೂ ನಿರಾಕರಿಸಿದ್ದೆ. ಪಕ್ಷದೊಳಗಿನ ಇತ್ತೀಚಿನ ಬೆಳವಣಿಗೆ ನೋಡಿದರೆ ಕಾಂಗ್ರೆಸ್ ಸೇರಿ ತಪ್ಪು ಮಾಡಿದೆ ಎನಿಸುತ್ತಿದೆ. ಬಿಜೆಪಿ ಸೇರ್ಪಡೆಗೊಳ್ಳುವ ಬಗ್ಗೆ ಕಾಲವೇ ನಿರ್ಣಯ ಮಾಡಲಿದೆ’’ ಎನ್ನುವ ಮೂಲಕ ಅವರು ಬಿಜೆಪಿ ಸೇರುವ ಸಾಧ್ಯತೆಯ ಸುಳಿವು ನೀಡಿದ್ದರು.

    ‘‘ಎಲ್ಲೋ ಒಂದು ಕಡೆ ನಾವು ತಪ್ಪು ಮಾಡಿದ್ದೇವೆ, ನಮ್ಮ ಶಕ್ತಿಯನ್ನು ಬೇರೆಯವರಿಗೆ ಧಾರೆ ಎರೆಯುತ್ತಿದ್ದ್ದೇವೆ ಎಂಬ ಭಾವನೆ ಮೂಡುತ್ತಿದೆ. ಬಿಜೆಪಿ, ಜೆಡಿಎಸ್‌ನಲ್ಲಿದ್ದಾಗ ಪ್ರಾಮಾಣಿಕವಾಗಿ ಪಕ್ಷ ಕಟ್ಟಿದ್ದೇವೆ. ಈಗ ಕಾಂಗ್ರೆಸ್‌ನಲ್ಲಿದ್ದೇವೆ, ಪಕ್ಷದ ಆದೇಶದಂತೆ ಕೆಲಸ ಮಾಡುತ್ತಿದ್ದರೂ ಸ್ವಪಕ್ಷೀಯರೇ ಕಾಲೆಳೆಯುವುದನ್ನು ನೋಡಿದರೆ ಕಾಂಗ್ರೆಸ್ ಸಂಘಟಿಸಬೇಕೆ, ಬೇಡವೆ ಎಂಬ ಗೊಂದಲ ಶುರುವಾಗಿದೆ. ಜೆಡಿಎಸ್ ಶಾಸಕರ ಮಾತಿನ ವರಸೆ ನೋಡಿದರೆ ಸಂಸದ, ಕೆಪಿಸಿಸಿ ಅಧ್ಯಕ್ಷರನ್ನೇ ನಿಯಂತ್ರಣದಲ್ಲಿಟ್ಟುಕೊಂಡಂತೆ ಭಾಸವಾಗುತ್ತದೆ’’ ಎಂದು ಶಾಸಕರು, ಸಂಸದರ ನಡೆ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು.

    ಇದನ್ನೂ ಓದಿ: ಕೆರೆ ಜಾಗ ಒತ್ತುವರಿ ತೆರವಿಗೆ ಕ್ರಮ

    ‘‘ಬಿಡದಿ ಕೆಐಎಡಿಬಿ ವಿಚಾರದಲ್ಲಿ ರೈತರ 14 ವರ್ಷದ ಸಮಸ್ಯೆಯನ್ನು ಪರಿಹರಿಸಿ ನ್ಯಾಯ ಕೊಡಿಸುತ್ತೇನೆ. ನನ್ನ ತಾಯಿಯ ಮೇಲಾಣೆ, ಬಿಡದಿ ಕೆಐಎಡಿಬಿ ವಿಷಯವಾಗಿ ಮುಖ್ಯಮಂತ್ರಿಗಳು ಕಾಯಕಲ್ಪ ನೀಡಲಿದ್ದಾರೆ. ಇದರಿಂದ ಈ ಯೋಜನೆ ಅಂತ್ಯಗೊಳಲಿದೆ. ಬಿ.ಎಸ್.ಯಡಿಯೂರಪ್ಪ ಅವರಿಗೆ ಕ್ಷೇತ್ರದ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ’’ ಎಂದೂ ಹೇಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts