ನಾನ್​ವೆಜ್​ ಪ್ರಿಯರಿಗೆ ಶಾಕಿಂಗ್​ ನ್ಯೂಸ್​: ವಾರಕ್ಕೆ 300 ಗ್ರಾಂ ಚಿಕನ್ ತಿಂದ್ರೆ ಈ ಕಾಯಿಲೆ​ ಬರೋ ಸಾಧ್ಯತೆ ಇದೆ! Chicken

Chicken

Chicken : ಮಾಂಸಾಹಾರ ಬಹುತೇಕರ ಪ್ರಿಯವಾದ ಆಹಾರ. ಬೇರೆ ಯಾವುದನ್ನು ಬೇಕಾದರೂ ಬಿಡುತ್ತೇನೆ ಆದರೆ, ಒಂದು ತುಂಡು ಮಾಂಸವಿಲ್ಲದೆ ಇರಲಾಗದು ಎಂದು ಅನೇಕರು ಹೇಳಿರುವುದನ್ನು ಕೇಳಿದ್ದೇವೆ. ಅದರಲ್ಲೂ ಭಾನುವಾರ ಬಂತೆಂದರೆ ಮಾಂಸಾಹಾರ ತಿನ್ನಲೇಬೇಕು. ಒಂದು ಕಾಲದಲ್ಲಿ ಜನರು ಭಾನುವಾರ ಮಾತ್ರ ತಿನ್ನುತ್ತಿದ್ದರು. ಆದರೀಗ ದಿನ ಯಾವುದೇ ಇರಲಿ, ಕೋಳಿ, ಮಟನ್, ಮೀನು ಮತ್ತು ಸೀಗಡಿಯಂತಹ ಮಾಂಸಾಹಾರಿ ಆಹಾರವನ್ನು ಸೇವಿಸುತ್ತಿದ್ದಾರೆ. ಕೆಲವರಿಗಂತೂ ಒಂದು ಪೀಸ್​ ಮಾಂಸ ತಿನ್ನದೇ ಇದ್ದರೆ ಆ ದಿನ ಪೂರ್ಣ ಅನಿಸುವುದೇ ಇಲ್ಲ.

blank

ಅಂದಹಾಗೆ ಮಾಂಸಾಹಾರದಲ್ಲಿ ಚಿಕನ್ ಬಹುತೇಕರ ನೆಚ್ಚಿನ ಆಹಾರವಾಗಿದೆ. ಎಷ್ಟರಮಟ್ಟಿಗೆ ಅಂದರೆ, ಕೆಲವರಿಗೆ ಪ್ರತಿದಿನ ಚಿಕನ್ ಬೇಕೇ ಬೇಕು. ಇಲ್ಲದಿದ್ದರೆ, ಏನೋ ಕಳೆದುಕೊಂಡಂತೆ ಚಡಪಡಿಸುತ್ತಾರೆ. ಚಿಕನ್ ತುಂಬಾ ರುಚಿಯಾಗಿರುವುದು ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು ಅಂತ ವೈದ್ಯರು ಹೇಳುತ್ತಾರೆ. ಆದಾಗ್ಯೂ, ಚಿಕನ್​ ವಿಚಾರದಲ್ಲಿ ಇದೀಗ ಆಘಾತಕಾರಿ ಸುದ್ದಿಯೊಂದು ಬೆಳಕಿಗೆ ಬಂದಿದೆ. ಅದೇನೆಂದರೆ, ಹೆಚ್ಚು ಚಿಕನ್ ತಿನ್ನುವುದರಿಂದ ಕ್ಯಾನ್ಸರ್ ಅಪಾಯ ಎದುರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಚಿಕನ್​ ಮೇಲೆ ನಡೆದ ಇತ್ತೀಚಿನ ಅಧ್ಯಯನದಲ್ಲಿ ಈ ಆಘಾತಕಾರಿ ಸಂಗತಿಗಳು ಬಹಿರಂಗವಾಗಿದೆ. ಹೆಚ್ಚು ಚಿಕನ್ ತಿನ್ನುವುದರಿಂದ ಜಠರಗರುಳಿನ ಕ್ಯಾನ್ಸರ್ (ಕರುಳಿನ ಕ್ಯಾನ್ಸರ್) ಅಪಾಯ ಹೆಚ್ಚಾಗುತ್ತದೆ ಎಂದು ಕಂಡುಬಂದಿದೆ.

ಕೋಳಿ ಮಾಂಸದಲ್ಲಿ ಪ್ರೋಟೀನ್ ಅಧಿಕವಾಗಿದೆ. ಇದರಲ್ಲಿ ವಿಟಮಿನ್ ಬಿ12 ಮತ್ತು ಕೋಲೀನ್ ಸಮೃದ್ಧವಾಗಿದೆ. ಇದು ಮಕ್ಕಳಲ್ಲಿ ನರಮಂಡಲವನ್ನು ಸುಧಾರಿಸುತ್ತದೆ. ಅಲ್ಲದೆ, ಚಿಕನ್​ ತಿನ್ನುವುದರಿಂದ ಶಕ್ತಿ ಸಿಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಕೆಂಪು ಮಾಂಸಕ್ಕೆ ಹೋಲಿಸಿದರೆ ಇದು ಕಡಿಮೆ ಆರೋಗ್ಯ ಅಪಾಯಗಳನ್ನು ಹೊಂದಿದೆ. ಕೋಳಿ ಮಾಂಸದ ಎಲ್ಲ ಪ್ರಯೋಜನಗಳ ಹೊರತಾಗಿಯೂ, ಇದನ್ನು ಪ್ರತಿದಿನ ತಿನ್ನುವುದರಿಂದ ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ. ಇತ್ತೀಚಿನ ಅಧ್ಯಯನವು ವಾರಕ್ಕೆ 300 ಗ್ರಾಂ ಗಿಂತ ಹೆಚ್ಚು ಕೋಳಿ ಮಾಂಸವನ್ನು ತಿನ್ನುವುದರಿಂದ ಕೊಲೊನ್ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ ಎಂದು ತೋರಿಸಿದೆ. ಮತ್ತೊಂದು ಆಘಾತಕಾರಿ ಸಂಗತಿಯೆಂದರೆ ಈ ಅಪಾಯವು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಇದನ್ನೂ ಓದಿ: ಹಲವು ದಿನಗಳಿಂದ ಕಾಡುತ್ತಿದೆ ಈ ಸಮಸ್ಯೆ… ಅಭಿಮಾನಿಗಳ ಬಳಿ ಸಹಾಯ ಕೋರಿದ ಸೌತ್​ ಬ್ಯೂಟಿ ಅನಿಕಾ! Anikha Surendran

ವಿವಿಧ ರೀತಿಯ ಕೋಳಿ ಮಾಂಸವನ್ನು (ಕೋಳಿ, ಟರ್ಕಿ ಮತ್ತು ಬಾತುಕೋಳಿ ಮುಂತಾದ ಮಾಂಸಗಳು) ತಿನ್ನುವುದರಿಂದ ದೀರ್ಘಕಾಲೀನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ವಿಷಯದ ಮೇಲೆ ವಿಜ್ಞಾನಿಗಳ ತಂಡವು ಅಧ್ಯಯನ ಮಾಡಿದೆ. ಅಧ್ಯಯನವು ಕೆಲವು ಆಶ್ಚರ್ಯಕರ ಸಂಶೋಧನೆಗಳನ್ನು ಬಹಿರಂಗಪಡಿಸಿದೆ. ಸಂಶೋಧಕರು 19 ವರ್ಷಗಳ ಅವಧಿಯಲ್ಲಿ 4,000 ಕ್ಕೂ ಹೆಚ್ಚು ಜನರನ್ನು ಅಧ್ಯಯನ ಮಾಡಿ ಈ ಆಶ್ಚರ್ಯಕರ ಫಲಿತಾಂಶವನ್ನು ಕಂಡುಹಿಡಿದಿದೆ.

ಬಿಳಿ ಮಾಂಸವನ್ನು ಹೆಚ್ಚಾಗಿ ತಿನ್ನುವ ಜನರಿಗೆ ಕೊಲೊನ್ ಕ್ಯಾನ್ಸರ್ ಇರುವುದು ಕಂಡುಬಂದಿದೆ. ಮೇದೋಜ್ಜೀರಕ ಗ್ರಂಥಿಯ ಸಮಸ್ಯೆಗಳು, ಯಕೃತ್ತಿನ ಕಾಯಿಲೆ, ಹೊಟ್ಟೆ ನೋವು ಮತ್ತು ಗುದನಾಳದ ಕ್ಯಾನ್ಸರ್ ಅನ್ನು ಸಹ ಗುರುತಿಸಲಾಗಿದೆ. ಮಿತಿ ಮೀರಿ ಮಾಂಸ ಸೇವಿಸುವವರಲ್ಲಿ ಸುಮಾರು 27 ಪ್ರತಿಶತದಷ್ಟು ಜನರು ಯಾವುದಾದರೂ ಒಂದು ರೀತಿಯ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಪುರುಷರು. ವಾರಕ್ಕೆ 200 ಗ್ರಾಂ ಕೋಳಿ ಮಾಂಸ ತಿನ್ನುವ ಜನರಿಗೆ ಜಠರಗರುಳಿನ ಕ್ಯಾನ್ಸರ್ ಕೂಡ ಇರುತ್ತದೆ. ವಾರಕ್ಕೆ 300 ಗ್ರಾಂ ಗಿಂತ ಹೆಚ್ಚು ಕೋಳಿ ಮಾಂಸ ತಿನ್ನುವ ಜನರಿಗೆ ಜಠರಗರುಳಿನ ಕ್ಯಾನ್ಸರ್​ನಿಂದ ಸಾಯುವ ಅಪಾಯವು 27 ರಷ್ಟು ಹೆಚ್ಚಾಗುತ್ತದೆ.

ಒಟ್ಟಾರೆಯಾಗಿ, ಸಂಶೋಧಕರು ಹೇಳುವಂತೆ ಕೋಳಿ ಮಾಂಸವನ್ನು ಮಿತವಾಗಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಇದನ್ನು ವಾರಕ್ಕೆ 2 ಅಥವಾ 3 ದಿನಗಳು ಮಾತ್ರ ತಿನ್ನಬೇಕು. ವಾರಕ್ಕೆ 100 ಗ್ರಾಂ ವರೆಗೆ ತಿನ್ನುವುದರಿಂದ ಯಾವುದೇ ಅಪಾಯವಿಲ್ಲ. ಪ್ರತಿದಿನಕ್ಕಿಂತ ಹೆಚ್ಚಾಗಿ ವಾರಕ್ಕೆ 2 ಅಥವಾ 3 ಬಾರಿ ಅಂತರದಲ್ಲಿ ತಿನ್ನುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಇದು ಕ್ಯಾನ್ಸರ್ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. (ಏಜೆನ್ಸೀಸ್​)

ನಮ್ಮ ಹತ್ತಿರ 130… ಭಾರತದ ವಿರುದ್ಧ ಸ್ಫೋಟಕ ಹೇಳಿಕೆ ನೀಡಿದ ಪಾಕ್​ ರೈಲ್ವೆ ಸಚಿವ ಹನೀಫ್ ಅಬ್ಬಾಸಿ! Hanif Abbasi

ಜಮೀನು ಮಾರಲು ಬಿಡದ ತಂದೆ-ತಾಯಿಯನ್ನು ಟ್ರ್ಯಾಕ್ಟರ್​ನಿಂದ ಚೇಸ್​ ಮಾಡಿ ಬರ್ಬರವಾಗಿ ಕೊಂದ ಮಗ! Son Chases Parents

ನಾವು ಬದುಕಿದ್ರೆ ಭಾರತದಲ್ಲೇ ಬದುಕುತ್ತೇವೆ ಇಲ್ಲದಿದ್ರೆ ಸಾಯುತ್ತೇವೆ… ಆದ್ರೆ ಪಾಕಿಸ್ತಾನಕ್ಕೆ ಮಾತ್ರ ಹೋಗಲ್ಲ! Pahalgam attack

Share This Article

ಪ್ರತಿದಿನ ಒಂದು ಕಪ್ ಅರಿಶಿನ ಶುಂಠಿ ಚಹಾ ಕುಡಿದು ಈ ಎಲ್ಲಾ ಸಮಸ್ಯೆಗಳಿಗೆ ಗುಡ್​​ ಬಾಯ್​​ ಹೇಳಿ | Immunity

Immunity: ನಿಮ್ಮ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಿದ್ದರೆ, ಅಡುಗೆಮನೆಯಲ್ಲಿರುವ ಅರಿಶಿನ ಮತ್ತು ಶುಂಠಿ ಪದಾರ್ಥಗಳು ಅದನ್ನು…

ಬೆಳಿಗ್ಗೆ ಎದ್ದ ತಕ್ಷಣ ಹೀಗೆ ಮಾಡಿ..ನಿಮ್ಮ ದೇಹದ ಕೊಬ್ಬು ತಕ್ಷಣ ಕಡಿಮೆಯಾಗುತ್ತದೆ! weight loss

weight loss: ಇತ್ತೀಚಿನ ದಿನಗಳಲ್ಲಿ, ಹೊಟ್ಟೆಯ ಸುತ್ತ ಇರುವ ಮೊಂಡುತನದ ಕೊಬ್ಬನ್ನು ಕಡಿಮೆ ಮಾಡುವುದು (ತೂಕ…

ಎಸಿ, ಫ್ಯಾನ್​ ಇದ್ದರೂ ಬೆವರುತ್ತಿದ್ದೀರಾ?; ತಂಪಿನ ಪ್ರದೇಶದಲ್ಲಿಯೂ ಇಷ್ಟೊಂದು ಹಿಟ್​ ಇರಲು ಕಾರಣವೇನು?: ಇಲ್ಲಿದೆ ಮಾಹಿತಿ | Sweating

Sweating: ಸಾಮಾನ್ಯವಾಗಿ ಬಹುತೇಕರು ಶಕೆಯಲ್ಲಿ ಬೆವರುವುದನ್ನು ಕಾಣುತ್ತೇವೆ. ಆದರೆ, ಇನ್ನು ಕೆಲ ಜನರು ತಾಪಮಾನ 35ಕ್ಕೂ…