ಹಲವು ದಿನಗಳಿಂದ ಕಾಡುತ್ತಿದೆ ಈ ಸಮಸ್ಯೆ... ಅಭಿಮಾನಿಗಳ ಬಳಿ ಸಹಾಯ ಕೋರಿದ ಸೌತ್​ ಬ್ಯೂಟಿ ಅನಿಕಾ! Anikha Surendran

Anikha Surendran
Published on

Anikha Surendran : ತಲಾ ಅಜಿತ್​ ಅಭಿನಯದ ಕಾಲಿವುಡ್​ ಸೂಪರ್​ ಡೂಪರ್​ “ಯೆನ್ನೈ ಅರಿಂದಾಲ್​” ಮತ್ತು “ವಿಶ್ವಾಸಂ” ಚಿತ್ರಗಳಲ್ಲಿ ಮಗಳ ಪಾತ್ರದಲ್ಲಿ ಬಾಲ ನಟಿಯಾಗಿ ನಟಿಸುವ ಮೂಲಕ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದ ಅನಿಕಾ ಸುರೇಂದ್ರನ್, ಇದೀಗ ನಾಯಕಿಯಾಗಿ ಅನೇಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಅನಿಕಾ ಅವರ ವಯಸ್ಸು 20. ದಕ್ಷಿಣ ಭಾರತದ ಭರವಸೆಯ ನಾಯಕಿಯಾಗುವ ಎಲ್ಲ ಲಕ್ಷಣಗಳು ಅನಿಕಾರಲ್ಲಿದೆ.

ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಅನಿಕಾ, ಆಗಾಗ ತಮ್ಮ ಸ್ಟೈಲಿಶ್​ ಹಾಗೂ ಹಾಟ್​ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಿರುತ್ತಾರೆ. ಅನಿಕಾರ ಬೋಲ್ಡ್​ ಅವತಾರಗಳನ್ನು ನೋಡಿ ಅನೇಕರು ಟೀಕಾ ಪ್ರಹಾರ ಮಾಡುತ್ತಿರುತ್ತಾರೆ. ಅಲ್ಲದೆ, ಟ್ರೋಲ್​ ಸಹ ಮಾಡುತ್ತಾರೆ. ಇನ್ನು ಕೆಲವರು ಕೆಟ್ಟದಾಗಿ ನಿಂದಿಸುತ್ತಾರೆ. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತಮಗನಿಸಿದ್ದನ್ನು ಮಾಡುತ್ತಾರೆ ಅನಿಕಾ.

ತಾಜಾ ಸಂಗತಿ ಏನೆಂದರೆ, ಕಳೆದ ಎರಡು ತಿಂಗಳಿನಿಂದ ಅನಿಕಾ ಅವರು ಒಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರಂತೆ. ಅದೇನೆಂದರೆ, ತಮ್ಮ ಇನ್​ಸ್ಟಾಗ್ರಾಂನಲ್ಲಿ ಬೇಸರದಿಂದಿರುವ ತಮ್ಮ ಫೋಟೋವನ್ನು ಪೋಸ್ಟ್ ಮಾಡಿರುವ ಅನಿಕಾ, ತನ್ನ ರೀಲ್ ಗಳಿಗೆ ಮ್ಯೂಸಿಕ್​ ಸೇರಿಸಲು ಆಗುತ್ತಿಲ್ಲ ಎಂದಿದ್ದಾರೆ. ಈ ಫೀಚರ್​ ತನ್ನ ಇತರ ಖಾತೆಗಳಿಗೆ ಕೆಲಸ ಮಾಡುತ್ತದೆ ಆದರೆ, ಎರಡು ತಿಂಗಳಿನಿಂದ ತನ್ನ ಅಧಿಕೃತ ಖಾತೆಗೆ ಕೆಲಸ ಮಾಡುತ್ತಿಲ್ಲ ಎಂದು ಅನಿಕಾ ಹೇಳಿದ್ದಾರೆ.

Anikha Surendran 1

ತನ್ನ ಬಿಸಿನೆಸ್​ ಖಾತೆಯನ್ನು ಕ್ರಿಯೇಟರ್ ಖಾತೆಗೆ ಬದಲಾಯಿಸಿದ್ದರೂ, ಆ ಫೀಚರ್​ನಲ್ಲಿ ಮ್ಯೂಸಿಕ್​ ಸೇರಿಸಲು ಸಾಧ್ಯವಾಗುತ್ತಿಲ್ಲ ಎಂದಿರುವ ಅನಿಕಾ, ಇದನ್ನು ಸರಿಪಡಿಸುವುದು ಹೇಗೆ ಅಂತ ಗೊತ್ತಾಗುತ್ತಿಲ್ಲ. ನಿಮ್ಮಲ್ಲಿ ಯಾರಿಗಾದರೂ ಗೊತ್ತಿದ್ದರೆ ನನಗೆ ತಿಳಿಸಿ ಎಂದು ಅನಿಕಾ ಮನವಿ ಮಾಡಿದ್ದಾರೆ.

Anikha Surendran 2

ಅಂದಹಾಗೆ ಅನಿಕಾ ಅವರು ತುಂಬಾ ಬೋಲ್ಡ್​ ಆಗಿ ಮಾತನಾಡುವುದರಲ್ಲಿ ಹಿಂಜರಿಯುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕೇಳುವ ಅಶ್ಲೀಲ ಪ್ರಶ್ನೆಗಳಿಗೂ ತುಂಬಾ ನೇರವಾಗಿಯೇ ಉತ್ತರಿಸುತ್ತಾರೆ. ಈ ಹಿಂದೆ ನೆಟ್ಟಿಗರೊಬ್ಬರು ಇದು ಸ್ವಲ್ಪ ವಿಚಿತ್ರ ಅನಿಸಬಹುದು ಆದರೆ, ನನಗೆ ಬ್ರಾಗಳ ಬಗ್ಗೆ ಸಲಹೆ ಬೇಕಿದೆ. ನೀವು ಯಾವುದನ್ನು ಬಳಸುತ್ತೀರಿ ಹೇಳಿ ಎಂದು ಪ್ರಶ್ನಿಸಿದ್ದರು. ಇದಕ್ಕೆ ಸ್ವಲ್ಪವೂ ಸಂಕೋಚ ಪಟ್ಟುಕೊಳ್ಳದ ಅನಿಕಾ, ಹತ್ತಿಯಲ್ಲಿ ಮಾಡಿದ ಸರಿಯಾದ ಗಾತ್ರದ ಬ್ರಾಗಳನ್ನು ನಿಮಗೆ ಸಲಹೆ ನೀಡುತ್ತೇನೆ. ಜಿವಾಮೆಯಂತಹ ಸೈಟ್​ಗಳ ಮೂಲಕ ಆನ್​ಲೈನ್​ನಲ್ಲಿ ನಾನು ಖರೀದಿಸುತ್ತೇನೆ ಎಂದಿದ್ದರು. ಇದು ಕೂಡ ವೈರಲ್​ ಆಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net