More

    ಚೆನ್ನೈ ಕೋರ್ಟ್​​ನಿಂದ ನಟ ವಿಶಾಲ್​ಗೆ 500 ರೂ. ದಂಡ.. ಕಾರಣ?

    ಚೆನೈ: ಚೆನ್ನೈ ಎಗ್ಮೋರ್ ನ್ಯಾಯಾಲಯವು ಜನವರಿ 3, 2022 ರಂದು ತಮಿಳಿನ ಖ್ಯಾತ ನಟ ವಿಶಾಲ್​ಗೆ ದಂಡ ವಿಧಿಸಿದೆ. ಅಂದಹಾಗೆ, ಇದು ನಟನ ವಿರುದ್ಧ 2016ರಲ್ಲಿ ಮಾಡಿದ ಆದಾಯ ತೆರಿಗೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಬ ಮಾಹಿತಿ ಇದೆ. 2016 ರಲ್ಲಿ, ನಟನು 1 ಕೋಟಿ ರೂಪಾಯಿಗಳವರೆಗೆ ತೆರಿಗೆಯನ್ನು ಪಾವತಿಸಿಲ್ಲ ಎಂದು ವರದಿಯಾಗಿತ್ತು. ಹೀಗಾಗಿ, ಆದಾಯ ತೆರಿಗೆ ಅಧಿಕಾರಿಗಳು ವಿಶಾಲ್ ಅವರ ಕಚೇರಿಯ ಮೇಲೆ ದಾಳಿ ನಡೆಸಿದಾಗ, ಇದಕ್ಕೆ ಸಂಬಂಧ ನಟನ ಕಚೇರಿಯಲ್ಲಿ ದಾಖಲೆಗಳು ಲಭಿಸಿವೆ ಎಂದು ಆದಾಯ ತೆರಿಗೆ ಅಧಿಕಾರಿಗಳು ಆರೋಪಿಸಿದರು.
    ಜೊತೆಗೆ, ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಖುದ್ದು ಹಾಜರಾಗುವಂತೆ ವಿಶಾಲ್‌ಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದ್ದು, 10ನೇ ಬಾರಿ ಕರೆದರೂ ನಟ ಹಾಜರಾಗಿಲ್ಲ. ವಿಚಾರಣೆಗೆ ಒಳಪಡದ ಕಾರಣಕ್ಕೆ ಆದಾಯ ತೆರಿಗೆ ಇಲಾಖೆಯು ನಟನ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯವು ನಟನಿಗೆ 500 ರೂ. ದಂಡ ವಿಧಿಸಿದೆ. ಈ ವಿಚಾರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ನಟ ವಿಶಾಲ್ ಈ ವಿಚಾರ ಕುರಿತು ಮಾದ್ಯಮಗಳಿಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ

    ಲೆಜೆಂಡ್ ಬಾಲಯ್ಯನಿಗೆ ಸ್ಯಾಂಡಲ್​​ವುಡ್ ಕರಿ ಚಿರತೆ ಚಾಲೆಂಜ್! #NBK107 ನಲ್ಲಿ ಸಲಗನದ್ದೇ ಸೌಂಡು!

    ಮುಖ ತೋರಿಸ್ರೀ.. ಅಂತ ಅದಿತಿ ಕೇಳಿದ್ರೂ ಭಾವಿಪತಿ ಕಿವಿಗೊಡಲಿಲ್ಲ! ವಿಡಿಯೋ ವೈರಲ್

    ‘ಐ ಲವ್ ಯೂ ರಮ್ಯಾ’, ಪ್ಲೀಸ್ ಈ ಒಂದು ಬೇಡಿಕೆ ಈಡೇರಿಸು ಎಂದ ರಚ್ಚು! ಏನದು…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts