More

    ಬೆಂ. ಗ್ರಾಮಾಂತರ ಮತದಾನ ಮುಕ್ತಾಯ

    ರಾಮನಗರ: ತೀವ್ರ ಕುತೂಹಲ ಮೂಡಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಮತದಾರದ ತೀರ್ಪು ಯಾವುದೇ ಅಹಿತಕರ ಘಟನೆಗಳಿಗೆ ಸಾಕ್ಷಿಯಾಗದೆ ಮತಯಂತ್ರ ಸೇರಿವೆ.
    ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಸ್ಪರ್ಧೆಯಿಂದ ರಂಗೇರಿದ್ದ ಚುನಾವಣೆ ಕಣ ಯಾವುದೇ ಅಹಿತಕರ ಘಟನೆಗೆ ಸಾಕ್ಷಿಯಾಗದೆ ಶಾಂತಿಯುತವಾಗಿ ಮುಕ್ತಾಯ ಕಂಡಿದ್ದು, ಶೇ.68.30ರಷ್ಟು ಮತದಾನವಾಗಿದೆ.

    ಬಿಸಿಲ ಬೇಗೆಯ ನಡುವೆಯೇ ಗ್ರಾಮೀಣ ಭಾಗದಲ್ಲಿ ಉತ್ತಮ ಮತದಾನವಾಗಿದ್ದು, ನಗರ ಪ್ರದೇಶದಲ್ಲಿ ಕೊಂಚ ಮತದಾನ ಹಿನ್ನಡೆ ಕಂಡ ಹೊರತಾಗಿಯೂ ಶೇಖಡಾವಾರು ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ.

    ಶುಕ್ರವಾರ ಆರಂಭದಲ್ಲಿ ಕೊಂಚ ಮಂದಗತಿಯಲ್ಲಿ ಸಾಗಿದ ಮತದಾನ ಬಿಸಿಲು ಏರುತ್ತಿದ್ದಂತೆ ಚುರುಕು ಪಡೆಯಿತು. ನಂತರ ಬಿಸಿಲ ತಾಪ ಏರಿಕೆಯಗುತ್ತಿದ್ದಾಂತೆ ಮತದಾನ ಪ್ರಮಾಣದ ಮೇಳೆ ಮಂಕು ಕವಿಯಿತು. ಸಂಜೆ 4ರ ನಂತರ ಮತದಾರರು ಬಿರುಸಿನ ಮತದಾನದಲ್ಲಿ ಪಾಲ್ಗೊಂಡರು.
    ಬೆಳಿಗ್ಗೆ ಮದಲ ಎರಡು ಗಂಟೆಗಳ ಅವಧಿಯಲ್ಲಿ ಶೇ.8.17 ರಷ್ಟು ಮತದಾನ ಮಾತ್ರ ನಡೆದಿತ್ತು.

    ಆದರೆ ಬಿಸಿಲೇರುತ್ತಿದ್ದಂತೆ ಕಾವು ಪಡೆದ ಮತದಾನ 11 ಗಂಟೆಗೆ ಶೇ.20.35 ರಷ್ಟು, ಮಧ್ಯಾಹ್ನ 1 ಗಂಟೆ ವೇಳೆ ಶೇ. 36.09ರಷ್ಟು ಆಯಿತು. ಗ್ರಾಮೀಣ ಭಾಗದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾತ ಮಾಡಿದ್ದರಿಂದ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ.49.62ರ ರಷ್ಟು ದಾಖಲಾಯಿತು. 5 ಗಂಟೆ ವೇಳೆಗೆ 61.78 ರಷ್ಟು ಮತಧಾನವಾಗಿತ್ತು. ಅಂತಿಮವಾಗಿ ಶೇ 68.30ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts