More

    ಲೋಕಸಭಾ ಚುನಾವಣೆ: ಕಾಂಗ್ರೆಸ್​ ಪಕ್ಷಕ್ಕೆ ಬಿಗ್ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್!

    ನವದೆಹಲಿ: ಯಾವುದೇ ರಾಜಕೀಯ ಪಕ್ಷಕ್ಕೆ ಯಾವುದೇ ಸಮಸ್ಯೆ ತಪ್ಪಿಸಲು 2024ರ ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್‌ ಪಕ್ಷದಿಂದ ಸುಮಾರು 3,500 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಲು ಆದಾಯ ತೆರಿಗೆ ಇಲಾಖೆ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸೋಮವಾರ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ ಜುಲೈ 24, 2024 ರಂದು ನಡೆಯಲಿದೆ.

    ಇದನ್ನೂ ಓದಿ:ದಿಲ್ಲಿ ಅಬಕಾರಿ ನೀತಿಯ ಘಾಟು: ಕ್ರೇಜಿವಾಲ್​ಗೆ ಏ.15ರವರೆಗೆ ನ್ಯಾಯಾಂಗ ಬಂಧನ 

    2024ರ ಲೋಕಸಭಾ ಚುನಾವಣೆಯ ಮೊದಲ ಹಂತ ಪ್ರಾರಂಭವಾಗುವ ಕೆಲವೇ ವಾರಗಳಲ್ಲಿ, ಆದಾಯ ತೆರಿಗೆ ಇಲಾಖೆಯಿಂದ ಐದು ವರ್ಷಗಳವರೆಗೆ (1994-95 ಮತ್ತು 2017- 2018 ರಿಂದ 2020-21) ಕಾಂಗ್ರೆಸ್ 1,823 ರೂ. ಪಾವತಿಸುವಂತೆ ಹೊಸ ನೋಟಿಸ್‌ಗಳನ್ನು ಸ್ವೀಕರಿಸಿದೆ. ಇದಲ್ಲದೆ ಶನಿವಾರ, ಕಾಂಗ್ರೆಸ್​ಗೆ ಆದಾಯ ತೆರಿಗೆ ಇಲಾಖೆಯಿಂದ 2014-15 ರಿಂದ 2016-17 ರ ಮೌಲ್ಯಮಾಪನ ವರ್ಷಗಳವರೆಗೆ 1,745 ಕೋಟಿ ರೂ.ಗಳ ಪಾವತಿಸುವಂತೆ ನೋಟಿಸ್ ಸ್ವೀಕರಿಸಿತ್ತು.

    ಲೋಕಸಭಾ ಚುನಾವಣೆ: ಕಾಂಗ್ರೆಸ್​ ಪಕ್ಷಕ್ಕೆ ಬಿಗ್ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್!

    2019ರ ಲೋಕಸಭೆ ಚುನಾವಣೆಗೆ ಮುನ್ನ ಐಟಿ ಇಲಾಖೆ ನಡೆಸಿದ ದಾಳಿಗಳಲ್ಲಿ 523.87 ಕೋಟಿ ರೂ.ಗಳ “ಲೆಕ್ಕ ರಹಿತ ವಹಿವಾಟುಗಳನ್ನು” ಪತ್ತೆಹಚ್ಚಿರುವುದಾಗಿ ಹೇಳಿಕೊಂಡಿರುವುದನ್ನು ಅನುಸರಿಸಿ ನೋಟಿಸ್‌ಗಳ ಸರಮಾಲೆ ಬಂದಿದೆ.

    ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಆರ್ಥಿಕವಾಗಿ ದುರ್ಬಲಗೊಳಿಸಲು ತೆರಿಗೆ ಭಯೋತ್ಪಾದನೆಯಲ್ಲಿ ತೊಡಗಿದೆ ಎಂದು ಕಾಂಗ್ರೆಸ್​ ಆರೋಪಿಸಿದೆ.

    IPL 2024: ರೋಹಿತ್ ಶರ್ಮಾ ವಿಕೆಟ್​ಗೆ​ ಸಂಭ್ರಮಿಸಿದ್ದ ಸಿಎಸ್​ಕೆ ಅಭಿಮಾನಿಯನ್ನು ಕೊಲೆಗೈದ MI ಫ್ಯಾನ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts