

ನವದೆಹಲಿ: ದಿನದಿಂದ ದಿನಕ್ಕೆ ಸಾರ್ವಕಾಲಿಕ ದಾಖಲೆಗಳನ್ನು ಬ್ರೇಕ್ ಮಾಡುತ್ತಿರುವ ಚಿನ್ನ (Gold Rates), ಇಂದೂ ಸಹ ಏರಿಕೆಯತ್ತ ಮುಖಮಾಡಿದೆ. ಈ ಹಿಂದೆ ಕೇವಲ ಒಂದೆರೆಡು ಸಾವಿರ ರೂ. ಮಾತ್ರ ಹೆಚ್ಚಾಗುತ್ತಿದ್ದ ಗೋಲ್ಡ್ ಬೆಲೆ ಇಂದು ಏಕಕಾಲಕ್ಕೆ ಮೂರು ಸಾವಿರ ರೂ.ಗಿಂತ ಏರಿಕೆ ಕಾಣುತ್ತಿದೆ. ಸದ್ಯ ಈ ಬೆಳವಣಿಗೆ ಚಿನ್ನದಂತ ಗ್ರಾಹಕರನ್ನು ಭಾರೀ ಆಘಾತಕ್ಕೆ ದೂಡಿದೆ. ಕೇವಲ ಚಿನ್ನ ಮಾತ್ರವಲ್ಲದೇ ಬೆಳ್ಳಿ ಕೂಡ ಹೊಸ ದಾಖಲೆಗಳನ್ನು ಬರೆಯುತ್ತಿದ್ದು, ಇಂದು ಒಂದೇ ದಿನ 8000 ರೂ. ಜಾಸ್ತಿಯಾಗಿದೆ.
ಚಿನ್ನ ಮತ್ತು ಬೆಳ್ಳಿ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪುತ್ತಿವೆ. ಹಿಂದೆಂದೂ ಕಾಣದ ಮಟ್ಟದಲ್ಲಿ ಇವುಗಳ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ದಾಖಲಿಸುತ್ತಿವೆ. ಮಂಗಳವಾರ (ಅ.14) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ ಚಿನ್ನದ 10 ಗ್ರಾಂ. 3,280 ರೂ. ಹೆಚ್ಚಾದರೆ, 22 ಕ್ಯಾರೆಟ್ 3000 ರೂ. ಹೆಚ್ಚಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರವೂ ಏರಿದೆ. ಒಂದು ಔನ್ಸ್ ಚಿನ್ನದ ಬೆಲೆ 60 ಡಾಲರ್ ಏರಿಕೆಯಾಗಿದೆ. ಇದರೊಂದಿಗೆ, ಒಂದು ಔನ್ಸ್ ಚಿನ್ನದ ಬೆಲೆ ಪ್ರಸ್ತುತ 4,174 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ.
ಮತ್ತೊಂದೆಡೆ, ಚಿನ್ನದ ಬೆಲೆಗೆ ಸಖತ್ ಪೈಪೋಟಿ ಕೊಡುತ್ತಿರುವ ಬೆಳ್ಳಿ ಬೆಲೆ, ಇಂದು ಒಂದೇ ದಿನ ಪ್ರತಿ ಕೆಜಿಗೆ 8 ಸಾವಿರ ರೂ. ಹೆಚ್ಚಾಗಿದೆ. ಇದರೊಂದಿಗೆ, ಒಂದು ಕೆಜಿ ಬೆಳ್ಳಿಯ ಬೆಲೆ 2 ಲಕ್ಷ ರೂ. ದಾಟಿದ್ದು, ಹೊಸ ದಾಖಲೆಗಳನ್ನು ನಿರ್ಮಿಸುವತ್ತ ಸಾಗುತ್ತಿವೆ.
ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ.