

ನವದೆಹಲಿ: ದೀಪಾವಳಿ ಹಬ್ಬ ಕಳೆಯುತ್ತಿದ್ದಂತೆ ಒಂದು ವಾರ ಸತತವಾಗಿ ಕುಸಿದ ಚಿನ್ನದ ಬೆಲೆ (Gold) ಇದೀಗ ಮತ್ತೆ ಇಳಿಕೆಯತ್ತ ಮುಖಮಾಡಿದೆ. ಗೋಲ್ಡ್ ಬೆಲೆಯೊಂದಿಗೆ ಬೆಳ್ಳಿ ದರವು ಕಡಿಮೆಯಾಗಿದೆ. ಇದು ಖರೀದಿದಾರರಿಗೆ ಶುಭ ಸುದ್ದಿಯಾಗಿದ್ದು, ಶೀಘ್ರವೇ ಕೊಳ್ಳುವಿಕೆಯತ್ತ ಗಮನ ಹರಿಸಬಹುದು ಎಂಬ ಮುನ್ಸೂಚನೆ ನೀಡಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬದಲಾವಣೆಗಳಿಂದಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ತೀವ್ರವಾಗಿ ಕುಸಿದಿವೆ. ಇಂದು (ನ.04)ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆಯಲ್ಲಿ 710 ರೂ. ಇಳಿದಿದ್ದು, 22 ಕ್ಯಾರೆಟ್ ಚಿನ್ನದ 650 ರೂ. ಇಳಿಕೆಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರವೂ ಕುಸಿದಿದೆ. ಒಂದು ಔನ್ಸ್ ಚಿನ್ನದ ಬೆಲೆ 12 ಡಾಲರ್ ಕಡಿಮೆಯಾಗಿದೆ. ಪ್ರಸ್ತುತ, ಒಂದು ಔನ್ಸ್ ಚಿನ್ನ 3,991 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ. ಬೆಳ್ಳಿಯ ಬೆಲೆಯೂ ಇಳಿದಿದೆ. ಒಂದು ಕೆಜಿ ಬೆಳ್ಳಿ 3,000 ರೂ. ಇಳಿಕೆಯಾಗಿದೆ.
ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ.