More

    ವಿಘ್ನೇಶ್ ಶಿವನ್, ನಯನತಾರಾ ವಿರುದ್ಧ ವಂಚನೆ ಪ್ರಕರಣ ದಾಖಲು

    ತಮಿಳುನಾಡು: ಸೆನ್ಸೇಷನಲ್ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಆರು ವರ್ಷಗಳ ಹಿಂದೆ ಪ್ರೀತಿಸಿ, ಎರಡು ವರ್ಷಗಳ ಹಿಂದೆ ಲಿವಿನ್ ರಿಲೇಶನ್ ಶಿಪ್​​​​ನಲ್ಲಿದ್ದಾಗ ಮದುವೆಯಾಗಿದ್ದರು. ನಯನತಾರಾ ಕೌಟುಂಬಿಕ ಜೀವನದಲ್ಲಿ ಸುಖವಾಗಿದ್ದರೂ ವೈಯಕ್ತಿಕವಾಗಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವುದು ಗೊತ್ತೇ ಇದೆ. ಬಾಡಿಗೆ ತಾಯ್ತನದ ಮೂಲಕ ಈ ಜೋಡಿ ಅವಳಿ ಮಕ್ಕಳಿಗೆ ಪೋಷಕರಾಗಿರುವುದು ಕೂಡ ವಿವಾದಕ್ಕೆ ಕಾರಣವಾಗಿತ್ತು.

    ಇತ್ತೀಚೆಗೆ ನಯನತಾರಾ ಮತ್ತೊಂದು ಸಮಸ್ಯೆ ಎದುರಿಸಬೇಕಾಗಿ ಬಂದಿದೆ. ವಿಘ್ನೇಶ್ ಶಿವನ್ ಅವರ ಪೂರ್ವಜರು ತಿರುಚಿ ಜಿಲ್ಲೆಯ ಲಾಲ್ಕುಡಿ ಗ್ರಾಮದವರು ಮತ್ತು ಅವರ ತಂದೆಯ ಹೆಸರು ಶಿವಕೋಲುಡು. ಶಿವಕೋಲುಡು ಅವರಿಗೆ ಒಂಬತ್ತು ಸಹೋದರರು ಮತ್ತು ಸಹೋದರಿಯರು. ಪೊಲೀಸ್ ಇನ್ಫಾರ್ಮರ್ ಆಗಿ ಕೆಲಸ ಮಾಡುತ್ತಿದ್ದ ವಿಘ್ನೇಶ್ ಶಿವನ್ ತಂದೆ ಶಿವಕೋಲುಡು ತೀರಿಕೊಂಡಿದ್ದಾರೆ. ಆದರೆ ಅವರು ಬದುಕಿದ್ದಾಗ ಸಹೋದರರಿಗೆ ತಿಳಿಯದಂತೆ ಆಸ್ತಿ ಮಾರಾಟ ಮಾಡಿದ್ದಾರೆ ಎಂದು ಶಿವಕೋಲುಡು ಅವರ ಸಹೋದರ ಮಾಣಿಕ್ಯಂ ಕುಂಚಿತಾ ಪದಮ್, ಕೊಯಮತ್ತೂರಿನಲ್ಲಿ ವಾಸಿಸುವ ಇನ್ನೊಬ್ಬ ಸಹೋದರ ಡಿಎಸ್ಪಿ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.

    ಈ ಸಂಬಂಧ ವಿಘ್ನೇಶ್ ಶಿವನ್, ಅವರ ಪತ್ನಿ ನಯನತಾರಾ, ವಿಘ್ನೇಶ್ ಶಿವನ್ ತಾಯಿ ಮೀನಾ ಕುಮಾರಿ ಮತ್ತು ಪುತ್ರಿ ಐಶ್ವರ್ಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

    ವಿಘ್ನೇಶ್ ಶಿವನ್ ಅವರ ತಂದೆ ತಮಗೆ ತಿಳಿಯದಂತೆ ಜಂಟಿ ಆಸ್ತಿಯನ್ನು ಇತರರಿಗೆ ಮಾರಾಟ ಮಾಡಿ ವಂಚನೆ ಮಾಡಿದ್ದು, ತಮ್ಮ ಆಸ್ತಿಯನ್ನು ಖರೀದಿಸಿದವರಿಗೆ ವಿಘ್ನೇಶ್ ಶಿವನ್ ಹಣವನ್ನು ಹಿಂದಿರುಗಿಸಿ, ಆಸ್ತಿಯನ್ನು ತಮಗೆ ಪುನಃ ಹಸ್ತಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಮಾಣಿಕ್ಯಂ ದೂರಿನಲ್ಲಿ ತಿಳಿಸಿದ್ದಾರೆ.

    ಹೀಗಾಗಿ ಪ್ರಕರಣದ ತನಿಖೆ ನಡೆಸುವಂತೆ ತಿರುಚ್ಚಿ ಡಿಎಸ್ಪಿ ಪೊಲೀಸರಿಗೆ ಆದೇಶ ಹೊರಡಿಸಿದ್ದಾರೆ. ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ನಟಿ ನಯನತಾರಾ ಅವರಿಗೂ ತಲೆನೋವಾಗಿ ಪರಿಣಮಿಸಿದೆ.

    ನಿರ್ಮಾಪಕ ಎಮ್​.ಎನ್.​ ಕುಮಾರ್ ವಿರುದ್ಧ ದೂರು ನೀಡಿದ ಕಿಚ್ಚ ಸುದೀಪ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts