ಸಮಾಜದಲ್ಲಿ ಧರ್ಮದ ಪ್ರಭಾವ ಹೆಚ್ಚಳ : ಗುಲಾಬ್ ಭೂಷಣ ಮುನಿ ಆಶೀರ್ವಚನ

New Project (25)
Published on

ಮೂಡುಬಿದಿರೆ: ಆಚಾರ್ಯ 108 ಗುಲಾಬ್ ಭೂಷಣ ಮುನಿಮಹಾರಾಜರು ಹಾಗೂ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತಾಚರಣೆಯ ಕಳಶ ಸ್ಥಾಪನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬುಧವಾರ ಜೈನಮಠ ಹಾಗೂ ಮಹಾವೀರ ಭವನದಲ್ಲಿ ಆರಂಭಗೊಂಡಿತು.

ಧಾರ್ಮಿಕ ಸಭೆಯಲ್ಲಿ ಮುನಿಮಹಾರಾಜರು ಆಶೀರ್ವಚನ ನೀಡಿ, ಚಾತುರ್ಮಾಸ್ಯದಿಂದ ಭಕ್ತರಿಗೂ ಮುನಿಗಳಿಗೂ ಪ್ರಯೋಜನವಾಗಲಿದೆ. ಚಾತುರ್ಮಾಸ್ಯದ ಅವಧಿಯಲ್ಲಿ ವಿಶೇಷ ಆರಾಧನೆ ಪೂಜೆ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಮುನಿಗಳೇ ನಾಯಕತ್ವ ವಹಿಸಿ ಮುನ್ನಡೆಸುತ್ತಾರೆ. ಭಕ್ತರಿಗೆ ಗುರುಗಳ ಅನುಗ್ರಹ ಲಭಿಸುತ್ತದೆ. ಮುನಿಗಳು ಧಾರ್ಮಿಕ ಅಧ್ಯಯನಕ್ಕೂ ಈ ಅವಧಿ ಪೂರಕವಾಗುತ್ತದೆ. ಸಮಾಜದಲ್ಲಿ ಧರ್ಮದ ಪ್ರಭಾವವಾಗುತ್ತದೆ ಎಂದರು.

ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಮೊಕ್ತೇಸರ ಪಟ್ನಶೆಟ್ಟಿ ಸುಧೇಶ್ ಕುಮಾರ್, ಚೌಟರ ಅರಮನೆಯ ಕುಲದೀಪ್ ಎಂ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಪ್ರಮುಖರಾದ ಸಂಪತ್ ಸಾಮ್ರಾಜ್ಯ, ಕಾರ್ಯಕ್ರಮದ ಸಂಚಾಲಕ ಬಾಹುಬಲಿ ಪ್ರಸಾದ್ ಮತ್ತಿತರ ಗಣ್ಯರು ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net