'ದಪ್ಪವಿದ್ದರೂ ಅದೆಷ್ಟು ಚಂದ ಇದ್ದೀಯ ಗೊತ್ತಾ?' ವಿದ್ಯಾರ್ಥಿನಿಯೊಂದಿಗೆ ಪ್ರಾಧ್ಯಾಪಕ ನಡೆಸಿದ ಚಾಟ್​ ವೈರಲ್!

ಚೊಲಲೆಗೆ
Published on

ಮೀರತ್​: ಶಿಕ್ಷಕರೆಂದರೆ ಗೌರವ, ಭಯ ಭಕ್ತಿ ಎಲ್ಲವೂ ಇರುತ್ತದೆ. ಆದರೆ ಅದೇ ಶಿಕ್ಷಕ ತನ್ನ ಕೆಲಸ ಬಿಟ್ಟು ವಿದ್ಯಾರ್ಥಿಗಳೊಂದಿಗೆ ಬೇರೆಯ ರೀತಿಯಲ್ಲಿ ನಡೆದುಕೊಳ್ಳಲು ಆರಂಭಿಸಿದರೆ? ಪರೀಕ್ಷೆಯೊಂದಕ್ಕೆ ತಯಾರಾಗಲು ಪ್ರಾಧ್ಯಾಪಕರ ಸಹಾಯ ಕೇಳಿದ ವಿದ್ಯಾರ್ಥಿನಿ ಜತೆ ಪ್ರಾಧ್ಯಾಪಕ ಅಸಭ್ಯವಾಗಿ ಮೆಸೇಜ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದೆ.

ಮೀರತ್​ನಲ್ಲಿರುವ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದ (ಸಿಸಿಎಸ್‌ಯು) ಪ್ರಾಧ್ಯಾಪಕರೊಬ್ಬರು ಎಂ.ಫಿಲ್​ ವಿದ್ಯಾರ್ಥಿನಿ ಜತೆ ಮಾಡಿರುವ ವಾಟ್ಸ್​ಆ್ಯಪ್​ ಚಾಟ್​ ವೈರಲ್​ ಆಗಿದೆ. "ನಿನ್ನ ಮೂಗು ಚಂದವಿದೆ. ನಿನ್ನಂತ ಸುಂದರ ಯುವತಿಯೊಂದಿಗಿನ ಸ್ನೇಹವನ್ನು ಯಾರು ನಿರಾಕರಿಸುತ್ತಾರೆ? ನಿನ್ನ ಡಿಪಿ ಚೇಂಜ್​ ಮಾಡು. ನೀನು ಒಂಚೂರು ತೆಳ್ಳಗಾಗಬೇಕು. ನೀನು ದಪ್ಪವಿದ್ದರೂ ತುಂಬಾ ಸುಂದರವಾಗಿ ಕಾಣ್ತೀಯ. ನಿನ್ನ ಉದ್ದ ಮೂಗು ಎಂತರನ್ನಾದರೂ ಆಕರ್ಷಿಸುತ್ತದೆ" ಎಂದು ಪ್ರಾಧ್ಯಾಪಕ ಯುವತಿಗೆ ಮೆಸೇಜ್​ ಮಾಡಿದ್ದಾನೆ.

ಅವಿವಾಹಿತ ಪ್ರಾಧ್ಯಾಪಕ ತನ್ನ ಬಳಿ ಪರೀಕ್ಷೆಗಳಲ್ಲಿ ಪಾಸ್ ಆಗಲು ಸಹಾಯ ಕೇಳಿ ಬರುವ ವಿದ್ಯಾರ್ಥಿನಿಯರೊಂದಿಗೆ ಇದೇ ರೀತಿ ಹಲವು ಬಾರಿ ವರ್ತಿಸಿರುವುದಾಗಿ ಅನೇಕರು ಆರೋಪಿಸಿದ್ದಾರೆ. ಮೀರತ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೆ ಬಾಲಾಜಿ ಅವರಿಗೂ ವಿಚಾರ ತಲುಪಿದ್ದು, ಈ ವಿಚಾರವಾಗಿ ಒಂದು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಅವರು ಸಿಸಿಎಸ್​ಯು ಗೆ ಕೋರಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net