

ನ್ಯೂಯಾರ್ಕ್: ಅಮರಿಕದ ರಿಯಾಲಿಟಿ ಶೋ ತಾರೆ ಹಾಗೂ ಖ್ಯಾತ ಮಾಡೆಲ್ ಕಿಮ್ ಕರದಾಶೈನ್ ಅವರು ಪತಿ ಪಾಪ್ ತಾರೆ ಕಾನೆ ವೆಸ್ಟ್ ಅವರಿಂದ ವಿಚ್ಚೇಧನ ಪಡೆಯಲು ಮುಂದಾಗಿದ್ದಾರೆ. ಈ ಮೂಲಕ 7 ರ್ವದ ದಾಂಪತ್ಯವನ್ನು ಈ ದಂಪತಿಗಳು ಮುರಿದುಕೊಳ್ಳುವುದು ಪಕ್ಕಾ ಆಗಿದೆ.
ಈ ಕುರಿತು ಶನಿವಾರ ವರದಿ ಮಾಡಿರುವ ಅಂತಾರಾಷ್ಟ್ರೀಯ ಮಾಧ್ಯಮಗಳು ಕಳೆದ ಒಂದು ವರ್ಷದಿಂದ ಇಬ್ಬರ ನಡೆವೆ ದಾಂಪತ್ಯ ಜೀವನ ಸರಿ ಇರಲಿಲ್ಲ ಎಂದು ಹೇಳಿವೆ.
2012 ರಲ್ಲಿ ಮದುವೆಯಾಗಿದ್ದ ಈ ತಾರಾ ಜೋಡಿ ಜಗತ್ತಿನ ಟಾಪ್ ಸೆಲಿಬ್ರಿಟಿ ದಂಪತಿಗಳಲ್ಲಿ ಒಂದಾಗಿತ್ತು. ಇದೀಗ ಕಾನೆ ವೆಸ್ಟ್ ಅವರ ಮೇಲೆ ಆರೋಪ ಮಾಡಿರುವ ಕಿಮ್, ಅವನಲ್ಲಿ ಹೊಂದಿಕೊಳ್ಳುವ ಗುಣ ಇಲ್ಲ ಎಂದು ಆರೋಪಿಸಿದ್ದಾಳೆ. ನಾಲ್ವರು ಮಕ್ಕಳ ಹೊಣೆಗಾರಿಕೆಯನ್ನು ಸಮಾನವಾಗಿ ನಿಭಾಯಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಕಿಮ್ ತಮ್ಮ ವಕೀಲರಿಗೆ ಸಲ್ಲಿಸಿರುವ ಪತ್ರದಲ್ಲಿ ತಿಳಿಸಲಾಗಿದೆ.