ಮದುವೆ ಆಗುವ ತಪ್ಪು ಖಂಡಿತಾ ಮಾಡುವುದಿಲ್ಲ … ಚಾರ್ಮಿ ಸ್ಪಷ್ಟನೆ

Charmi Kaur - Final
Published on

ಹೈದರಾಬಾದ್​: ಟಾಲಿವುಡ್​ ನಟಿ ಚಾರ್ಮಿ ಕೌರ್ ಮದುವೆ ಯಾವಾಗ?

ಇಂಥದ್ದೊಂದು ಪ್ರಶ್ನೆ ಹಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ. ತಮ್ಮ ಸಮಕಾಲೀನರೆಲ್ಲರು ಮದುವೆಯಾಗಿ, ಗಂಡ-ಮನೆ-ಮಕ್ಕಳು ಎಂದು ಸೆಟಲ್​ ಆದರೂ, ಚಾರ್ಮಿ ಮಾತ್ರ ಸದ್ಯ ಮದುವೆ ಬೇಡ ಎಂದು ಹೇಳಿಕೊಂಡು ಓಡಾಡುತ್ತಿದ್ದರು.

ಈ ಮಧ್ಯೆ, ಚಾರ್ಮಿ ಮತ್ತು ನಿರ್ದೇಶಕ ಪುರಿ ಜಗನ್ನಾಥ್​ ನಡುವೆ ಏನೋ ಇದೆ ಎಂಬ ಮಾತು ಸಹ ಟಾಲಿವುಡ್​ನಲ್ಲಿ ಕೇಳಿಬಂದಿತ್ತು. ಅದಕ್ಕೆ ಕಾರಣ, ಪುರಿ ನಿರ್ದೇಶನದ ಚಿತ್ರಗಳ ಮೇಲ್ವಿಚಾರಣೆಯನ್ನು ಚಾರ್ಮಿ ವಹಿಸಿಕೊಂಡರು. ಚಿತ್ರ ನಿರ್ಮಾಣ ಹಾಗೂ ಬಿಡುಗಡೆಯಲ್ಲಿ ತೊಡಗಿಸಿಕೊಂಡರು. ಪುರಿ ಮತ್ತು ಚಾರ್ಮಿ ಲಿವ್​ಇನ್​ ರಿಲೇಶನ್​ಶಿಪ್​ನಲ್ಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದವು. ಆದರೆ, ತಾನು ಯಾರ ಜತೆಯೂ ಲಿವ್​ಇನ್​ ರಿಲೇಶನ್​ಶಿಪ್​ನಲ್ಲೂ ಇಲ್ಲ ಮತ್ತು ಯಾರನ್ನು ಮದುವೆಯಾಗುವುದೂ ಇಲ್ಲ ಎಂದು ಚಾರ್ಮಿ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಸದ್ಯ ನನ್ನ ಕೆರಿಯರ್​ ಉತ್ತುಂಗದಲ್ಲಿದೆ ಮತ್ತು ನನ್ನ ಜೀವನದ ಬಗ್ಗೆ ನನ್ನ ಬಹಳ ಹೆಮ್ಮೆ ಇದೆ. ಇಂಥ ಸಂದರ್ಭದಲ್ಲಿ ಮದುವೆಯಾಗುವ ತಪ್ಪನ್ನು ನಾನು ಖಂಡಿತಾ ಮಾಡುವುದಿಲ್ಲ. ನಾನು ಹೇಗಿದ್ದೇನೋ, ಬಹಳ ಸಂತೋಷವಾಗಿದ್ದೇನೆ ಎಂದು ಚಾರ್ಮಿ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net