

ಬೆಂಗಳೂರು: ಚಂದ್ರನಿಂದ ಬಂದ ಮೊದಲ ಚಿತ್ರದ ಕುರಿತಾಗಿ ನಟ ಪ್ರಕಾಶ್ ರಾಜ್ ಮಾಡಿದ್ದ ಟ್ವೀಟ್ ದೇಶಾದ್ಯಂತ ತೀವ್ರ ಅಸಮಾಧಾನದ ಕಿಡಿ ಹೊತ್ತಿಸಿತ್ತು. ವಿರೂಪಗೊಳಿಸಿದ್ದ ಫೋಟೋ ಹಂಚಿಕೊಂಡ ಕಾರಣಕ್ಕೆ ಪ್ರಕಾಶ್ ರಾಜ್ ವಿರುದ್ಧ ತೀವ್ರ ಆಕ್ರೋಶ ಕೂಡ ವ್ಯಕ್ತವಾಗಿದ್ದು, ಇನ್ನೂ ಟ್ರೋಲ್ಗಳು ನಡೆಯುತ್ತಿವೆ.
ಈ ಎಲ್ಲದರ ನಡುವೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರನ ಲೇಟೆಸ್ಟ್ ಫೋಟೋಗಳನ್ನು ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಚಂದ್ರಯಾನ-3 ಮಿಷನ್ ಷೆಡ್ಯೂಲ್ನಲ್ಲಿದೆ, ವ್ಯವಸ್ಥೆಯಲ್ಲಿ ನಿರಂತರ ಪರಿಶೀಲನೆ ನಡೆಯುತ್ತಿದೆ, ಸುಗಮ ಸಾಗುವಿಕೆ ಮುಂದುವರಿದಿದೆ ಎಂದು ಇಸ್ರೋ ಹೇಳಿಕೊಂಡಿದೆ.
ಅಲ್ಲದೆ ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮರಾ(ಎಲ್ಪಿಡಿಸಿ)ದಿಂದ ಆ. 19ರಂದು ಚಂದ್ರನಿಂದ ಸುಮಾರು 70 ಕಿ.ಮೀ. ದೂರದಲ್ಲಿ ತೆಗೆದ ಫೋಟೋಗಳನ್ನು ಕೂಡ ಅದು ಹಂಚಿಕೊಂಡಿದೆ. ಎಲ್ಪಿಡಿಸಿ ಚಿತ್ರಗಳು ಲ್ಯಾಂಡರ್ ಮಾಡ್ಯೂಲ್ಗೆ ಅಕ್ಷಾಂಶ-ರೇಖಾಂಶ ಅನುಸಾರ ತನ್ನ ಸ್ಥಾನ ಹೊಂದಿಸಲು ಸಹಾಯ ಮಾಡುತ್ತಿದೆ ಎಂದೂ ಇಸ್ರೋ ತಿಳಿಸಿದೆ.