ವಿಜ್ಞಾನಿಗಳ ಪರಿಶ್ರಮದ ಶ್ರೇಯಸ್ಸನ್ನು ಪಡೆಯಲು ಪ್ರಧಾನಿ ಮೋದಿ ಮುಂದಾಗಿರುವುದು ದುರದೃಷ್ಟಕರ: ಕಾಂಗ್ರೆಸ್​

Narendra Modi
Published on

ನವದೆಹಲಿ: ಚಂದ್ರಯಾನ-3 ಯಶಸಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಇಸ್ರೋ ಸಂಸ್ಥೆಯ ವಿಜ್ಞಾನಿಗಳ ಸಾಧನೆಯ ಶ್ರೇಯಸ್ಸನ್ನು ಪಡೆಯಲು ಪ್ರಧಾನಿ ಮೋದಿ ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್​ ಆರೋಪಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಎಐಸಿಸಿ ಪ್ರದಾನ ಕಾರ್ಯದರ್ಶಿ ಕೆ.ಸಿ. ವೇಣೂಗೋಪಾಲ್​ ಲಾಂಚಿಂಗ್​ ಪ್ಯಾಡ್​ ನಿರ್ಮಿಸಿದ ಇಂಜಿನಿಯರ್​ಗಳಿಗೆ ಈವರೆಗೂ ಯಾಕೆ ಸಂಬಳ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ದೀರ್ಘ ಕಾಲ ಉಳಿಯಲಿದೆ

ಚಂದ್ರಯಾನ-3ರ ವಿಕ್ರಂ ಲ್ಯಾಂಡರ್​ ಚಂದ್ರನ ಮೇಲೆ ಇಳಿಯುವ ಸಂಭ್ರಮ ಮತ್ತು ಹೆಮ್ಮೆ ನಮ್ಮೊಂದಿಗೆ ದೀರ್ಘ ಕಾಲ ಉಳಿಯಲಿದೆ. ಇಸ್ರೋ ಅಧ್ಯಕ್ಷ ಸೋಮನಾಥನ್​ ಅವರ ನೇತೃತ್ವದಲ್ಲಿ ಇತಿಹಾಸವನ್ನೂ ಸೃಷ್ಸಿಸಿದ್ದೇವೆ. ಆದರೆ, ವಿಜ್ಞಾನಿಗಳ ಸಾಧನೆಯ ಶ್ರೇಯಸ್ಸನ್ನು ಪಡೆಯಲು ಮುಂದಾಗಿರುವ ಪ್ರಧಾನಿ ಮೋದಿ ನಮ್ಮ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದಿದ್ದಾರೆ.

ಚಂದನ ಮೇಲ್ಮೈ ಮೇಲೆ ವಿಕ್ರಂ ಲ್ಯಾಂಡ ಆದ ತಕ್ಷಣ ಪರದೆಯಲ್ಲಿ ಕಾಣಿಸಿಕೊಂಡ ಪ್ರಧಾನಿ ಇಸ್ರೋ ವಿಜ್ಞಾನಿಗಳ ಸಾಧನೆಯ ಶ್ರೇಯಸ್ಸನ್ನು ಪಡೆಯಲು ಮುಂದಾಗಿದ್ದಾರೆ. ಆದರೆ, ಇಸ್ರೋ ವಿಜ್ಞಾನಿಗಳಿಗೆ ನೆರವು ನೀಡುವಲ್ಲಿ ಸರ್ಕಾರ ವಿಫಲವಾಗಿದ್ದು, ಸ್ವತಃ ಪ್ರಧಾನಿ ಮೋದಿ ಅವರೇ ನಮ್ಮ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ದುರದೃಷ್ಟಕರ

ಚಂದ್ರಯಾನ-3ರ ಯೋಜನೆಗೆ ಸಂಬಂಧಿಸಿದಂತೆ ಲಾಂಚ್​ ಪ್ಯಾಡ್​ ನಿರ್ಮಿಸಿದ ಹೆವಿ ಇಂಜಿನಿಯರ್​ ಕಾರ್ಪೋರೇಷನ್ (HEC)ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಂಜಿನಿಯರ್​ಗಳಿಗೆ ಕಳೆದ 17 ತಿಂಗಳಿನಿಂದ ಸಂಬಳವನ್ನು ಏಕೆ ಕೊಟ್ಟಿಲ್ಲ. ಇಂತಹ ಕಾರ್ಯಗಳಿಗೆ ನೀವು ಬಜೆಟ್​ಅನ್ನು ಏಕೆ ಶೇ.32ರಷ್ಟು ಏಕೆ ಕಡಿತಗೊಳಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಇವರು ನಮ್ಮ ದೇಶದ ಹೀರೋಗಳು ಅವರು ಇಡೀ ವಿಶ್ವವನ್ನೇ ನಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಆದರೆ, ವಿಜ್ಞಾನಿಗಳ ಕಠಿಣ ಪರಿಶ್ರಮ ಹಾಗೂ ಪ್ರತಿಭೆಗೆ ನೀವು ಯಾವುದೇ ಗೌರವವನ್ನು ನೀಡುತ್ತಿಲ್ಲ. ವಿಜ್ಞಾನಿಗಳ ಸಾಧನೆಯ ಶ್ರೇಯಸ್ಸನ್ನು ನೀವು ಪಡೆಯಲು ಮುಂದಾಗಿರುವುದು ದುರದೃಷ್ಟಕರ ಎಂದು ಎಐಸಿಸಿ ಪ್ರದಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net