ಚಂದ್ರಬಾಬು ನಾಯ್ಡು ಅರೆಸ್ಟ್; ಗೃಹಬಂಧನಕ್ಕೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

Chandrababu Naidu
Published on

ಅಮರಾವತಿ: ಕೌಶಲ್ಯಭಿವೃದ್ದಿ ನಿಗಮದಲ್ಲಿನ ಬಹುಕೋಟಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗೃಹ ಬಂಧನಕ್ಕೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ವಿಜಯವಾಡದಲ್ಲಿರುವ ರಾಜಮಹೇಂದ್ರವರಂ ಕೇಂದ್ರ ಕಾರಾಗೃಹದಲ್ಲಿರುವ ನಾಯ್ಡು ತಮ್ಮನ್ನು ಗೃಹ ಬಂಧನದಲ್ಲಿರಿಸುಂತೆ ಕೋರಿ ವಕೀಲರ ಮೂಲಕ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರು Z​+ ಕೆಟಗರಿ ಭದ್ರತೆ ಹೊಂದಿರುವ ವ್ಯಕ್ತಿಯಾಗಿರುವ ಕಾರಣ ಅವರನ್ನು ರಾಜಮಹೇಂದ್ರವರಂ ಕಾರಾಗೃಹದ ಬದಲು ಗೃಹ ಬಂಧನಲ್ಲಿರಿಸಬೇಕು ಎಂದು ಸಿದ್ದಾರ್ಥ್​ ಲೂತ್ರಾ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿದ ನ್ಯಾಯಮೂರ್ತಿಗಳು ಚಂದ್ರಬಾಬು ನಾಯ್ಡು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net