

Poverty : ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು ಇಲ್ಲ. ಅರ್ಥಶಾಸ್ತ್ರ, ಸಮಾಜ ವಿಜ್ಞಾನ, ರಾಜಕೀಯ, ರಾಜತಾಂತ್ರಿಕತೆ ಮತ್ತು ಮಿಲಿಟರಿ ಸೈನ್ಸ್ ಸೇರಿದಂತೆ ಅನೇಕ ವಿಷಯಗಳ ಮೇಲೆ ಅಗಾಧ ಜ್ಞಾನವನ್ನು ಹೊಂದಿದ್ದಾರೆ. ಪ್ರತಿಯೊಂದು ವಿಷಯದ ಮೇಲೂ ಚಾಣಕ್ಯರ ದೃಷ್ಟಿಕೋನ ತುಂಬಾ ವಿಶಾಲವಾಗಿದೆ. ಈ ಕಾರಣದಿಂದಲೇ ಮಾನವ ಜೀವನದ ಮೇಲೆ ಪರಿಣಾಮ ಬೀರುವ ಸಣ್ಣ ಮತ್ತು ದೊಡ್ಡ ವಿಚಾರ ಅಥವಾ ವಸ್ತುಗಳ ಮೇಲೆ ಬಹಳ ಸೂಕ್ಷ್ಮವಾಗಿ ಬೆಳಕು ಚೆಲ್ಲುತ್ತಾರೆ. ಚಾಣಕ್ಯನ ನೀತಿಯು ಒಬ್ಬ ವ್ಯಕ್ತಿ ಯಶಸ್ವಿಯಾಗಲು ಪ್ರೇರೇಪಿಸುತ್ತದೆ.
ಚಾಣಕ್ಯ ತತ್ವಗಳನ್ನು ಒಳಗೊಂಡಿರುವ ಚಾಣಕ್ಯ ನೀತಿ ಎಂಬ ಪುಸ್ತಕವನ್ನು ಬರೆಯಲಾಗಿದೆ. ಸಂತೋಷದ ಜೀವನದ ಅನೇಕ ರಹಸ್ಯಗಳನ್ನು ಆ ಪುಸ್ತಕದಲ್ಲಿ ತಿಳಿಸಲಾಗಿದೆ. ಅಲ್ಲದೆ, ಮನುಷ್ಯನಾಗಿ ಜನ್ಮ ತಾಳಿದ ವ್ಯಕ್ತಿ ತನ್ನ ಬದುಕನ್ನು ಸುಧಾರಿಸಿಕೊಳ್ಳಲು ಅನುಸರಿಸಬೇಕಾದ ಧರ್ಮ, ಕರ್ಮ, ಪಾಪ ಹಾಗೂ ಪುಣ್ಯಗಳ ಬಗ್ಗೆ ಚಾಣಕ್ಯನ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಯಶಸ್ಸಿನ ಮಂತ್ರಗಳು ಸಹ ಚಾಣಕ್ಯನ ನೀತಿಯಲ್ಲಿ ಅಡಗಿವೆ.
ಚಾಣಕ್ಯ ನೀತಿಯಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ನಿಮ್ಮ ಜೀವನದಲ್ಲಿ ಎಂದಿಗೂ ಬಡತನ ಎದುರಾಗಬಾರದೆಂದರೆ ನೀವು ಅನುಸರಿಸಬೇಕಾದ ಮುಖ್ಯ ಅಭ್ಯಾಸಗಳು ಯಾವುವು ಎಂಬುದನ್ನು ನಾವು ಈ ಪೋಸ್ಟ್‌ನಲ್ಲಿ ತಿಳಿದುಕೊಳ್ಳೋಣ.
ಚಾಣಕ್ಯನ ಪ್ರಕಾರ, ಯಾವುದೇ ವಿಷಯದ ಬಗ್ಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವಾಗ ಅದರ ಪರಿಣಾಮಗಳ ಬಗ್ಗೆ ಯೋಚಿಸುವ ಅಭ್ಯಾಸ ಹೊಂದಿರುವ ಜನರು ತಮ್ಮ ಜೀವನದಲ್ಲಿ ಎಂದಿಗೂ ಬಡತನವನ್ನು ಎದುರಿಸುವುದಿಲ್ಲ. ಅದೇ ರೀತಿ ಎಷ್ಟೇ ಅಡೆತಡೆಗಳು ಬಂದರೂ ತಮ್ಮ ಗುರಿಯತ್ತ ಮುನ್ನಡೆಯುವ ಗುಣ ಹೊಂದಿರುವವರು ಕೂಡ ಎಂದಿಗೂ ಬಡತನದಲ್ಲಿ ಸಿಲುಕುವುದಿಲ್ಲ.
ಇನ್ನು ಸ್ನೇಹಿತರನ್ನು ಆಯ್ಕೆ ಮಾಡುವಲ್ಲಿ ಬುದ್ಧಿವಂತಿಕೆ ತೋರುವ ವ್ಯಕ್ತಿಯು ಜೀವನದ ಅನೇಕ ಸಮಸ್ಯೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುತ್ತಾರೆ. ಒಳ್ಳೆಯ ಸ್ನೇಹಿತರಿಂದ ಸುತ್ತುವರೆದಿರುವ ವ್ಯಕ್ತಿಯು ಜೀವನದಲ್ಲಿ ತನ್ನ ಗುರಿಗಳನ್ನು ಖಂಡಿತವಾಗಿ ಸಾಧಿಸುತ್ತಾನೆ. ಅವರ ಜೀವನದಲ್ಲಿ ಯಾವುದೇ ಆರ್ಥಿಕ ಸಮಸ್ಯೆಗಳು ಇರುವುದಿಲ್ಲ. ನಾವು ಆಯ್ಕೆ ಮಾಡುವ ಸ್ನೇಹಿತರು ನಮ್ಮನ್ನು ಪ್ರೋತ್ಸಾಹಿಸುವ ಸ್ನೇಹಿತರಾಗಿರಬೇಕು ಮತ್ತು ನಮ್ಮನ್ನು ಹುರಿದುಂಬಿಸಬೇಕು. ನಮ್ಮ ಸಾಧನೆಗಳನ್ನು ನೋಡಿ ಸಂತೋಷಪಡುವವರಾಗಿರಬೇಕು. ಈ ಗುಣಗಳಿವೆಯೇ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ನಾವು ಸ್ನೇಹಿತರನ್ನು ನಿರ್ಧರಿಸಬೇಕು.
ಚಾಣಕ್ಯನ ಪ್ರಕಾರ, ಹೊಸ ವಿಷಯಗಳನ್ನು ಹುಡುಕುವ ಮತ್ತು ಕಲಿಯುವ ಗುಣ ಹೊಂದಿರುವವರ ಜೀವನದಲ್ಲಿ ಬಡತನದ ಮಾತಿಗೆ ಸ್ಥಳವಿರುವುದಿಲ್ಲ. ನಿರಂತರ ಕಲಿಕೆಯೇ ಸುಸ್ಥಿರ ಯಶಸ್ಸಿಗೆ ಮೂಲ ಮಂತ್ರ ಎನ್ನುತ್ತಾರೆ ಚಾಣಕ್ಯ. ಅಂತೆಯೇ, ತಮ್ಮ ರಹಸ್ಯಗಳನ್ನು ರಕ್ಷಿಸುವ ಬಗ್ಗೆ ಹೆಚ್ಚು ಕಾಳಜಿ ವಹಿಸುವವರು ಜೀವನದಲ್ಲಿ ಎಂದಿಗೂ ವೈಫಲ್ಯ ಮತ್ತು ಬಡತನವನ್ನು ಎದುರಿಸುವುದಿಲ್ಲ ಎಂದು ಚಾಣಕ್ಯ ಹೇಳುತ್ತಾರೆ. ನಿಮ್ಮ ರಹಸ್ಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಅಭ್ಯಾಸವು ತುಂಬಾ ಅಪಾಯಕಾರಿ. ಆತ್ಮೀಯ ಸ್ನೇಹಿತರೊಂದಿಗೂ ಸಹ ವೈಯಕ್ತಿಕ ವಿಷಯಗಳನ್ನು ರಹಸ್ಯವಾಗಿಡುವುದು ಅಗತ್ಯ ಎಂದು ಚಾಣಕ್ಯ ಎಚ್ಚರಿಸಿದ್ದಾರೆ.
ಪ್ರತಿಯೊಬ್ಬರ ಜೀವನದಲ್ಲಿ ಸ್ವಯಂ ನಿಯಂತ್ರಣ ಬಹಳ ಮುಖ್ಯ. ಸ್ವಯಂ ನಿಯಂತ್ರಣ ಹೊಂದಿರುವ ವ್ಯಕ್ತಿಯು ಖಂಡಿತವಾಗಿಯೂ ಜೀವನದಲ್ಲಿ ಪ್ರಗತಿಯ ಹಾದಿಯಲ್ಲಿ ಸಾಗುತ್ತಾನೆ ಮತ್ತು ಅವರು ತಮ್ಮ ಜೀವನದಲ್ಲಿ ಬಡತನವನ್ನು ಅಪರೂಪವಾಗಿ ಅನುಭವಿಸುತ್ತಾರೆ ಎಂದು ಚಾಣಕ್ಯ ಹೇಳಿದ್ದಾರೆ. (ಏಜೆನ್ಸೀಸ್)