More

  ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್

  ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಸರ್ಕಾರ ಹಸಿರು ನಿಶಾನೆ ತೋರಿದೆ ಎಂದು ಸಂಸದ ಪಿ.ಸಿ. ಮೋಹನ್ ಅವರು ತಿಳಿಸಿದ್ದಾರೆ.​

  ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪಿ.ಸಿ. ಮೋಹನ್​, ಕಂದಾಯ ಸಚಿವ ಅಶೋಕ್ ಅವರ ಜೊತೆ ಮಾತಾಡಿದ್ದೇನೆ. ಇದೇ 26ನೇ ತಾರೀಖು ಸರ್ಕಾರದಿಂದಲೇ ಅದ್ಧೂರಿಯಾಗಿ ಗಣರಾಜ್ಯೋತ್ಸವ ಆಚರಣೆ ಮಾಡುತ್ತೇವೆ. ಸರ್ಕಾರ ಒಪ್ಪಿಗೆ ನೀಡಿದ್ದು, ಮಕ್ಕಳು, ಪೊಲೀಸ್ ಭದ್ರತೆ ದೃಷ್ಟಿಯಿಂದ ಚೆನ್ನಾಗಿ ಪ್ಲಾನ್ ಮಾಡಲಿದ್ದೇವೆ ಎಂದು ಹೇಳಿದರು.

  ಕಳೆದ ಬಾರಿ ಧ್ವಜಾರೋಹಣವನ್ನು ಯಾರು ಮಾಡಿದರೋ ಅವರೇ ಈ ಸಲ ನಡೆಸಿಕೊಡ್ತಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಅವರಿಗೂ ಸರ್ಕಾರ ಆಚರಣೆಗೆ ಸಿದ್ಧತೆ ನಡೆಸುವಂತೆ ಸೂಚನೆ ನೀಡಿದೆ. ಸರ್ಕಾರದ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳಿಗೆ ಸರ್ಕಾರವೇ ಆಹ್ವಾನ ನೀಡಲಿದೆ. ಈ ಬಗ್ಗೆ ರೂಪುರೂಷೆ ಸಿದ್ಧತೆಗೆ ಜಿಲ್ಲಾಧಿಕಾರಿಗೆ ಒಂದು ದಿನ ಕಾಲವಾಕಾಶ ನೀಡಲಾಗುತ್ತದೆ. ಮಂಗಳವಾರ ನಾನು ಕೂಡ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮಾತನಾಡುತ್ತೇನೆ ಎಂದರು.

  ಸ್ವಾತಂತ್ರ್ಯ ದಿನಾಚರಣೆ ಸಂಧರ್ಭದಲ್ಲಿದ್ದ ಕೆಲವು ನಿರ್ಭಂಧಗಳು ಈ ಬಾರಿ ಇರುವುದಿಲ್ಲ. ಸಂಭ್ರಮದಿಂದ ಕಂದಾಯ ಇಲಾಖೆ ನೇತೃತ್ವದಲ್ಲಿ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಗುತ್ತದೆ. ಈ ಭಾಗದ ಶಾಸಕರಿಗೂ ಸರ್ಕಾರದಿಂದ ಆಹ್ವಾನ ಹೋಗಲಿದೆ. ನನಗೂ ಸರ್ಕಾರದಿಂದಲೇ ಬರಲಿದೆ. ಈ ಬಗ್ಗೆ ಕಂದಾಯ ಸಚಿವರು ಪೋನ್ ಮೂಲಕ ನನಗೆ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.

  ಹಿಂದು ಸಂಘಟನೆಗಳ ಒತ್ತಾಯ
  ಈ ಹಿಂದೆ ಹಿಂದು ಜನಜಾಗೃತಿ ಸಂಘಟನೆ, ಜಿಲ್ಲಾಧಿಕಾರಿಗಳಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರದ ಮೂಲಕ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಮನವಿ ಮಾಡಿತ್ತು. ಹಿಂದೂ ಜನ ಜಾಗೃತಿ ವೇದಿಕೆಯ ಮೋಹನ್ ಗೌಡ ಅವರು ಸರ್ಕಾರವನ್ನು ವಿಡಿಯೋ ಮೂಲಕ ಒತ್ತಾಯ ಮಾಡಿದ್ದರು. ಸ್ವಾತಂತ್ರ್ಯ ದಿನಾಚರಣೆಯಂತೆ ಗಣರಾಜ್ಯೋತ್ಸವ ಕೂಡ ನಡೆಯಬೇಕು ಅಂತ ಮನವಿ ಮಾಡಿದ್ದರು. (ದಿಗ್ವಿಜಯ ನ್ಯೂಸ್​)

  ಕಣ್ಣಿಗೊಂದು ಸವಾಲ್​: ಸಾಧ್ಯವಾದ್ರೆ 10 ಸೆಕೆಂಡ್​ನಲ್ಲಿ ಈ ಫೋಟೋದಲ್ಲಿರೋ ನಾಯಿಯನ್ನು ಪತ್ತೆ ಹಚ್ಚಿ!

  ಗರ್ಭಿಣಿ ಪತ್ನಿಯ ಹತ್ಯೆ; ಏರೋಪ್ಲೇನ್​ನಲ್ಲಿ ಬಯಲಾಯ್ತು ಸಾವಿನ ರಹಸ್ಯ!

  ಮತ್ತೆ ಈ ರೀತಿ ನಡೆದ್ರೆ ನಿನ್ನನ್ನು ಕೊಲ್ತೀನಿ… ಚಿರತೆ ದಾಳಿಗೆ ಮೊಮ್ಮಗ ಬಲಿ, ಅರಣ್ಯಾಧಿಕಾರಿಗೆ ತಾತನ ಎಚ್ಚರಿಕೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts