ಮತ್ತೆ ಈ ರೀತಿ ನಡೆದ್ರೆ ನಿನ್ನನ್ನು ಕೊಲ್ತೀನಿ… ಚಿರತೆ ದಾಳಿಗೆ ಮೊಮ್ಮಗ ಬಲಿ, ಅರಣ್ಯಾಧಿಕಾರಿಗೆ ತಾತನ ಎಚ್ಚರಿಕೆ

ಮೈಸೂರು: ಇದೇ ರೀತಿಯಲ್ಲಿ ಇನ್ನೊಂದು ಪ್ರಕರಣವೇನಾದರೂ ನಡೆದರೆ ನಿನ್ನನ್ನು ಕೊಲೆ ಮಾಡುತ್ತೇನೆ…. ಚಿರತೆ ದಾಳಿಗೆ 11 ವರ್ಷದ ಮೊಮ್ಮಗನನ್ನು ಕಳೆದುಕೊಂಡ ತಾತನೊಬ್ಬ ಅರಣ್ಯಾಧಿಕಾರಿಗೆ ಕೊಟ್ಟ ಎಚ್ಚರಿಕೆ ಇದು. ತಿ.ನರಸೀಪುರ ತಾಲೂಕಿನ ಹೊರಳಹಳ್ಳಿಯಲ್ಲಿ ಚಿರತೆ ದಾಳಿಗೆ ಬಾಲಕನೊಬ್ಬ ಬಲಿಯಾಗಿದ್ದಾನೆ. ಜಯಂತ್ (11) ಮೃತ ಬಾಲಕ. ಅಂಗಡಿಗೆ ಬಿಸ್ಕೇಟ್ ತರಲು ಹೋಗಿದ್ದಾಗ ದಾಳಿ ಮಾಡಿದ ಚಿರತೆ ಬಾಲಕನನ್ನು ಕೊಂದು ದೇಹವನ್ನು ಹೊತ್ತೊಯ್ದಿತ್ತು. ನಿನ್ನೆ (ಜ21) ರಾತ್ರಿ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಘಟನಾ ಸ್ಥಳದಿಂದ ಒಂದು ಕಿ.ಮೀ. ದೂರದಲ್ಲಿ ಬಾಲಕನ … Continue reading ಮತ್ತೆ ಈ ರೀತಿ ನಡೆದ್ರೆ ನಿನ್ನನ್ನು ಕೊಲ್ತೀನಿ… ಚಿರತೆ ದಾಳಿಗೆ ಮೊಮ್ಮಗ ಬಲಿ, ಅರಣ್ಯಾಧಿಕಾರಿಗೆ ತಾತನ ಎಚ್ಚರಿಕೆ