More

    ಮತ್ತೆ ಈ ರೀತಿ ನಡೆದ್ರೆ ನಿನ್ನನ್ನು ಕೊಲ್ತೀನಿ… ಚಿರತೆ ದಾಳಿಗೆ ಮೊಮ್ಮಗ ಬಲಿ, ಅರಣ್ಯಾಧಿಕಾರಿಗೆ ತಾತನ ಎಚ್ಚರಿಕೆ

    ಮೈಸೂರು: ಇದೇ ರೀತಿಯಲ್ಲಿ ಇನ್ನೊಂದು ಪ್ರಕರಣವೇನಾದರೂ ನಡೆದರೆ ನಿನ್ನನ್ನು ಕೊಲೆ ಮಾಡುತ್ತೇನೆ…. ಚಿರತೆ ದಾಳಿಗೆ 11 ವರ್ಷದ ಮೊಮ್ಮಗನನ್ನು ಕಳೆದುಕೊಂಡ ತಾತನೊಬ್ಬ ಅರಣ್ಯಾಧಿಕಾರಿಗೆ ಕೊಟ್ಟ ಎಚ್ಚರಿಕೆ ಇದು.

    ತಿ.ನರಸೀಪುರ ತಾಲೂಕಿನ ಹೊರಳಹಳ್ಳಿಯಲ್ಲಿ ಚಿರತೆ ದಾಳಿಗೆ ಬಾಲಕನೊಬ್ಬ ಬಲಿಯಾಗಿದ್ದಾನೆ. ಜಯಂತ್ (11) ಮೃತ ಬಾಲಕ. ಅಂಗಡಿಗೆ ಬಿಸ್ಕೇಟ್ ತರಲು ಹೋಗಿದ್ದಾಗ ದಾಳಿ ಮಾಡಿದ ಚಿರತೆ ಬಾಲಕನನ್ನು ಕೊಂದು ದೇಹವನ್ನು ಹೊತ್ತೊಯ್ದಿತ್ತು. ನಿನ್ನೆ (ಜ21) ರಾತ್ರಿ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಘಟನಾ ಸ್ಥಳದಿಂದ ಒಂದು ಕಿ.ಮೀ. ದೂರದಲ್ಲಿ ಬಾಲಕನ ಶವ ಪತ್ತೆಯಾಗಿದೆ.

    ಘಟನಾ ಸ್ಥಳಕ್ಕೆ ಬಂದ ಅರಣ್ಯ ಸಂರಕ್ಷಣಧಿಕಾರಿ ಮಾಲತಿ ಪ್ರಿಯ ವಿರುದ್ಧ ಮೃತ ಬಾಲಕನ ತಾತ ಅಪ್ಪಯ್ಯಗೌಡ ಕಿಡಿಕಾರಿದರು. ಚಿರತೆ ಓಡಾಡುತ್ತಿದೆ ಎಂದು ಎರಡು ಬಾರಿ ದೂರು ಕೊಟ್ಟಿದ್ದೇನೆ. ಆದರೂ ಕ್ರಮ ತೆಗೆದುಕೊಂಡಿಲ್ಲ. ಈ ರೀತಿ ಮತ್ತೊಂದು ಪ್ರಕರಣ ನಡೆದರೆ ಕೊಲೆ ಮಾಡುತ್ತೇನೆಂದು ಆಕ್ರೋಶ ಹೊರಹಾಕಿದರು.

    ಇದಷ್ಟೆ ಅಲ್ಲದೆ ಸಂಸದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧವು ಅಸಮಾಧಾನ ಹೊರಹಾಕಿದರು. ನಾಲ್ವರನ್ನು ಬಲಿ ಪಡೆದರು ಒಮ್ಮೆಯೂ ಭೇಟಿ ನೀಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಹಾಗೂ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರು ಇಲ್ಲಿಗೆ ಬರಲು ಇನ್ನೆಷ್ಟು ಜನರ ಬಲಿ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಟಿ. ನರಸೀಪುರ ತಾಲ್ಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರ, ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ಜನರು ತಿರುಗಿ ಬಿದ್ದಿದ್ದಾರೆ. ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ ಎಂದು ಮಾಜಿ ತಾಪಂ ಸದಸ್ಯ ರಮೇಶ್ ಗುಡುಗಿದ್ದಾರೆ. ನರಸೀಪುರದಲ್ಲಿ ದಿನದಿಂದ ದಿನಕ್ಕೆ ಚಿರತೆಗಳು ಮನುಷ್ಯರು, ಸಾಕು ಪ್ರಾಣಿಗಳನ್ನ ಬಲಿ ಪಡೆಯುತ್ತಲೇ ಇದೆ. ಸೌಜನ್ಯಕ್ಕಾದರೂ ಉಸ್ತುವಾರಿ ಸಚಿವರು, ಅರಣ್ಯ ಇಲಾಖೆ ಸಚಿವರು ಭೇಟಿ ನೀಡಿಲ್ಲ. ಚಿರತೆ ದಾಳಿಯಿಂದ ದಿನನಿತ್ಯ ಸಾಯುತ್ತಿರುವ ಬಡ ಜೀವಗಳಿಗೆ ಬೆಲೆಯಿಲ್ಲವೇ? ಸರ್ಕಾರ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ದಾಳಿ ತಪ್ಪಿಸಲು ಯಾವ ಕ್ರಮ ಕೈಗೊಂಡಿದ್ದೀರಾ? ನಿಮ್ಮ ಸುಳ್ಳು ಭರವಸೆಗಳು, ಪರಿಹಾರಗಳು ನಮಗೆ ಬೇಡ. ಚಿರತೆಗಳನ್ನು ಕೊಂದಾದರೂ ತಾಲ್ಲೂಕಿನ ಜನತೆ ನೆಮ್ಮದಿಯಿಂದ ಬದುಕುವ ವಾತಾವರಣ ಸೃಷ್ಟಿ ಮಾಡಿ. ಇಲ್ಲ ಜನತೆಯೇ ಅಧಿಕಾರಿಗಳು, ಸರ್ಕಾರ ಮತ್ತು ಆಡಳಿತದ ವಿರುದ್ಧ ತಿರುಗಿ ಬೀಳ್ತಾರೆ ಎಂದು ಮಾಜಿ ತಾಪಂ ಸದಸ್ಯ ರಮೇಶ್ ಎಚ್ಚರಿಕೆ ನೀಡಿದರು. (ದಿಗ್ವಿಜಯ ನ್ಯೂಸ್​)

    ಟಿ.ನರಸೀಪುರ ತಾಲೂಕಲ್ಲಿ ನಿಲ್ಲದ ಚಿರತೆ ಹಾವಳಿ: ಬಾಲಕನನ್ನು ಎಳೆದೊಯ್ದ ಚಿರತೆ, ಶವ ಪತ್ತೆ, ಗ್ರಾಮಸ್ಥರ ಆಕ್ರೋಶ

    ಬಳ್ಳಾರಿಯಲ್ಲಿ ಟಾಲಿವುಡ್ ಗಾಯಕಿ ಮಂಗ್ಲಿ ಕಾರಿನ ಗ್ಲಾಸ್ ಒಡೆದ ಪುಂಡರು

    ಕಾನ್​ಸ್ಟೆಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದ ಡಾಕ್ಟರೇಟ್​, ಎಲ್​ಎಲ್​ಬಿ, ಎಂಎಸ್ಸಿ, ಎಂ.ಟೆಕ್​ ಪದವೀಧರರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts