ಬಳ್ಳಾರಿಯಲ್ಲಿ ಟಾಲಿವುಡ್ ಗಾಯಕಿ ಮಂಗ್ಲಿ ಕಾರಿನ ಗ್ಲಾಸ್ ಒಡೆದ ಪುಂಡರು

ಬಳ್ಳಾರಿ: ಖ್ಯಾತ ಟಾಲಿವುಡ್ ಗಾಯಕಿ ಮಂಗ್ಲಿ ಕಾರಿನ ಗ್ಲಾಸನ್ನು ಪುಂಡರು ಒಡೆದಿರುವ ಘಟನೆ ನಿನ್ನೆ(ಜ.21) ರಾತ್ರಿ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆದಿದೆ. ಬಳ್ಳಾರಿ ಉತ್ಸವ ಕಾರ್ಯಕ್ರಮದಲ್ಲಿ ಗಾಯಕಿ ಮಂಗ್ಲಿ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಿಗದಿಯಾಗಿತ್ತು. ವೇದಿಕೆ ಮೇಲೆ ಹಾಡುಗಳನ್ನು ಹೇಳಿ ಮರಳುವಾಗ ಸಾಕಷ್ಟು ಸಂಖ್ಯೆಯಲ್ಲಿ ಯುವಕರು ಮಂಗ್ಲಿ ನೋಡಲು ಮುಗಿಬಿದ್ದಿದ್ದಾರೆ. ಅಲ್ಲದೆ ವೇದಿಕೆ ಹಿಂಭಾಗದಲ್ಲಿದ್ದ ಮೇಕಪ್​ ಟೆಂಟ್​ಗೆ ಯುವಕರ ಗುಂಪು ನುಗ್ಗಿದೆ. ಕೂಡಲೇ ಎಚ್ಚೆತ್ತ ಪೊಲೀಸರು ಭದ್ರತೆಯ ದೃಷ್ಟಿಯಿಂದ ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಪೊಲೀಸರು … Continue reading ಬಳ್ಳಾರಿಯಲ್ಲಿ ಟಾಲಿವುಡ್ ಗಾಯಕಿ ಮಂಗ್ಲಿ ಕಾರಿನ ಗ್ಲಾಸ್ ಒಡೆದ ಪುಂಡರು