Champions Trophy 2025; ವಿದೇಶಿ ಆಟಗಾರರನ್ನು ಅಪಹರಿಸಲು ಭಯೋತ್ಪಾದಕರ ಸಂಚು!: ಪಾಕಿಸ್ತಾನ ಗುಪ್ತಚರ ಇಲಾಖೆ ಮಾಹಿತಿ

dk - 2025-02-24T175158.754
Published on

Champions Trophy 2025: ಪ್ರಸ್ತುತ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್​ ಟ್ರೋಫಿ 2025 ಟೂರ್ನಿಯ ವಿದೇಶಿ ಆಟಗಾರರ ಮೇಲೆ ಇಲ್ಲಿನ ''ಸಕ್ರಿಯ ರಹಸ್ಯ ಗುಂಪುಗಳು''(ಲೋಕಲ್​ ಟೆರರಿಸ್ಟ್ಸ್​) ನಿಗಾ ಇರಿಸಿದ್ದು, ಅವರನ್ನು ಅಪಹರಿಸಲು ಸಂಚು ರೂಪಿಸಲಾಗದೆ ಎಂದು ಪಾಕಿಸ್ತಾನ ಗುಪ್ತಚರ ಇಲಾಖೆ ಮಿಲಟರಿ ಪಡೆಗಳಿಗೆ ಮಾಹಿತಿ ನೀಡಿದ್ದು, ದೇಶದಲ್ಲಿ ಹೈ ಆಲರ್ಟ್​ ಘೋಷಿಸಿದೆ.

ತೆಹ್ರಿಕ್-ಇ ತಾಲಿಬಾನ್ ಪಾಕಿಸ್ತಾನ (ಟಿಟಿಪಿ), ಐಸಿಸ್ ಮತ್ತು ಬಲೂಚಿಸ್ತಾನ್ ಮೂಲದ ಇತರ ಗುಂಪುಗಳು ಸೇರಿದಂತೆ ಹಲವಾರು ಭಯೋತ್ಪಾದಕ ಸಂಘಟನೆಗಳ ವಿರುದ್ಧ ಎಚ್ಚರಿಕೆ ನೀಡಲಾಗಿದೆ ಎಂದು ಮೂಲಗಳು ಉಲ್ಲೇಖಿಸಿ ಸುದ್ದಿ ಸಂಸ್ಥೆ ಸಿಎನ್ಎನ್-ನ್ಯೂಸ್ 18 ವರದಿ ಮಾಡಿದೆ.

ಇನ್ನು ಗುಪ್ತಚರ ಎಚ್ಚರಿಕೆ ಹಿನ್ನೆಲೆ, ಪಾಕಿಸ್ತಾನ ಭದ್ರತಾ ಪಡೆಗಳು ಆಟಗಾರರು ಮತ್ತು ಅವರ ಜೊತೆಗಿರುವ ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರೇಂಜರ್‌ಗಳು ಮತ್ತು ಸ್ಥಳೀಯ ಪೊಲೀಸರು ಸೇರಿದಂತೆ ಉನ್ನತ ಮಟ್ಟದ ರಕ್ಷಣಾ ತಂಡಗಳನ್ನು ನಿಯೋಜಿಸಿವೆ.

2009 ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲಿನ ದಾಳಿಯಂತಹ ಘಟನೆಗಳು ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸಲು ದೇಶದ ಭದ್ರತಾ ಸಿದ್ಧತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net