ಅನಂತಕುಮಾರ್​ ಹೆಗಡೆಗೆ ಟಿಕೆಟ್ ಕೊಡಬಾರದು: ಛಲವಾದಿ ನಾರಾಯಣಸ್ವಾಮಿ

WhatsApp Image 2024-03-16 at 4.05.04 PM
Published on

ವಿಜಯಪುರ: ಸಂವಿಧಾನ ತಿದ್ದುಪಡಿ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಸಿಡಿದೆದ್ದ ವಿಧಾನ ಪರಿಷತ್​ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಯಾವುದೇ ಕಾರಣಕ್ಕೂ ಅನಂತಕುಮಾರ ಹೆಗಡೆಗೆ ಟಿಕೆಟ್ ಕೊಡಬಾರದು. ಈ ಬಾರಿ ಟಿಕೆಟ್ ಕೊಡಬಾರದೆಂದು ಹೈಕಮಾಂಡ್‌ಗೆ ಒತ್ತಾಯಿಸುವುದಾಗಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದರು.

"ಸಂವಿಧಾನ ಬದಲಾವಣೆ ಹಾಗೂ ತಿದ್ದುಪಡಿ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡುತ್ತಿರುವ ಹೆಗಡೆ ಅವರ ನಡೆಯನ್ನು ಸಮರ್ಥಿಸಿಕೊಳ್ಳಲು ಆಗಲ್ಲ. ಈಗಾಗಲೇ ಅವರ ನಡೆಯನ್ನು ಖಂಡಿಸಿದ್ದೇನೆ. ಅಲ್ಲದೇ, ಅವರಿಗೆ ಈ ಬಾರಿ ಟಿಕೆಟ್ ಕೊಡಬಾರದೆಂದು ಮನವಿ ಕೂಡ ಮಾಡಿಕೊಳ್ಳುವುದಾಗಿ ತಿಳಿಸಿದರು. ಸಂವಿಧಾನ ತಿದ್ದುಪಡಿ ಮಾಡಲು 400ಕ್ಕೂ ಅಧಿಕ ಸ್ಥಾನ ಬೇಕೆಂದು ಅನಂತಕುಮಾರ ಹೆಗಡೆ ಹೇಳುತ್ತಾರೆ. ಸದ್ಯ ಇರುವ ಸ್ಥಾನಗಳೇ ತಿದ್ದುಪಡಿ ಮಾಡಲು ಸಾಕು. ಸಂವಿಧಾನ ಈಗಾಗಲೇ ಸಾಕಷ್ಟು ಬಾರಿ ತಿದ್ದುಪಡಿಯಾಗಿದೆ" ಎಂದರು.

"ಕಾಂಗ್ರೆಸ್ 95ಕ್ಕೂ ಅಧಿಕ ಬಾರಿ ಸಂವಿಧಾನ ತಿದ್ದುಪಡಿ ಮಾಡಿದೆ. ಆಗೆಲ್ಲ ಕಾಂಗ್ರೆಸ್‌ನವರು ಏಕೆ ಸುಮ್ಮನಿದ್ದರು? ರಾಜೀವ್ ಗಾಂಧಿ ಅವರೇ ಸಂವಿಧಾನ ತಿದ್ದುಪಡಿ ಅನಿವಾರ್ಯ ಎಂದಿದ್ದರು. ಅದು ನಿಜ ಸಹ. ಕೆಲವು ತಿದ್ದುಪಡಿ ಮಾಡಲು ಅಭ್ಯಂತರವಿಲ್ಲ. ಆದರೆ, ಯಾರೇ ಆಗಲಿ ಸಂವಿಧಾನ ಬದಲಾವಣೆ ಹೇಳಿಕೆ ನೀಡಿದರೆ ಸಹಿಸಲ್ಲ. ಅದನ್ನು ಖಂಡಿತವಾಗಿ ವಿರೋಧಿಸುವೆ" ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net