Chahal & Dhanashree Divorce?; ವದಂತಿ ನಡುವೆ ಫೋಟೋಗಳು ಡಿಲೀಟ್​​.. ಇನ್​ಸ್ಟಾಗ್ರಾಮ್​​ನಲ್ಲಿ ಪರಸ್ಪರ ಅನ್​ಫಾಲೋ ಮಾಡಿರುವ ದಂಪತಿ

blank

ಮುಂಬೈ: ಕ್ರಿಕೆಟಿಗ ಯುಜುವೇಂದ್ರ ಚಾಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ(Chahal & Dhanashree (Divorce) ನಡುವಿನ ಸಂಬಂಧ ಹದಗೆಟ್ಟಿದೆ ಎಂಬು ಸುದ್ದಿ ಬಹಳ ಕಾಲದಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಚ್ಛೇದನದ ವದಂತಿ ನಡುವೆ ಇಬ್ಬರು ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಮ್​​ನಲ್ಲಿ ಪರಸ್ಪರ ಅನ್​ಫಾಲೋ ಮಾಡಿದ್ದಾರೆ.

blank

ಇದನ್ನು ಓದಿ: ದೆಹಲಿ-ಎನ್‌ಸಿಆರ್​ನಲ್ಲಿ ದಟ್ಟವಾದ ಮಂಜು; ಶೂನ್ಯ ಗೋಚರತೆ.. 200 ವಿಮಾನಗಳ ಮೇಲೆ ಪರಿಣಾಮ, ರೈಲುಗಳು ಸಹ ವಿಳಂಬ | Delhi Dense Fog

ಯುಜುವೇಂದ್ರ ಅವರು ಧನಶ್ರೀ ಅವರೊಂದಿಗಿನ ಎಲ್ಲಾ ಚಿತ್ರಗಳನ್ನು ಡೀಲಿಟ್​ ಮಾಡಿದ್ದಾರೆ. ಧನಶ್ರೀ ಅವರು ಯುಜುವೇಂದ್ರ ಅವರನ್ನು ಅನ್‌ಫಾಲೋ ಮಾಡಿದ್ದಾರೆ ಆದರೆ ಅವರ ಯಾವುದೇ ಫೋಟೋಗಳನ್ನು ತೆಗೆದುಹಾಕಿಲ್ಲ. ಡೈವೋರ್ಸ್ ವದಂತಿ ನಿಜ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ವಿಚ್ಛೇದನ ಅಂತಿಮವಾಗಿದ್ದು ಅದನ್ನು ಅಧಿಕೃತವಾಗಿ ಘೋಷಿಸುವುದೊಂದೆ ಬಾಕಿ ಎಂದು ಹೇಳಲಾಗುತ್ತಿದೆ.

ವಿಚ್ಛೇದನಕ್ಕೆ ನಿಜವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಇಬ್ಬರೂ ಬೇರೆಯಾಗಲು ನಿರ್ಧರಿಸಿದ್ದಾರೆ. 2023 ರಲ್ಲಿ ಧನಶ್ರೀ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿನ ತನ್ನ ಹೆಸರಿನಿಂದ ‘ಚಹಲ್’ ಅನ್ನು ತೆಗೆದುಹಾಕಿದರು. ಆದಾದ ಮರುದಿನ ಯುಜುವೇಂದ್ರ ಜಾಲತಾಣದಲ್ಲಿ ಸ್ಟೋರಿಯ ಪೋಸ್ಟ್​​ವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ‘ಹೊಸ ಜೀವನ ಪ್ರಾರಂಭವಾಗಿದೆ’ ಎಂದು ಬರೆಯಲಾಗಿತ್ತು. ಅಂದಿನಿಂದ ಅವರು ಡಿವೋರ್ಸ್​ ವಿಚಾರ ಎಲ್ಲೆಡೆ ಕೇಳಿಬರುತಿತ್ತು. ಆದರೆ ಆ ಸಮಯದಲ್ಲಿ ಯುಜುವೇಂದ್ರ ಅವರು ಈ ವದಂತಿಗಳನ್ನು ತಳ್ಳಿಹಾಕುವ ಮತ್ತೊಂದು ಸುದೀರ್ಘ ಪೋಸ್ಟ್​ ಅನ್ನು ಶೇರ್​ ಮಾಡಿದ್ದರು. ಇಂತಹ ವದಂತಿಗಳನ್ನು ನಂಬಬೇಡಿ ಮತ್ತು ಹರಡಬೇಡಿ ಎಂದು ಅವರು ತಮ್ಮ ಅಭಿಮಾನಿಗಳಿಗೆ ಹೇಳಿದ್ದರು.

ಯುಜುವೇಂದ್ರ ಮತ್ತು ಧನಶ್ರೀ 11 ಡಿಸೆಂಬರ್ 2020 ರಂದು ವಿವಾಹವಾದರು. ಝಲಕ್ ದಿಖ್ಲಾ ಜಾ 11ರಲ್ಲಿ ಧನಶ್ರೀ ತನ್ನ ಪ್ರೇಮಕಥೆಯ ಬಗ್ಗೆ ಹೇಳಿದ್ದರು. ಲಾಕ್‌ಡೌನ್ ಸಮಯದಲ್ಲಿ ಯಾವುದೇ ಪಂದ್ಯಗಳು ನಡೆಯುತ್ತಿಲ್ಲ ಮತ್ತು ಎಲ್ಲಾ ಕ್ರಿಕೆಟಿಗರು ಮನೆಯಲ್ಲಿ ಕುಳಿತು ಬೇಸರಗೊಳ್ಳುತ್ತಿದ್ದರು. ಆ ಸಮಯದಲ್ಲಿ ಒಂದು ದಿನ ಯುಜಿ ನೃತ್ಯ ಕಲಿಯಲು ನಿರ್ಧರಿಸಿ,ಅವರು ನೃತ್ಯ ಕಲಿಯಲು ನನ್ನನ್ನು ಸಂಪರ್ಕಿಸಿದರು. ಅವರು ನನ್ನ ಡ್ಯಾನ್ಸ್ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಿದ್ದರು. ಮೊದಲು ನಾನು ನೃತ್ಯ ಕಲಿಸುತ್ತಿದ್ದೆ. ಆದ್ದರಿಂದ ಅವರ ಕೇಳಿದಾಗ . ನಾನು ಒಪ್ಪಿದೆ ಎಂದು ಹೇಳಿದರು.

ಯುಜುವೇಂದ್ರ ಚಾಹಲ್ ಸದ್ಯ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಅವರು 2024ರ ಟಿ-20 ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ಆದರೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶವನ್ನು ಪಡೆಯಲಿಲ್ಲ. ಅವರು ಜನವರಿ 2023ರಲ್ಲಿ ಭಾರತಕ್ಕಾಗಿ ತಮ್ಮ ಕೊನೆಯ ODI ಮತ್ತು ಆಗಸ್ಟ್ 2023ರಲ್ಲಿ ಅವರ ಕೊನೆಯ T20 ಅನ್ನು ಆಡಿದರು. ಇದಾದ ನಂತರವೂ ಐಪಿಎಲ್ 2025ರ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಅವರನ್ನು 18 ಕೋಟಿ ರೂಪಾಯಿಗೆ ಖರೀದಿಸಿತ್ತು.(ಏಜೆನ್ಸೀಸ್​​)

‘ಮದುವೆ ಸೀರೆ’ ಸೀಕ್ರೆಟ್​​ ಬಿಚ್ಚಿಟ್ಟ ನಟಿ ಕೀರ್ತಿ ಸುರೇಶ್​​​; ಇದು ವಿಶೇಷ & ಅತ್ಯಮೂಲ್ಯ ಎಂದಿದ್ದೇಕೆ ಸೌತ್​ ಬ್ಯೂಟಿ | Keerthy Suresh

Share This Article

ಅಧಿಕ ನೀರು ಕುಡಿಯುವುದರಿಂದ ಈ 6 ದೊಡ್ಡ ಸಮಸ್ಯೆಗಳು ಕಾಡಬಹುದಂತೆ! | Drinking water

Drinking water:ಸಾಮಾನ್ಯವಾಗಿ ನೀರು ಕುಡಿಯವುದರಿಂದ ಅನೇಕ ರೋಗದ ಸಮಸ್ಯೆಗಳು ದೂರುವಾಗುತ್ತದೆ. ಅಲ್ಲದೆ, ಆರೋಗ್ಯಕ್ಕೆ ಊಟ ಎಷ್ಟು…

ಪದೇಪದೆ ವಿವಾಹದ ಪ್ರಸ್ತಾಪಗಳು ಮುರಿದು ಬೀಳುತ್ತಿದೆಯೇ? ಈ ಕ್ರಮಗಳು ಅನುಸರಿಸಿ; ಮದುವೆಯ ಅಡೆತಡೆಗಳನ್ನು ನಿವಾರಿಸಿ | Marriage Proposals

Marriage Proposals : ಜೀವನದ ಅತಿದೊಡ್ಡ ತಿರುವು ಎಂದ್ರೆ ಅದು ಮದುವೆ. ಮದುವೆ ಎಂದ್ರೆ ಎಲ್ಲರಿಗೂ…

ಸ್ನಾಕ್ಸ್​ ತಿನ್ನುವುದರಿಂದಲೂ ತೂಕ ಇಳಿಸಿಕೊಳ್ಳಬಹುದು!: ಈ ಸಿಂಪಲ್​ ಹೆಲ್ತ್​​ ಟಿಪ್ಸ್​ ಫಾಲೋ ಮಾಡಿ.. | Weight Lose

Weight Lose: ಸರಿಯಾದ ಆಯ್ಕೆಗಳೊಂದಿಗೆ ಸ್ನಾಕ್ಸ್ ತಿನ್ನುವುದರಿಂದಲೂ ಕೂಡ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ…