More

    ಟಿವಿ ಶೋಗಳ ಶೂಟಿಂಗ್ ಸುಲಭವಲ್ಲ…ಮನೀಷಾ ರಾಣಿ ಮಾತ್ರವಲ್ಲ, ಈ ಸೆಲೆಬ್ರಿಟಿಗಳೂ ಸೆಟ್​​​​​ನಲ್ಲಿ ಅನಾರೋಗ್ಯಕ್ಕೆ ಒಳಗಾದವರೇ!

    ಮುಂಬೈ: ಟಿವಿ ಸೆಲೆಬ್ರಿಟಿಗಳು ಪ್ರೇಕ್ಷಕರನ್ನು ರಂಜಿಸಲು ತುಂಬಾ ಶ್ರಮಿಸುತ್ತಾರೆ. ಅನೇಕ ಬಾರಿ ಅವರು ತುಂಬಾ ಬ್ಯುಸಿಯಾದಾಗ ಇದು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಪರಿಣಾಮ ಹಲವು ಬಾರಿ ಸೆಟ್‌ನಿಂದ ನೇರವಾಗಿ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚೆಗಷ್ಟೇ ಮನೀಷಾ ರಾಣಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಬಳಿಕ ಇದೀಗ ಕೆಲಸಕ್ಕೆ ಮರಳಿದ್ದಾರೆ. ಆದರಿಂದು ನಾವು ನಿಮಗೆ ಮನಿಷಾ ರಾಣಿ ಮಾತ್ರವಲ್ಲದೆ ಸೆಟ್‌ನಲ್ಲಿ ಆರೋಗ್ಯ ಕೆಡಿಸಿಕೊಂಡಿರುವ ಅನೇಕ ಕಲಾವಿದರ ಮಾಹಿತಿ ನೀಡುತ್ತಿದ್ದೇವೆ ಓದಿ…

    ಮನೀಷಾ ರಾಣಿ
    ಝಲಕ್ ದಿಖ್ಲಾ ಜಾ 11 ರ ಸ್ಪರ್ಧಿಗಳಲ್ಲಿ ಒಬ್ಬರಾದ ಮನೀಷಾ ರಾಣಿ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಅವರು ಕೆಲಸಕ್ಕೆ ಮರಳಿದ್ದಾಳೆ. ಇದೀಗ ಮನೀಷಾ ರಾಣಿ ಅವರ ಇತ್ತೀಚಿನ ವೀಡಿಯೊ ಕಾಣಿಸಿಕೊಂಡಿದ್ದು, ಇದರಲ್ಲಿ ಅವರು ವಿಭಿನ್ನ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಮನೀಷಾ ಅವರ ಉಡುಪಿನ ಬಗ್ಗೆ ಮಾತನಾಡುವುದಾದರೆ ಈ ಉಡುಗೆಯನ್ನು ಕ್ಯಾಸೆಟ್‌ಗಳಿಂದ ಮಾಡಲಾಗಿದೆ. ಈ ಉಡುಗೆ ತುಂಬಾ ವಿಶಿಷ್ಟವಾಗಿ ಕಾಣುತ್ತದೆ. ಹಾಗೆಯೇ ಮನೀಷಾ ಸಂತೋಷವಾಗಿ ಹಾಗೂ ಸುಂದರವಾಗಿ ಕಾಣಿಸುತ್ತಾರೆ.

    ಗೌತಮಿ ಕಪೂರ್
    ಸತತ ಕೆಲಸದಿಂದಾಗಿ ಸೆಟ್‌ನಲ್ಲಿ ಗೌತಮಿ ಕಪೂರ್ ಕೂಡ ಅನಾರೋಗ್ಯಕ್ಕೆ ಒಳಗಾಗಿದ್ದರು. ಗೌತಮಿ ಕಪೂರ್ ತೇರೆ ಶೆಹರ್ ಮೇ ಚಿತ್ರಕ್ಕಾಗಿ ಔಟ್ ಡೋರ್​​​​ ಶೂಟಿಂಗ್​​​​ನಲ್ಲಿದ್ದಾಗ ಅಲ್ಲಿ ಮೂರ್ಛೆ ಹೋದರು. ಈ ಕುರಿತು ಮಾತನಾಡಿದ ಅವರು ನೀವು ದೀರ್ಘಕಾಲ ಕೆಲಸ ಮಾಡಿದರೆ ಇತರ ಹಲವು ಸಂಗತಿಗಳು ಒಟ್ಟಾಗಿ ನಿಮ್ಮನ್ನು ಅನಾರೋಗ್ಯಕ್ಕೆ ಒಳಪಡಿಸುತ್ತವೆ. ಆದರೆ ಸಮಯಕ್ಕೆ ಸರಿಯಾಗಿ ವಿಶ್ರಾಂತಿ ಪಡೆಯುವುದು ಬಹಳ ಮುಖ್ಯ ಎಂಬುದು ದೇಹದ ಬೇಡಿಕೆಯಾಗಿದೆ ಎಂದು ಹೇಳಿದ್ದರು.

    ಟೀನಾ ದತ್ತಾ
    ಈ ಪಟ್ಟಿಯಲ್ಲಿ ನಟಿ ಟೀನಾ ದತ್ತಾ ಅವರ ಹೆಸರೂ ಸೇರಿದೆ. ಹಮ್ ರಹೇ ನಾ ರಹೇ ಹಮ್ ಎಂಬ ಟಿವಿ ಶೋ ಶೂಟಿಂಗ್ ವೇಳೆ ಈ ನಟಿ ಅಸ್ವಸ್ಥರಾಗಿದ್ದರು. ಇದಾದ ನಂತರ ಶೂಟಿಂಗ್ ಕ್ಯಾನ್ಸಲ್ ಮಾಡಬೇಕಾಯಿತು. ನಂತರ ನಟಿ ಚೇತರಿಸಿಕೊಂಡಾಗ, ಅವರು ಕೆಲಸಕ್ಕೆ ಮರಳಿದರು. ಟೀನಾ ತನ್ನ ದೇಹಕ್ಕೆ ವಿಶ್ರಾಂತಿ ನೀಡಿ, ಸರಿಯಾಗಿ ಚೇತರಿಸಿಕೊಂಡ ನಂತರವೇ ಕೆಲಸವನ್ನು ಪ್ರಾರಂಭಿಸಿದರು.

    ನೇಹಾ ಸೋಲಂಕಿ 
    ನೇಹ್ ಸೋಲಂಕಿ ಅವರು ತಿತ್ಲಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಾರ್ಯಕ್ರಮದ ಶೂಟಿಂಗ್ ವೇಳೆ ನೇಹಾ ವೈರಲ್ ಫೀವರ್ ನಿಂದ ಬಳಲುತ್ತಿದ್ದರು. ಶೂಟಿಂಗ್ ವೇಳೆ ಡ್ರಿಪ್ ಕೂಡ ಹಾಕಿಸಿಕೊಂಡಿದ್ದರು. ನಟಿ ಅನಾರೋಗ್ಯದಿಂದ ಮೂರು ದಿನಗಳ ಕಾಲ ಚಿತ್ರೀಕರಣವನ್ನು ನಿಲ್ಲಿಸಬೇಕಾಯಿತು. ನಂತರ ಅವರು ಸಂಪೂರ್ಣವಾಗಿ ಚೇತರಿಸಿಕೊಂಡ ಮೇಲೆ ಮತ್ತೆ ಕೆಲಸ ಪ್ರಾರಂಭಿಸಿದರು.

    ದೀಪಿಕಾ ಕಕ್ಕರ್ 
    ಈ ಪಟ್ಟಿಯಲ್ಲಿ ಖ್ಯಾತ ಕಿರುತೆರೆ ನಟಿ ದೀಪಿಕಾ ಕಕ್ಕರ್ ಹೆಸರೂ ಸೇರಿದೆ. ಟಿವಿ ಶೋ ಕಹಾನ್ ಹಮ್ ಕಹಾನ್ ತುಮ್ ಶೂಟಿಂಗ್ ಸಮಯದಲ್ಲಿ ನಟಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಇದಾದ ಬಳಿಕ ಪತಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯರಿಗೆ ತೋರಿಸಿದ್ದಾರೆ. ಸಂಪೂರ್ಣವಾಗಿ ಚೇತರಿಸಿಕೊಂಡ ನಂತರವೇ ನಟಿ ಕೆಲಸಕ್ಕೆ ಮರಳಿದರು.

    ಶಿವಂಗಿ ಜೋಶಿ 
    ಶಿವಂಗಿ ಜೋಶಿ ಬಗ್ಗೆ ಹೇಳುವುದಾದರೆ, ಶೂಟಿಂಗ್ ಸಮಯದಲ್ಲಿ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ವರದಿಗಳ ಪ್ರಕಾರ, ಪ್ರಸಿದ್ಧ ಟಿವಿ ಶೋ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಔಟ್ ಡೋರ್​​​​ ಶೂಟಿಂಗ್ ಚಿತ್ರೀಕರಣದ ಸಮಯದಲ್ಲಿ ನಟಿ ಅನಾರೋಗ್ಯದಿಂದ ಬಳಲುತ್ತಿದ್ದರು, ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ನಟಿ ಚೇತರಿಸಿಕೊಂಡ ನಂತರವೇ ಕೆಲಸಕ್ಕೆ ಮರಳಿದರು.

    ಹೆಚ್ಚಿದೆ ಡೋಪಮೈನ್ ಫ್ಯಾಶನ್ ಟ್ರೆಂಡ್….ನೀವೂ ಇದನ್ನ ಫಾಲೋ ಮಾಡ್ತೀರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts