More

    ಹೆಚ್ಚಿದೆ ಡೋಪಮೈನ್ ಫ್ಯಾಶನ್ ಟ್ರೆಂಡ್….ನೀವೂ ಇದನ್ನ ಫಾಲೋ ಮಾಡ್ತೀರಾ?

    ಬೆಂಗಳೂರು: ಜಗತ್ತಿನಲ್ಲಿ ಹಲವಾರು ರೀತಿಯ ಫ್ಯಾಷನ್ ಬರುತ್ತಲೇ ಇರುತ್ತದೆ. ಆ ಕಾಲದಲ್ಲಿ ಯಾವ ಡ್ರೆಸ್ ಟ್ರೆಂಡ್ ನಲ್ಲಿರುತ್ತದೋ ಅದೇ ತರಹದ ಡ್ರೆಸ್ ಧರಿಸಲು ಅಥವಾ ಅದೇ ಟ್ರೆಂಡ್ ಫಾಲೋ ಮಾಡಲು ಹೆಚ್ಚಿನವರು ಇಷ್ಟಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಡೋಪಮೈನ್ ಫ್ಯಾಷನ್ ಟ್ರೆಂಡ್​​​ ಕಂಡುಬರುತ್ತಿದೆ. ನಮ್ಮಲ್ಲಿ ಹೆಚ್ಚಿನವರು ಡೋಪಮೈನ್ ಬಗ್ಗೆ ಕೇಳಿರುತ್ತಾರೆ. ಕೆಲವರಿಗೆ ಗೊತ್ತಿರುವುದಿಲ್ಲ. ಅಂದಹಾಗೆ ಈ ಪದದ ಅರ್ಥ ನಮ್ಮ ಸಂತೋಷ ಮತ್ತು ತೃಪ್ತಿಯೊಂದಿಗೆ ಸಂಬಂಧಿಸಿದೆ. ಅಂದರೆ ಇದು ನಮ್ಮ ಮನಸ್ಥಿತಿ ಮತ್ತು ಭಾವನೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.

    ಡೋಪಮೈನ್ ಫ್ಯಾಷನ್ ಎಂದರೇನು? 
    ಡೋಪಮೈನ್ ಫ್ಯಾಷನ್ ಕೂಡ ಹಾಗೆ. ಇದರರ್ಥ ನೀವು ಧರಿಸುವ ಯಾವುದೇ ಬಣ್ಣದ ಬಟ್ಟೆಗಳು ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತವೆ. ಇವು ಸುಂದರವಾಗಿ ಕಾಣುವಂತೆ ಮಾಡುವುದಲ್ಲದೆ, ಉತ್ತಮ ಭಾವನೆ ಉಂಟು ಮಾಡುತ್ತದೆ. ಅಷ್ಟೇ ಅಲ್ಲ, ಆ ಬಟ್ಟೆಗಳು ನಿಮ್ಮನ್ನು ಚೆನ್ನಾಗಿ ಕಾಣುವಂತೆ ಮಾಡುತ್ತದೆ ಮತ್ತು ಸಂತೋಷವನ್ನು ನೀಡುತ್ತದೆ.

    ಗಾಢ ಬಣ್ಣದ ಬಟ್ಟೆಗಳು 
    ನಿಮ್ಮ ವಾರ್ಡ್​​​​ರೋಬ್​​​​ನಲ್ಲಿ ನೀವು ಗಾಢ ಬಣ್ಣದ ಬಟ್ಟೆಗಳನ್ನು ಸೇರಿಸಿಕೊಳ್ಳಬೇಕು. ಅಂದರೆ ಕೆಂಪು, ಕಿತ್ತಳೆ ಮತ್ತು ಗುಲಾಬಿಯಂತಹ ಬಣ್ಣಗಳ ಬಟ್ಟೆಗಳನ್ನು ಧರಿಸಬೇಕು. ಒಂದು ವೇಳೆ ನೀವು ಅಂತಹ ಬಣ್ಣಗಳನ್ನು ಹೆಚ್ಚು ಇಷ್ಟಪಡದಿದ್ದರೆ ಉತ್ತಮ ಲುಕ್​​​​​ಗೆ ಡಾರ್ಕ್​​​​​​ ಕಲರ್ ಕೈಚೀಲವನ್ನು ಒಯ್ಯಬಹುದು. ಯಾವುದು ನಿಮ್ಮ ಉಡುಪಿಗೆ ಸರಿಹೊಂದುತ್ತದೆ ಇದರೊಂದಿಗೆ ಸ್ಟೈಲಿಶ್ ಕಿವಿಯೋಲೆಗಳನ್ನು ಧರಿಸಿ, ಅದು ನಿಮ್ಮ ನೋಟವನ್ನು ಪೂರ್ಣಗೊಳಿಸುತ್ತದೆ ಮತ್ತು ನಿಮಗೆ ಉತ್ತಮ ಭಾವನೆಯನ್ನು ನೀಡುತ್ತದೆ.

    ವಿಶ್ವಾಸ ಮುಖ್ಯ 
    ಡೋಪಮೈನ್ ಡ್ರೆಸ್ಸಿಂಗ್ ಎಂದರೆ ನೀವು ಧರಿಸುವ ಯಾವುದೇ ದಿರಿಸು ಉತ್ತಮ ಮತ್ತು ಆತ್ಮವಿಶ್ವಾಸದ ಭಾವನೆಯುಂಟು ಮಾಡಬೇಕು. ಜತೆಗೆ ನೀವು ಆರಾಮದಾಯಕವಾದ ಬಟ್ಟೆಗಳನ್ನು ಮಾತ್ರ ಆರಿಸಿ.

    ಪ್ರಿಂಟ್ ಮತ್ತು ಡಿಸೈನ್ 
    ನಿಮ್ಮ ಬಟ್ಟೆಗಳನ್ನು ಆಯ್ಕೆಮಾಡುವಾಗ, ಆಕರ್ಷಕ ಪ್ರಿಂಟ್ ಮತ್ತು ಮಾಡೆಲ್ ಆಯ್ಕೆ ಮಾಡಿಕೊಳ್ಳಿ. ಅದನ್ನು ಧರಿಸಿದ ನಂತರ ನೀವು ಆತ್ಮವಿಶ್ವಾಸ ಮತ್ತು ಉತ್ತಮ ಭಾವನೆಯನ್ನು ಹೊಂದುತ್ತೀರಿ. ಅಂದಹಾಗೆ ಇತ್ತೀಚಿನ ದಿನಗಳಲ್ಲಿ ಹಲವಾರು ರೀತಿಯ ಬಟ್ಟೆಗಳು ಮತ್ತು ವಿನ್ಯಾಸಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

    ‘ನೀವು ನಿಜವಾದ ವಿನ್ನರ್’: ವಿನಯ್ ಪೋಸ್ಟ್​​ಗೆ ಫ್ಯಾನ್ಸ್ ರಿಯಾಕ್ಷನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts