ಮಿಸ್ ಯೂ ಮಾಮ ... ಅಂಬರೀಷ್ ನೆನೆದ ಸುದೀಪ್

Ambarish - Final
Published on

ಇಂದು ‘ರೆಬೆಲ್ ಸ್ಟಾರ್’ ಅಂಬರೀಷ್ ಅವರ ಹುಟ್ಟುಹಬ್ಬ.ಅವರಿದ್ದಿದ್ದರೆ 68 ಪೂರೈಸಿ, 69ಕ್ಕೆ ಕಾಲಿಡುತ್ತಿದ್ದರು. ಪ್ರತಿ ವರ್ಷ ಅಂಬರೀಷ್ ಅವರ ಹುಟ್ಟುಹಬ್ಬ ಎಂದರೆ, ಅವರ ಮುಂದೆ ಅಭಿಮಾನಿಗಳು ರಾತ್ರಿಯಿಂದಲೇ ಜಮಾಯಿಸುತ್ತಿದ್ದರು. ತಮ್ಮ ಮೆಚ್ಚಿನ ‘ಮಂಡ್ಯದ ಗಂಡು’ ಹುಟ್ಟುಹಬ್ಬವನ್ನು ಜೋರಾಗಿ ಆಚರಿಸುತ್ತಿದ್ದರು.

ಆದರೆ, ಅಂಬರೀಷ್ ಈಗಲ್ಲ. ಅವರಿಲ್ಲದ ಎರಡನೆಯ ಹುಟ್ಟುಹಬ್ಬ ಇದು. ಹಾಗಂತ ಅವರ ಅಭಿಮಾನಿಗಳಲ್ಲಿ ಸಂಭ್ರಮ ಕಡಿಮೆಯಾಗಿಲ್ಲ. ಬೆಳಿಗ್ಗೆಯಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಅಂಬರೀಷ್ ಅವರ ಅಭಿಮಾನಿಗಳು, ತಮ್ಮದೇ ರೀತಿಯಲ್ಲಿ ಸ್ಮರಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಸ್ಯಾಂಡಲ್‌ವುಡ್‌ನ ಸೆಲೆಬ್ರಿಟಿಗಳು ಸಹ ಹೊರತಲ್ಲ.

ಸುದೀಪ್, ದರ್ಶನ್, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ, ‘ಜೋಗಿ’ ಪ್ರೇಮ್, ‘ನೆನಪಿರಲಿ’ ಪ್ರೇಮ್ ಸೇರಿದಂತೆ ಹಲವು ಕಲಾವಿದರು ಹಾಗೂ ತಂತ್ರಜ್ಞರು ಅಂಬರೀಷ್ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಸ್ಮರಿಸಿಕೊಂಡಿದ್ದಾರೆ.

‘ಮಿಸ್ ಯೂ ಮಾಮ ...’ ಎಂದು ಸುದೀಪ್ ಪೋಸ್ಟ್ ಹಾಕಿದರೆ, ‘ನಮ್ಮೆಲ್ಲರ ಮನಸ್ಸಿನಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿದಿರುವ ನಮ್ಮೆಲ್ಲರ ಪ್ರೀತಿಯ ಸೀನಿಯರ್ ರೆಬೆಲ್ ಸ್ಟಾರ್’, ‘ಮಂಡ್ಯದ ಗಂಡು’ ಅಂಬಿ ಅಪ್ಪಾಜಿರವರ ಜನ್ಮದಿನದ ಪ್ರಯುಕ್ತ ‘ರಾಬರ್ಟ್’ ತಂಡದಿಂದ ಹುಟ್ಟುಹಬ್ಬದ ಶುಭಾಶಯಗಳು’ ಎಂದು ತಂಡದ ಪರವಾಗಿ ಪೋಸ್ಟ್ ಹಾಕಿದ್ದಾರೆ.

‘ಆಸೆಗಳು ಮಹಾಪೂರ, ನಿನ್ನಂತೆ ಮತ್ತೊಬ್ಬ ಹುಟ್ಟಲಾರ, ನೀ ಎಂದಿಗೂ ಅಮರ, ಹೇ ಜಲೀಲ ನೀ ಎಂದಿಗೂ ಅಮರ ...’ ಎಂದು ಪ್ರೇಮ್ ಬರೆದುಕೊಂಡರೆ, ‘ಲವ್ ಯೂ ಲಾಟ್ಸ್ ಅಂಕಲ್’ ಎಂದು ಧ್ರುವ ಸರ್ಜಾ ಶುಭ ಹಾರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net