ಕಾರ್ಗಿಲ್ ಹುತಾತ್ಮ ಯೋಧರ ಧೈರ್ಯ ಮತ್ತು ತ್ಯಾಗವನ್ನು ಸ್ಮರಿಸಿದ CDS ಅನಿಲ್​ ಚೌಹಾಣ್​​!Kargil Vijay Diwas

ANIL CHOUHAN
Published on

Kargil Vijay Diwas: 1999ರ ಕಾರ್ಗಿಲ್​ ಯುದ್ದದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ವೀರರಿಗೆ ಹಾಗೂ ಅವರ ಕುಟುಂಬದವರಿಗೆ ಕಾರ್ಗಿಲ್​ ವಿಜಯ ದಿವಾಸ್​ ದಿನದಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್​ ಚೌಹಾಣ್​​ ಅವರು​ ಗೌರವ ಸಲ್ಲಿಸಿದ್ದಾರೆ.

ಈ ಕುರಿತು ಎಕ್ಸ್​​​ನಲ್ಲಿ ಹಂಚಿಕೊಂಡಿರುವ ಅನಿಲ್​ ಚೌಹಾಣ್​​, ''ಭಾರತೀಯ ಸಶಸ್ತ್ರ ಪಡೆಗಳ ಎಲ್ಲಾ ಶ್ರೇಣಿಯ ಮಾಜಿ ಸೈನಿಕರು, ವೀರ ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಅವರು ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದ್ದಾರೆ''.

ಕಾರ್ಗಿಲ್ ವಿಜಯ್ ದಿವಾಸದಂದು ನಮ್ಮ ಧೈರ್ಯಶಾಲಿ ವೀರರಿಗೆ ನಮನಗಳು.. ನಿಮ್ಮ ಅದಮ್ಯ ಧೈರ್ಯ ಮತ್ತು ತ್ಯಾಗ ನಮಗೆ ಶಾಶ್ವತವಾಗಿ ಸ್ಫೂರ್ತಿ ನೀಡುತ್ತದೆ. ರಾಷ್ಟ್ರಕ್ಕೆ ನಿಮ್ಮ ಸಮರ್ಪಣೆ ಮತ್ತು ನೀವು ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಿರುವುದನ್ನು ನಾವು ಗೌರವಿಸುತ್ತೇವೆ ಎಂದು ಬರೆದುಕೊಂಡಿದೆ.

"ಅಂದು ಯುದ್ಧದ ಸಮಯದಲ್ಲಿ ಶತ್ರುಗಳು ಎತ್ತರದ ಪರ್ವತ ಶಿಖರಗಳನ್ನು ಆಕ್ರಮಿಸಿಕೊಂಡು, ಸ್ಪಷ್ಟವಾದ ಅನುಕೂಲವನ್ನು ಹೊಂದಿದ್ದರು. ಆದರೆ, ನಮ್ಮ ರಕ್ಷಣಾ ಪಡೆಗಳು ಅಸಾಧ್ಯವಾದ ಪ್ರತಿಕೂಲ ಪರಿಸ್ಥಿತಿಗಳ ವಿರುದ್ಧ ಹೋರಾಡಿದರು. ತೀವ್ರ ಹವಾಮಾನ ಪರಿಸ್ಥಿತಿಯಲ್ಲಿಯೂ ಶತ್ರುಗಳ ಗುಂಡಿನ ದಾಳಿಯ ನಡುವೆಯೂ ಎದೆಗುಂದದೆ ಪರ್ವತವನ್ನು ಏರಿ ವಿಜಯಶಾಲಿಯಾದರು. ಈ ಕಾರ್ಯಾಚರಣೆಯಲ್ಲಿ ತೀವ್ರ ಅಪಾಯದ ನಡುವೆಯೂ ಧೈರ್ಯದಿಂದ ತಮ್ಮ ಸೈನ್ಯವನ್ನು ವಿಜಯದತ್ತ ಕೊಂಡೊಯ್ಯುದಿದ್ದ ಯುವ ಅಧಿಕಾರಿಗಳ ನಾಯಕತ್ವಕ್ಕೆ ಸಾಕ್ಷಿಯಾಗಿದೆ" ಎಂದು ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net