ಸಿಬಿಎಸ್​ಇ 12ನೇ ತರಗತಿ ಫಲಿತಾಂಶ ಪ್ರಕಟ: ಶೇ.99.37 ರಷ್ಟು ವಿದ್ಯಾರ್ಥಿಗಳು ಪಾಸ್

cbseresult
Published on

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್(ಸಿಬಿಎಸ್​ಇ) 12ನೇ ತರಗತಿಯ ಫಲಿತಾಂಶವು ಪ್ರಕಟಗೊಂಡಿದೆ. ಒಟ್ಟಾರೆ ಶೇ. 99.37 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ರಾಜ್ಯದ 12.96 ಲಕ್ಷ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.

ಒಟ್ಟು 65,184 ವಿದ್ಯಾರ್ಥಿಗಳ ಫಲಿತಾಂಶವನ್ನು, ಪ್ರೊಸೆಸಿಂಗ್​ ಇನ್ನೂ ನಡೆಯುತ್ತಿರುವುದರಿಂದ, ಇಂದು ಪ್ರಕಟಿಸಲಾಗಿಲ್ಲ. ಅವರ ಫಲಿತಾಂಶವನ್ನು ಮಂಡಳಿಯು ಆಗಸ್ಟ್​ 5 ರಂದು ಪ್ರಕಟಿಸವುದು ಎನ್ನಲಾಗಿದೆ.

ಕರೊನಾ ಕಾರಣದಿಂದಾಗಿ ಈ ಬಾರಿ ಪರೀಕ್ಷೆಗಳನ್ನು ನಡೆಸದೆಯೇ, ವಿಶಿಷ್ಟ ಮಾದರಿಯಲ್ಲಿ ಮೌಲ್ಯಾಂಕನ ಮಾಡಲಾಗಿದೆ. ಶಾಲಾ ಆಂತರಿಕ ಅಂಕಗಳು, 11ನೇ ತರಗತಿ ಅಂಕಗಳು ಮತ್ತು 10ನೇ ತರಗತಿ ಬೋರ್ಡ್​ ಪರೀಕ್ಷೆ ಫಲಿತಾಂಶಗಳನ್ನು 40:30:30 ರೇಷಿಯೋದಲ್ಲಿ ಪರಿಗಣಿಸಿ ವಿದ್ಯಾರ್ಥಿಗಳ ಅಂಕಗಳನ್ನು ನಿರ್ಧರಿಸಲಾಗಿದೆ. ಕಳೆದ ವರ್ಷಕ್ಕಿಂತ ಶೇ.10 ರಷ್ಟು ಹೆಚ್ಚು ವಿದ್ಯಾರ್ಥಿಗಳು ಈ ಬಾರಿ ತೇರ್ಗಡೆಯಾಗಿದ್ದಾರೆ. 2020ರಲ್ಲಿ ಶೇ. 88.8 ವಿದ್ಯಾರ್ಥಿಗಳು ಪಾಸಾಗಿದ್ದರೆ, 2019 ರಲ್ಲಿ ಶೇ.83.4 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದರು.

ಫಲಿತಾಂಶ ನೋಡಲು http://cbseresults.nic.in/ ಕ್ಲಿಕ್ಕಿಸಿ

ಅಥವಾ

* ಸಿಬಿಎಸ್‌ಇ ಬೋರ್ಡ್​ ವೆಬ್​ಸೈಟ್​ http://cbse.nic.in ಗೆ ಲಾಗ್ ಇನ್ ಮಾಡಿ.

* ಮುಖಪುಟದಲ್ಲಿ, ಫಲಿತಾಂಶ ಲಿಂಕ್ ಮೇಲೆ ಕ್ಲಿಕ್ಕಿಸಿ

* ರೋಲ್ ನಂಬರ್​, ನೋಂದಣಿ ಸಂಖ್ಯೆ, ಅಥವಾ ಇತರ ಅಗತ್ಯ ವಿವರಗಳೊಂದಿಗೆ ಲಾಗಿನ್ ಮಾಡಿ.

* ಫಲಿತಾಂಶವನ್ನು ಮುಂದಿನ ಪುಟದಲ್ಲಿ ಪ್ರದರ್ಶಿಸಲಾಗುತ್ತದೆ.

* ಪ್ರಿಂಟ್​ಔಟ್​ ಬೇಕಿದ್ದರೆ ತೆಗೆದುಕೊಳ್ಳಬಹುದು.

DigiLocker ಆ್ಯಪ್​ ಇನ್​ಸ್ಟಾಲ್​ ಮಾಡಿಕೊಳ್ಳುವ ಮೂಲಕವೂ ಫಲಿತಾಂಶ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net