ಸಂದೇಶಖಾಲಿ ಇಡಿ ದಾಳಿ ಪ್ರಕರಣ: ಸಿಬಿಐನಿಂದ ಶಾಜಹಾನ್ ಶೇಖ್ ಸಹೋದರ ಸೇರಿ ಮೂವರು ಅರೆಸ್ಟ್​

cbi arrest
Published on

ಕೋಲ್ಕತ್ತಾ: ಸಂದೇಶಖಾಲಿ ಇಡಿ ದಾಳಿ ಪ್ರಕರಣದಲ್ಲಿ ಶಾಜಹಾನ್ ಶೇಖ್ ಸಹೋದರ ಸೇರಿದಂತೆ ಮೂವರನ್ನು ಸಿಬಿಐ ಬಂಧಿಸಿde.

ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳವು ಹೊಸ ಮೂವರು ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳನ್ನು ಮಫುಜರ್ ಮೊಲ್ಲಾ, ಸಿರಾಜುಲ್ ಮೊಲ್ಲಾ ಮತ್ತು ಶೇಖ್ ಅಲೋಮ್ಗೀರ್ ಎಂದು ಗುರುತಿಸಲಾಗಿದೆ.

ಇದಕ್ಕೂ ಮುನ್ನ ಕೇಂದ್ರೀಯ ತನಿಖಾ ದಳ, ಮಾರ್ಚ್ 11 ರಂದು ದಿದರ್ ಬಕ್ಷ್ ಮೊಲ್ಲಾ, ಫಾರುಕ್ ಅಕುಂಜಿ ಮತ್ತು ಜಿಯಾವುದ್ದೀನ್ ಮೊಲ್ಲಾ (ಸರ್ಬೇರಿಯಾ ಪಂಚಾಯತ್ ಪ್ರಧಾನ್) ಬಂಧಿಸಿದ್ದು, ಪ್ರಕರಣದಲ್ಲಿ ಒಟ್ಟು ಆರು ಮಂದಿಯನ್ನು ಸಿಬಿಐ ಬಂಧಿಸಿದಂತಾಗಿದೆ.

ಬಂಧಿತರು ಟಿಎಂಸಿ ಉಚ್ಚಾಟಿತ ನಾಯಕ ಶಹಜಹಾನ್ ಶೇಖ್ ಅವರ ಸಹಚರರು ಎನ್ನಲಾಗಿದೆ. ಇವರು ಇದೇ ಪ್ರಕರಣ ಸಂಬಂಧ ಈ ಹಿಂದೆ ಬಂಧಿತರಾಗಿದ್ದರು. ಮಾರ್ಚ್ 11 ರಂದು ಸಂದೇಶಖಾಲಿಯಲ್ಲಿ ಇಡಿ ಅಧಿಕಾರಿಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಕಲ್ಕತ್ತಾ ಹೈಕೋರ್ಟ್‌ ಆದೇಶಿಸಿದ್ದು, ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.

ಇಡಿ ಅಧಿಕಾರಿಗಳ ಮೇಲಿನ ದಾಳಿಯ ನಂತರ ದಾಖಲಾಗಿರುವ ಎಫ್‌ಐಆರ್‌ನ ತನಿಖೆಯ ಭಾಗವಾಗಿ ಈ ಆರುಮಂದಿಯ ಬಂಧನವಾಗಿದೆ. ಪ್ರಮುಖ ಆರೋಪಿ ಷಹಜಹಾನ್ ಶೇಖ್‌ನ ಆಪ್ತ ಸಹಾಯಕ ಸೇರಿ ಒಟ್ಟು ಒಂಬತ್ತು ಮಂದಿಗೆ ಸಿಬಿಐ ಸಮನ್ಸ್ ನೀಡಿತ್ತು.

ಷಹಜಹಾನ್ ಮೇಲೆ ಭೂಕಬಳಿಕೆ, ಸುಲಿಗೆ ಮತ್ತು ಮಹಿಳೆಯರ ಮೇಲೆ ಮಿತಿಮೀರಿದ ದೌರ್ಜನ್ಯ ಆರೋಪ ಹೊರಿಸಲಾಗಿದೆ.

ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಯಲ್ಲಿ ಮಹಿಳೆಯರು ಷಹಜಹಾನ್ ಮತ್ತು ಅವನ ಸಹಚರರ ಭೂ ಕಬಳಿಕೆ ಮತ್ತು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net