More

    ‘ಯಾವ ಭ್ರಷ್ಟ ವ್ಯಕ್ತಿಯೂ ತಪ್ಪಿಸಿಕೊಳ್ಳುವುದಿಲ್ಲ’ ಬಿಆರ್‌ಎಸ್ ನಾಯಕಿ ಕವಿತಾ ಬಂಧನಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯೆ

    ಹೈದರಾಬಾದ್: ದೇಶದಲ್ಲಿ ಯಾವುದೇ ಭ್ರಷ್ಟ ವ್ಯಕ್ತಿ ತಪ್ಪಿಸಿಕೊಳ್ಳುವುದಿಲ್ಲ. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದು ಇದಕ್ಕೆ ತೆಲಂಗಾಣ ಪ್ರಜೆಗಳು ಸಹ ಬೆಂಬಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.

    ಇದನ್ನೂ ಓದಿ: ಖ್ಯಾತ ಗಾಯಕಿ ಅನುರಾಧಾ ಪೌಡ್ವಾಲ್ ಬಿಜೆಪಿ ಸೇರ್ಪಡೆ!

    ತೆಲಂಗಾಣದ ನಾಗರ್‌ಕರ್ನೂಲ್‌ನಲ್ಲಿ ಶನಿವಾರ ಸಾರ್ವಜನಿಕ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದರು.

    ತೆಲಂಗಾಣದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಆರ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಎರಡು ಪಕ್ಷಗಳು ಜನತೆಯ ಎಲ್ಲ ಕನಸುಗಳನ್ನು ಭಗ್ನಗೊಳಿಸಿವೆ ಎಂದು ಆರೋಪಿಸಿದರು.

    ಬಿಆರ್‌ಎಸ್ ನಾಯಕ ಮತ್ತು ಮಾಜಿ ಸಿಎಂ ಕೆ.ಚಂದ್ರಶೇಖರ ರಾವು ಅವರ ಪುತ್ರಿ ಕೆ.ಕವಿತಾ ಬಂಧನದ ಕುರಿತು ಪ್ರತಿಕ್ರಿಯಿಸಿದರು.

    ಭ್ರಷ್ಟಾಚಾರವನ್ನು ಕಾಂಗ್ರೆಸ್ ಮತ್ತು ಬಿಆರ್‌ಎಸ್ ಪೋಷಿಸುತ್ತಿವೆ ಎಂದ ಪ್ರಧಾನಿ ಮೋದಿ, ರಾಜವಂಶದ ಪಕ್ಷಗಳಲ್ಲಿ ಭ್ರಷ್ಟಾಚಾರದ ಪಾಲುದಾರಿಕೆ ತುಂಬಾ ಪ್ರಬಲವಾಗಿದೆ. ಕಾಂಗ್ರೆಸ್ ಮತ್ತು ಬಿಆರ್‌ಎಸ್ ಭ್ರಷ್ಟಾಚಾರದ ಪಾಲುದಾರರು. 2ಜಿ ಹಗರಣವನ್ನು ಕಾಂಗ್ರೆಸ್ ಮಾಡಿದ್ದರೆ, ಬಿಆರ್‌ಎಸ್ ನೀರಾವರಿಯಲ್ಲಿ ಭ್ರಷ್ಟಾಚಾರ ನಡೆಸಿದೆ. ಎರಡೂ ಪಕ್ಷಗಳು ಭೂ ಮಾಫಿಯಾವನ್ನು ಬೆಂಬಲಿಸುತ್ತವೆ ಎಂದು ಟೀಕಿಸಿದರು.

    ದೇಶದಲ್ಲಿ 25 ಕೋಟಿಗೂ ಹೆಚ್ಚು ಜನರನ್ನು ಬಡತನದಿಂದ ಮುಕ್ತಗೊಳಿಸಲಾಗಿದೆ. ಇದೇ ಬದಲಾವಣೆಯು ರಾಜ್ಯದಲ್ಲೂ ಒಟ್ಟಿಗೆ ತರಬೇಕಾಗಿದೆ. ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಮುನ್ನವೇ ಜನರು ಎನ್‌ಡಿಎ 400 ಸ್ಥಾನಗಳನ್ನು ದಾಟುವ ಬಗ್ಗೆ ತಮ್ಮ ನಿರ್ಧಾರವನ್ನು ನೀಡಿದ್ದಾರೆ ಎಂದು ಮೋದಿ ಹೇಳಿದರು.
    ತೆಲಂಗಾಣ ಜನರು ಮೋದಿಯನ್ನು ಮೂರನೇ ಬಾರಿಗೆ ಗೆಲ್ಲಿಸಲು ನಿರ್ಧರಿಸಿದ್ದಾರೆ ಎಂಬುದನ್ನು ನಾನು ಇಲ್ಲಿ ನೋಡುತ್ತಿದ್ದೇನೆ. ‘ಗರೀಬಿ ಹಠಾವೋ’ ಘೋಷಣೆ ಮಾಡಿರುವುದರಿಂದ ಬಡವರ ಜೀವನದಲ್ಲಿ ಏನಾದರೂ ಬದಲಾವಣೆಯಾಗಿದೆಯೇ ಎಂದು ಕಾಂಗ್ರೆಸ್‌ ವಿರುದ್ಧ ಛಾಟಿ ಬೀಸಿದರು.

    ‘ಸೆಕ್ಸಿ ನನ್ನ ವಿಷಯವಲ್ಲ, ನಾನು ಸುಂದರವಾಗಿಲ್ಲ’: ಹೀಗಂದಿದ್ದೇಕೆ ಸಮಂತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts